ಹಾಸನ: ಜೆಡಿಎಸ್‍ನ ಭದ್ರಕೋಟೆಯಾಗಿರುವ ಆಲೂರು -ಸಕಲೇಶಪುರ (Sakleshpur) ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಫೈಟ್ ಇದೆ. ಮೀಸಲು ಕ್ಷೇತ್ರದಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸದೇ ಇರುವುದು ಹಾಗೂ ಅಭಿವೃದ್ಧಿಗೆ ವಿಷಯವೇ ನಿರ್ಣಾಯಕ ಆಗಲಿದೆ. 2023ರ ವಿಧಾನಸಭಾ ಚುನಾವಣೆಗೆ ರಣಕಣ ಸಿದ್ಧವಾಗಿದ್ದು, ಆಲೂರು -ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಕುತೂಹಲ ಮೂಡಿಸಿದೆ.
ಈ ಕ್ಷೇತ್ರದಲ್ಲಿ 5 ಬಾರಿ ಕಾಂಗ್ರೆಸ್ (Congress), 4 ಬಾರಿ ಜೆಡಿಎಸ್ (JDS), 2 ಬಾರಿ ಬಿಜೆಪಿ (BJP), ತಲಾ 1 ಬಾರಿ ಜನತಾಪಕ್ಷ ಹಾಗೂ ಸ್ವತಂತ್ರರು ಗೆದ್ದಿದ್ದಾರೆ.
Advertisement
Advertisement
ಕಣದಲ್ಲಿರುವ ಅಭ್ಯರ್ಥಿಗಳು:
ಹೆಚ್.ಕೆ.ಕುಮಾರಸ್ವಾಮಿ (ಜೆಡಿಎಸ್)
ಮುರಳಿ ಮೋಹನ್ (ಕಾಂಗ್ರೆಸ್)
ಸಿಮೆಂಟ್ ಮಂಜು (ಬಿಜೆಪಿ)
Advertisement
ಹೆಚ್.ಕೆ.ಕುಮಾರಸ್ವಾಮಿ: ಜೆಡಿಎಸ್ ಅಭ್ಯರ್ಥಿ ಹೆಚ್.ಕೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಸೌಮ್ಯ ಸ್ವಭಾವದ ರಾಜಕಾರಣಿ, ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿದ್ದಾರೆ. ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗುವಲ್ಲಿ ವಿಫಲ, ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಒತ್ತಡ ಹಾಕಿಲ್ಲ, ಮಲೆನಾಡು ಭಾಗದ ಹಿರಿಮೆಗೆ ತಕ್ಕಂತೆ ಕೆಲಸ ಮಾಡದೇ ಇರುವ ವಿಷಯಗಳ ಇವರ ಹಿನ್ನಡೆಗೆ ಕಾರಣವಾಗಬಹುದು.
Advertisement
ಮುರುಳಿ ಮೋಹನ್ : ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಅವರು ಸೌಮ್ಯ ಸ್ವಭಾವದವರಾಗಿದ್ದಾರೆ. ಪಕ್ಷದ ಹಿನ್ನೆಲೆ, ಕೊರೊನಾ ಸಂದರ್ಭದಿಂದಲೂ ಕ್ಷೇತ್ರದಲ್ಲೇ ಓಡಾಡುತ್ತಿರುವುದು ಮುರುಳಿ ಮೋಹನ್ ಅವರ ಧನಾತ್ಮಕ ಅಂಶವಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಬಂಡಾಯದ ಬಿಸಿ ಎದ್ದಿದೆ. ಹೊರಗಿನವರು ಎಂಬ ಅಪವಾದವಿದೆ, ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ
ಸಿಮೆಂಟ್ ಮಂಜು: ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರು ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಹಾಸನ ಶಾಸಕ ಪ್ರೀತಂಗೌಡ ಅವರ ಸಂಪೂರ್ಣ ಬೆಂಬಲ ನೀಡುತ್ತಿರುವುದು ಸಿಮೆಂಟ್ ಮಂಜುಗೆ ಧನಾತ್ಮಕ ಅಂಶವಾಗಿದೆ. ಬಿಜೆಪಿಯ ಹೊಸ ಮುಖವಾಗಿದ್ದು ಇಡೀ ಕ್ಷೇತ್ರವನ್ನು ಸುತ್ತಾಡಿಲ್ಲ ಎಂಬ ಆರೋಪವಿದೆ. ಕ್ಷೇತ್ರದಲ್ಲಿ ಸಂಘಟನೆ ಕೊರತೆಯೂ ಇದೆ.
ಜಾತಿ ಲೆಕ್ಕಾಚಾರ ಏನು?:
ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ 40 ಸಾವಿರ, ಪರಿಶಿಷ್ಟ ಪಂಗಡದ 20 ಸಾವಿರ ಮತದಾರರಿದ್ದಾರೆ. ಉಳಿದಂತೆ ಲಿಂಗಾಯತ ಸಮುದಾಯದ 45,000 ಹಾಗೂ ಒಕ್ಕಲಿಗ ಸಮುದಾಯದ 55,000 ಮತಗಳಿವೆ. 18 ಸಾವಿರ ಮುಸ್ಲಿಂ ಮತಗಳಿವೆ. ಪರಿಶಿಷ್ಟರ ಜೊತೆಗೆ ಲಿಂಗಾಯತ, ಒಕ್ಕಲಿಗ ಹಾಗೂ ಮುಸ್ಲಿಂ ಮತಗಳು ಯಾರ ಪರ ಬೀಳುತ್ತವೆಯೋ ಅವರ ಗೆಲುವು ನಿರಾಯಾಸವಾಗಲಿದೆ. ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಒಟ್ಟು 2,00,649 ಮತದಾರರಿದ್ದಾರೆ. ಇವರಲ್ಲಿ 1,00,449 ಪುರುಷರು, 1,00,197 ಮಹಿಳೆಯರಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?