ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 145 ಕೋಟಿ ನಗದು, 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ (Size) ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮತದಾನಕ್ಕೆ (Polling) ಒಂದು ದಿನವಷ್ಟೇ ಬಾಕಿಯಿದೆ. ಚುನಾವಣಾ ಆಯೋಗದ (Election Commission) ಹದ್ದಿನ ಕಣ್ಣು ತಪ್ಪಿಸಿ ಅಕ್ರಮಗಳು ಸಾಕಷ್ಟು ನಡೆಯುತ್ತಿವೆ. ಆದರೂ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕಂತೆ ಕಂತೆ ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ಜೊತೆಗೆ ಮದ್ಯ, ಬೆಳ್ಳಿ, ಬಂಗಾರ, ಕುಕ್ಕರ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಈಗಾಗಲೇ ವಶಕ್ಕೆ ಪಡೆದುಕೊಂಡ ವಸ್ತುಗಳನ್ನು 2018ರ ಚುನಾವಣೆಗೆ ಹೋಲಿಸಿದರೇ ಈ ಬಾರಿ ಶೇ. 100ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು
Advertisement
Advertisement
ಚುನಾವಣಾ ಆಯೋಗದ ರಣಬೇಟೆ:
ನಗದು ಸೀಜ್ – 145.46 ಕೋಟಿ ರೂ.
ಉಚಿತ ಕೊಡುಗೆಗಳ ಮೌಲ್ಯ – 24.21 ಕೋಟಿ ರೂ.
ವಶಕ್ಕೆ ಪಡೆದ ಮದ್ಯದ ಮೌಲ್ಯ – 83.66 ಕೋಟಿ ರೂ.
ವಶಕ್ಕೆ ಪಡೆದ ಡ್ರಗ್ಸ್ ಮೌಲ್ಯ – 33.66 ಕೋಟಿ ರೂ.
ಸೀಜ್ ಆದ ಚಿನ್ನಾಭರಣ ಮೌಲ್ಯ – 96.59 ಕೋಟಿ ರೂ.
ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ – 375.60 ಕೋಟಿ ರೂ.
Advertisement
ಜಿಲ್ಲಾವಾರು ಮದ್ಯ, ಹಣ, ಚಿನ್ನ ವಶಕ್ಕೆ ಪಡೆದಿರುವ ಮಾಹಿತಿ ಈ ರೀತಿಯಾಗಿದೆ.
Advertisement
ಶಿವಮೊಗ್ಗ:
ಹಣ ಜಪ್ತಿ: 13,78,72,229 ರೂ.
ಮದ್ಯ ಜಪ್ತಿ: 95,884.27 ಲೀ.
ಚಿನ್ನಾಭರಣ ಜಪ್ತಿ: 9 ಕೆಜಿ, 577ಗ್ರಾಂ
ನೀತಿಸಂಹಿತೆ ಉಲ್ಲಂಘನೆ ಕೇಸು: 8
ಐಟಿ ರೇಡ್ ಕೇಸ್ ಫೈಲ್ : ಇಲ್ಲ
ಬಾಗಲಕೋಟೆ:
ಹಣ ಜಪ್ತಿ: 10,61,00,000 ರೂ.
ಮದ್ಯ ಜಪ್ತಿ: 29,535 ಲೀಟರ್ ಲಿಕ್ಕರ್ ಜಪ್ತಿ (1 ಕೋಟಿ 50 ಲಕ್ಷ ಮೌಲ್ಯ)
ಚಿನ್ನಾಭರಣ ಜಪ್ತಿ: 46,38,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ
ಗಿಫ್ಟ್ ಐಟಮ್ಸ್ ಜಪ್ತಿ: 1,47,00,000 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 72 ಕೇಸ್‍ಗಳು ದಾಖಲಾಗಿವೆ.
ಐಟಿ ರೇಡ್ ಕೇಸ್ : ಹುನಗುಂದ ತಾಲೂಕಿನಲ್ಲಿ ಐಟಿ ರೇಡ್ ಆಗಿತ್ತು. ಕೇಸ್ ದಾಖಲಾಗಿಲ್ಲ.
ಬೀದರ್:
ಹಣ ಜಪ್ತಿ- 9,82,00,000 ರೂ.
ಮದ್ಯ ಜಪ್ತಿ – 72,440 ಲೀ.
ಬೆಳ್ಳಿ ಕಾಯಿನ್ಸ್ ಜಪ್ತಿ – 1 ಕೋಟಿಗೂ ಅಧಿಕ
ನೀತಿಸಂಹಿತೆ ಉಲ್ಲಂಘನೆ ಕೇಸು- 31
ಕೋಲಾರ:
ಹಣ ಜಪ್ತಿ: 5,40,00,000 ರೂ.
ಮದ್ಯ ಜಪ್ತಿ: 96,86,000 ರೂ.
ಚಿನ್ನಾಭರಣ ಇತರೆ ಗಿಫ್ಟ್ ಐಟಂ : 2,34,00,000 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 89
ಐಟಿ ರೈಡ್ ಕೇಸ್ ಫೈಲ್: ಬಂಗಾರಪೇಟೆಯಲ್ಲಿ 4,05,00,000 ನಗದು ಹಾಗೂ ಒಂದು ಕಾರ್‍ನ್ನು ವಶಪಡಿಸಿಕೊಳ್ಳಲಾಗಿದೆ.
ಕಲಬುರಗಿ :
ಹಣ ಜಪ್ತಿ: 5 ಕೋಟಿ ರೂ.
ಮದ್ಯ ಜಪ್ತಿ : ಆಗಿಲ್ಲ
ಚಿನ್ನಾಭರಣ ಜಪ್ತಿ : ಆಗಿಲ್ಲ
ಐಟಿ ರೈಡ್ ಕೇಸ್ ಫೈಲ್: 3 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೂರ್ ಬಾಗ್, ಚಿತ್ತಾಪುರಗಳಲ್ಲಿ ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊಪ್ಪಳ :
ಹಣ ಜಪ್ತಿ: 3,91,40,900 ರೂ.
ಮದ್ಯ ಜಪ್ತಿ: 7,40,000 ರೂ.
ಚಿನ್ನಾಭರಣ ಜಪ್ತಿ: 1.24,088 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 132
ಐಟಿ ರೈಡ್ ಕೇಸ್ ಫೈಲ್ ಆಗಿಲ್ಲ.
ಮಂಡ್ಯ :
ಹಣ ಜಪ್ತಿ: 3,48,48,253 ರೂ.
ಮದ್ಯ ಜಪ್ತಿ: 108531.38 ಲೀ, 2,35,21,991 ರೂ. ಮೌಲ್ಯ
ಡ್ರಗ್ಸ್: 1.805 ಕೆಜಿ, 55,550 ರೂ. ಮೌಲ್ಯ.
ಇತರೆ : 22,557 ಪದಾರ್ಥಗಳು, 24,79,270 ರೂ. ಮೌಲ್ಯ.
ನೀತಿಸಂಹಿತೆ ಉಲ್ಲಂಘನೆ ಕೇಸು:
ಆರಕ್ಷಕ ಠಾಣೆ – 19 ಪ್ರಕರಣಗಳು
ಅಬಕಾರಿ ಇಲಾಖೆ – 1,322 ಪ್ರಕರಣಗಳು (128 ವಾಹನಗಳು ಜಪ್ತಿ)
ಆರ್‍ಟಿಓ – 506 ಪ್ರಕರಣಗಳು (16,50,696 ರೂ. ವಿಧಿಸಿರುವ ದಂಡ)
ಚುನಾವಣಾಧಿಕಾರಿಗಳು – 4 ಪ್ರಕರಣಗಳು
ಬಳ್ಳಾರಿ:
ಹಣ ಜಪ್ತಿ: 1,33,00,000 ರೂ.
ಮದ್ಯ ಜಪ್ತಿ: 16,500 ಲೀಟರ್- 54 ಲಕ್ಷ ಮೌಲ್ಯದ ಮದ್ಯ
ಚಿನ್ನಾಭರಣ ಜಪ್ತಿ: 33 ಲಕ್ಷ ಮೌಲ್ಯದ ಬಂಗಾರ
ನೀತಿಸಂಹಿತೆ ಉಲ್ಲಂಘನೆ ಕೇಸು: 23
ಐಟಿ ರೇಡ್ ಕೇಸ್ ದಾಖಲಾಗಿಲ್ಲ.
ವಿಜಯನಗರ :
ಹಣ ಜಪ್ತಿ: 1.5 ಕೋಟಿ ನಗದು ಸೀಜ್ ಮಾಡಲಾಗಿದೆ
ಮದ್ಯ ಜಪ್ತಿ: 51 ಸಾವಿರ ಲೀ., 3.5 ಕೋಟಿ ರೂ. ಮೌಲ್ಯದ ಲಿಕ್ಕರ್ ಸೀಜ್
ಚಿನ್ನಾಭರಣ ಜಪ್ತಿ: 5.5 ಕೋಟಿ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 1915
ಐಟಿ ರೇಡ್ ಕೇಸ್ ದಾಖಲಾಗಿಲ್ಲ
ವಿಜಯಪುರ :
ಹಣ ಮತ್ತು ವಸ್ತುಗಳ ಜಪ್ತಿ : 2.03 ಕೋಟಿ ರೂ.
ಮದ್ಯ ಜಪ್ತಿ: 45.59 ಲಕ್ಷ ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 29
ಐಟಿ ರೇಡ್ ಕೇಸ್ ಫೈಲ್ : ಇಲ್ಲ
ಚಾಮರಾಜನಗರ :
ಹಣ ಜಪ್ತಿ: 2.7 ಕೋಟಿ ರೂ.
ಮದ್ಯ ಜಪ್ತಿ: 1.28 ಕೋಟಿ ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿ ಸಂಹಿತೆ ಉಲ್ಲಂಘನೆ ಕೇಸು: 12
ಐಟಿ ರೇಡ್ ಕೇಸ್ ಫೈಲ್: ಯಾವುದು ಇಲ್ಲ.
ಚಿಕ್ಕಬಳ್ಳಾಪುರ :
ಹಣ ಜಪ್ತಿ: 24,41,550ರೂ.
ಮದ್ಯ ಜಪ್ತಿ: 71,968 ರೂ.
ಲೀಟರ್ : (1,92,75,033) ಮೌಲ್ಯ
ಚಿನ್ನಾಭರಣ ಜಪ್ತಿ: 5.064 ಕೆಜಿ (2,67,04,469 ಮೌಲ್ಯ)
ನೀತಿಸಂಹಿತೆ ಉಲ್ಲಂಘನೆ ಕೇಸು: 33
ಮತದಾರರಿಗೆ ಹಂಚುತ್ತಿದ್ದ ವಸ್ತುಗಳ ವಶ ಮೌಲ್ಯ- 38,01,250
ಒಟ್ಟು ಮೌಲ್ಯ – 5,27,41,802 ರೂ.
ಚಿಕ್ಕಮಗಳೂರು :
ಹಣ ಜಪ್ತಿ : 3,11,61458 ರೂ.
ಮದ್ಯ ಜಪ್ತಿ : 76,65,414 ರೂ.
ಡ್ರಗ್ಸ್ : 4,84,000 ರೂ.
ಚಿನ್ನಾಭರಣ ಜಪ್ತಿ : 53,41,65,506 ರೂ. ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು : 24
ಐಟಿ ರೇಡ್ ಕೇಸ್ : ಇಲ್ಲ
ಚಿತ್ರದುರ್ಗ :
ಹಣ ಜಪ್ತಿ : 81 ಲಕ್ಷ ರೂ.
ಮದ್ಯ ಜಪ್ತಿ : 50,273 ಲೀಟರ್, 1.16 ಕೋಟಿ ಮೌಲ್ಯ
ಚಿನ್ನಾಭರಣ ಜಪ್ತಿ: 14.84 ಕೆ.ಜಿ. 7.48 ಕೋಟಿ, 10 ಕೆ.ಜಿ. ಬೆಳ್ಳಿ 6.2 ಲಕ್ಷ ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 28
ಐಟಿ ರೇಡ್ ಕೇಸ್ ಫೈಲ್: ಹಿರಿಯೂರು ಕ್ಷೇತ್ರದಲ್ಲಿ ಐಟಿ ದಾಳಿ
ದಾವಣಗೆರೆ :
ಹಣ ಜಪ್ತಿ: 94,74,057 ರೂ.
ಮದ್ಯ ಜಪ್ತಿ: 3,17,77,802 ಮೌಲ್ಯದ 47,420 ಲೀ ಮದ್ಯ
ಚಿನ್ನಾಭರಣ : ಇಲ್ಲ
ಕುಕ್ಕರ್ ಸೇರಿದಂತೆ ವಿವಿಧ ವಸ್ತುಗಳ ಜಪ್ತಿ: 85,00,048 ಮೌಲ್ಯ
ನೀತಿಸಂಹಿತೆ ಉಲ್ಲಂಘನೆ ಕೇಸು: 66 ಕೇಸ್ ದಾಖಲು, 23 ಜನರ ಗಡಿಪಾರು
ಐಟಿ ರೇಡ್ ಕೇಸ್‍ಗಳು ದಾಖಲಾಗಿಲ್ಲ
ಧಾರವಾಡ :
ಹಣ ಜಪ್ತಿ: 1,58,75,000 ರೂ. ನಗದು ಜಪ್ತಿ
ಮದ್ಯ ಜಪ್ತಿ: 1,42,87,000 ಮದ್ಯ ಜಪ್ತಿ
ಮಾದಕವಸ್ತುಗಳು: 81,69,864 ರೂ.
ಚಿನ್ನಾಭರಣ ಜಪ್ತಿ: 5,63,48,000 ಸಾವಿರದ ಚಿನ್ನಾಭರಣ
ನೀತಿಸಂಹಿತೆ ಉಲ್ಲಂಘನೆ ಕೇಸು: 58
ಐಟಿ ರೇಡ್ ಕೇಸ್ ಫೈಲ್: ಒಟ್ಟು 5 ಜನರ ಮೇಲೆ ಆಗಿದೆ. ಕೆಲವರಿಗೆ ನೋಟಿಸ್ ಕೊಡಲಾಗಿದೆ.
ಗದಗ :
ಹಣ ಜಪ್ತಿ: 2,37,72,000 ರೂ. ಅಧಿಕ ಹಣ
ಮದ್ಯ ಜಪ್ತಿ: 43,666,225 ಲೀಟರ್. (98,95,173 ರೂ.)
ಡ್ರಗ್ಸ್: 8.49 ಕೆ.ಜಿ ಡ್ರಗ್ಸ್ (8,30,550 ರೂ.)
ಚಿನ್ನಾಭರಣ, ಇತರೆ ಸಾಮಗ್ರಿಗಳ ಜಪ್ತಿ: 1,67,55,148 ರೂ.
ನೀತಿಸಂಹಿತೆ ಉಲ್ಲಂಘನೆ ಕೇಸು: 68
ಹಾಸನ :
ಹಣ ಜಪ್ತಿ : 1,87,29,430 ರೂ.
ಮದ್ಯ ಜಪ್ತಿ : 29,964 ಲೀಟರ್
ಚಿನ್ನಾಭರಣ ಜಪ್ತಿ : ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು : 1,433
ಹಾವೇರಿ:
ಹಣ ಜಪ್ತಿ: 76,15,364 ರೂ. ನಗದು ವಶ
ಮದ್ಯ ಜಪ್ತಿ: 2,04,92,980 ಮೊತ್ತದ 79,491.25 ಲೀಟರ್ ಲಿಕ್ಕರ್
ಚಿನ್ನಾಭರಣ ಜಪ್ತಿ: 6,93,81,492 ರೂ. ಮೊತ್ತದ 86 ಕೆ.ಜಿ. ಬೆಲೆಬಾಳುವ ಲೋಹಗಳು
ನೀತಿಸಂಹಿತೆ ಉಲ್ಲಂಘನೆ ಕೇಸು: 48 ಎಫ್‍ಐಆರ್
ಐಟಿ ರೈಡ್ ಕೇಸ್ ಫೈಲ್: ಬ್ಯಾಡಗಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 2. ಕೋಟಿ 85 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.
ಉತ್ತರ ಕನ್ನಡ :
ಹಣ ಜಪ್ತಿ- 1,70,93,985 ರೂ.
ಮದ್ಯ ಜಪ್ತಿ- 2,11,13,395 ರೂ. (83,935.802 ಲೀಟರ್)
ಮಾದಕ ವಸ್ತುಗಳ ವಶ – 1,44,000 ರೂ. (5.24 ಕೆಜಿ)
ಚಿನ್ನಾಭರಣ ಜಪ್ತಿ- ಇಲ್ಲ
ವಸ್ತುಗಳ ವಶ- 45,000 ರೂ. (79 ವಸ್ತುಗಳು)
ನೀತಿಸಂಹಿತೆ ಉಲ್ಲಂಘನೆ ಕೇಸು- 35
ಕೊಡಗು :
ಹಣ ಜಪ್ತಿ: 0.2746 ಕೋಟಿ ರೂ.
ಮದ್ಯ ಜಪ್ತಿ: 0.8156 ಕೋಟಿ ರೂ.
ಚಿನ್ನಾಭರಣ ಜಪ್ತಿ: ಯಾವುದೇ ಪ್ರಕರಣ ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 12
ಒಟ್ಟಾರೆ ಸೀಜ್ 1.1264 ಕೋಟಿ
ದಕ್ಷಿಣ ಕನ್ನಡ :
ಹಣ ಜಪ್ತಿ: 1,82,00,000ರೂ.
ಮದ್ಯ ಜಪ್ತಿ: 27,66,000 ರೂ.
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 66
ಐಟಿ ರೇಡ್ ಕೇಸ್ ಫೈಲ್: ಪುತ್ತೂರು ಹಾಗೂ ಮಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಏನು ಸಿಕ್ಕಿಲ್ಲ.
ಉಡುಪಿ :
ಹಣ ಜಪ್ತಿ: 2,14,91,030 ರೂ.
ಮದ್ಯ ಜಪ್ತಿ: 42,312 ಲೀಟರ್ ಮದ್ಯ ವಶ
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು : 741 ಪ್ರಕರಣ
ಐಟಿ ರೇಡ್ ಕೇಸ್ ಫೈಲ್ – ಇಲ್ಲ
ಮೈಸೂರು:
ಹಣ ಜಪ್ತಿ : 2,88,06,934 ರೂಪಾಯಿ
ಮದ್ಯ ಜಪ್ತಿ : 8,83,72,000 ರೂಪಾಯಿ ಮೌಲ್ಯದ ಮದ್ಯ ಜಪ್ತಿ
ಚಿನ್ನಾಭರಣ ಜಪ್ತಿ : ಇಲ್ಲ
ಐಟಿ ರೇಡ್ ಕೇಸ್ – ಎರಡು ಕಡೆ ಐಟಿ ರೈಡ್
ರಾಯಚೂರು :
ಹಣ ಜಪ್ತಿ: 27 ಲಕ್ಷ ರೂ.
ಮದ್ಯ ಜಪ್ತಿ: 1820 ಲೀ
ಚಿನ್ನಾಭರಣ ಜಪ್ತಿ: ಚಿನ್ನ 1.8 ಕೆ.ಜಿ , 22 ಕೆ.ಜಿ ಬೆಳ್ಳಿ
ನೀತಿಸಂಹಿತೆ ಉಲ್ಲಂಘನೆ ಕೇಸು: 28
ರಾಮನಗರ:
ಹಣ ಜಪ್ತಿ: 2.59 ಕೋಟಿ ರೂ.
ಮದ್ಯ ಜಪ್ತಿ: 38450 ಲೀ.
ಗಾಂಜಾ ಜಪ್ತಿ: 4.50 ಕೆ.ಜಿ
ಚಿನ್ನಾಭರಣ ಜಪ್ತಿ: ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು: 55 ಕೇಸ್ ದಾಖಲು.
ರಾಮನಗರದಲ್ಲಿ ಯಾವುದೇ ಐಟಿ ರೇಡ್ ಆಗಿಲ್ಲ
ತುಮಕೂರು :
ಹಣ ಜಪ್ತಿ: 1.89 ಕೋಟಿ ರೂ.
ಮದ್ಯ ಜಪ್ತಿ: 2.94 ಕೋಟಿ ರೂ. ಮೌಲ್ಯದ 90,468 ಲೀಟರ್
ಚಿನ್ನಾಭರಣ ಜಪ್ತಿ: 250 ಗ್ರಾಂ ಚಿನ್ನ
ನೀತಿಸಂಹಿತೆ ಉಲ್ಲಂಘನೆ ಕೇಸು: 66
ಐಟಿ ರೇಡ್ ಕೇಸ್: ಇಲ್ಲ
ಯಾದಗಿರಿ:
ಹಣ ಜಪ್ತಿ- 77.94 ಲಕ್ಷ ರೂ.
ಮದ್ಯ ಜಪ್ತಿ- 8 ಲಕ್ಷ ಮೌಲ್ಯ
ಚಿನ್ನಾಭರಣ ಜಪ್ತಿ- ಇಲ್ಲ
ನೀತಿಸಂಹಿತೆ ಉಲ್ಲಂಘನೆ ಕೇಸು- 39