– ಸಿದ್ದರಾಮಯ್ಯ ಜೊತೆ ಬಹಿರಂಗ ಚರ್ಚೆಗೆ ಸಿದ್ಧ
ಮೈಸೂರು: ವರುಣಾ (Varuna) ಹಾಗೂ ಚಾಮರಾಜನಗರದಲ್ಲಿ (Chamarajanagar) ಸ್ಪರ್ಧಿಸುತ್ತಿರುವುದು ವಿಧಿನಿಯಮ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗನಿಗೆ ಒಂದು ಸೀಟ್ ಕೊಡಿ ನನಗೆ ಯಾವ ಟಾಸ್ಕ್ ಬೇಡ ಅಂತಾ ಹೈಕಮಾಂಡ್‍ಗೆ ಹೇಳಿದ್ದೆ. ಹೈಕಮಾಂಡ್ ಇಲ್ಲ ನೀವು ಹೋಗಿ ಎರಡು ಕಡೆ ಸ್ಪರ್ಧೆ ಮಾಡಿ. ನಿಮ್ಮ ಕೈಯಲ್ಲಿ ಇದು ಸಾಧ್ಯ ಅಂತಾ ಹೇಳಿ ನನಗೆ ಎರಡು ಟಿಕೆಟ್ ಕೊಟ್ಟಿದ್ದಾರೆ. ಇದು ವಿಧಿ ನಿಯಮ ಎಂದು ಹೇಳಿದರು.
Advertisement
Advertisement
ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಅವರಿಂದ ವರುಣಾದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಸಿದ್ದರಾಮಯ್ಯ ಅವರ ಎದುರು ನನ್ನ ಕೂರಿಸಿ. ನಾನು ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಿಮ್ಮ ಜೊತೆ ಹೊರಗಿನಿಂದ ಎಷ್ಟು ಜನ ಬಂದಿದ್ದಾರೆ. ಹಣ ಹಂಚಲು ಯಾರು ಯಾರು ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪಟಾಲಂ ಬಿಟ್ಟು ಕ್ಷೇತ್ರವನ್ನು ನಡೆಸುತ್ತಿದ್ದಿರಿ. ನಾನು ಬೇಡ ನೀವು ಬೇಡ. ನಿಮ್ಮ ಬೆಂಬಲಿಗರು ಬೇಡ. ನನ್ನ ಬೆಂಬಲಿಗರು ಬೇಡ. ಎಲ್ಲರೂ ಕ್ಷೇತ್ರದಿಂದ ಹೊರಗೆ ಉಳಿಯೋಣ. ಜನ ಆಗ ತೀರ್ಮಾನ ಮಾಡುತ್ತಾರೆ. ನಿಮ್ಮದೆ ಆದ ಪಾಳೆಗಾರಿಕೆಯಲ್ಲಿ ಕ್ಷೇತ್ರ ನಡೆಸಿದ್ದೀರಿ. ನಾನು ನಿಮ್ಮ ಬಗ್ಗೆ ಕೆಳ ಮಟ್ಟದಲ್ಲಿ ಮಾತಾಡಲ್ಲ. ಹಾಗಂತ ನಾನು ಹೇಡಿಯಲ್ಲ ಎಂದು ಗುಡುಗಿದರು.
ವೀರಶೈವರು, ಒಕ್ಕಲಿಗರು, ಪ. ಜಾತಿ, ಪ. ಪಂಗಡದ ಮೀಸಲಾತಿ ಮುಟ್ಟಲು ನಿಮಗೆ ಸಾಧ್ಯವಿದೆಯಾ? ಲಿಂಗಾಯತರ ಬಳಿ ಕ್ಷಮೆ ಯಾಕೆ ಈಗ ಕೇಳುತ್ತಿದ್ದೀರಿ ಎಂಬುದು ಜನರಿಗೆ ಗೊತ್ತಿದೆ. ಬಸವಣ್ಣನ ಬಾವುಟ ಹಾಕಿಕೊಂಡು ಈಗ ಪ್ರಚಾರ ಮಾಡುತ್ತಿದ್ದೀರಿ. ಜನ ಇದನ್ನು ನಂಬುತ್ತಾರಾ? ನೀವೇ ದೊಡ್ಡ ನಾಯಕ ಅಂತಿದ್ದೀರಿ. ಈಗ ಯಾಕೆ ಸ್ಟಾರ್‌ಗಳನ್ನು ಕರೆದುಕೊಂಡು ಪ್ರಚಾರ ಮಾಡ್ತಿದ್ದಿರಿ? ಎಲ್ಲಾ ವರ್ಗದ ಜನರಿಗೆ ವಂಚನೆ ಮಾಡಿ ಪೇಪರ್‍ಮೆಂಟ್ ಕೊಟ್ಟು ಇಷ್ಟು ವರ್ಷ ರಾಜಕಾರಣ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ
ವರುಣಾ ಕ್ಷೇತ್ರದ ಅಭಿವೃದ್ಧಿ ನಿಮಗೆ ತೃಪ್ತಿ ಕೊಟ್ಟಿದ್ದಿಯಾ ಹೇಳಿ? ಸಿಎಂ ಆಗಿದ್ದ ನೀವು ವರುಣಾ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಬಹುದಿತ್ತು ಅಷ್ಟು ಅಭಿವೃದ್ಧಿ ಮಾಡಿದ್ದಿರಾ? ಸಿದ್ದರಾಮಯ್ಯ ಅವರೇ ನಿಮ್ಮಂಥ ಅದೃಷ್ಟವಂತರು ಯಾರು ಇಲ್ಲ. ಏನೂ ಕೆಲಸ ಮಾಡದೆ ಇಷ್ಟು ವರ್ಷ ಇಲ್ಲಿ ಗೆದ್ದು ಬಂದು ಅಧಿಕಾರ ಅನುಭವಿಸಿದ್ದಿರಾ. ಸಿದ್ದರಾಮಯ್ಯ ಅವರೇ ಗೋವಿಂದರಾಜ ನಗರ ಕ್ಷೇತ್ರದ ಅಭಿವೃದ್ಧಿ ಹೇಗಿದೆ ನೋಡಿ. ನಾನು ಯಾವತ್ತೂ ಜಾತಿ ಮಾಡಿಲ್ಲ. ನನ್ನ ಜಾತಿಯರು ಅತ್ಯಂತ ಕಡಿಮೆ ಇರುವ ಕ್ಷೇತ್ರದಲ್ಲಿ ನಾನು ಗೆದ್ದು ಬಂದಿದ್ದೇನೆ ಎಂದರು. ಇದನ್ನೂ ಓದಿ: 2 ದಿನವೂ ಕಮಾಲ್ – ಕರ್ನಾಟಕದಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ