ಬೆಂಗಳೂರು: ಕಾಂಗ್ರೆಸ್ ಹಣ ಪಡೆದು ಬಿ ಫಾರಂ ವಿತರಣೆ ಮಾಡಿದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ (Election Commission) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹಣ ಪಡೆದು ಬಿ ಫಾರಂ ವಿತರಣೆ ಮಾಡಿದ್ದಾರೆ. ಕಾಂಗ್ರೆಸ್ ಪಾರ್ಟಿ ಬಿ ಫಾರಂಗೆ 2 ಲಕ್ಷ ರೂ. ಸಂಗ್ರಹ ಮಾಡಿರುವ ಬಗ್ಗೆ ಹೇಳಿದ್ದಾರೆ. ಬಿ ಫಾರಂ ಕೊಡುವುದಕ್ಕೆ ಹಣ ಪಡೆಯುವ ಹಾಗಿಲ್ಲ. ಬಿ ಫಾರಂಗೆ ಹಣ ಪಡೆದರೆ ಕಾನೂನು ಬಾಹಿರವಾಗುತ್ತದೆ. ಇದು ಲಂಚದಿಂದ ಕೂಡಿರುತ್ತದೆ ಎಂದು ಆರೋಪಿಸಿದರು.
Advertisement
Advertisement
ಕಾಂಗ್ರೆಸ್ ಬಿ ಫಾರಂಗೆ ಹಣ ಪಡೆದಿರುವುದರ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು. 224 ಅಭ್ಯರ್ಥಿಗಳ ಬಿ ಫಾರಂ ತಿರಸ್ಕರಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶನಿವಾರದ ಒಳಗಡೆ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ ರಾಹುಲ್ ಗಾಂಧಿ
Advertisement
Advertisement
ರಾಜ್ಯ ರಾಜಕಾರಣದಲ್ಲಿ ಚುನಾವಣಾ ರಂಗು ಹೆಚ್ಚಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿ ಅಭ್ಯರ್ಥಿಗಳ ನಾಮಪತ್ರದಲ್ಲಿ ದೋಷ ಕಂಡುಬಂದರೆ ಪ್ರತಿಸ್ಪರ್ಧಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದಾರೆ. ಇದನ್ನೂ ಓದಿ: ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ : BL ಸಂತೋಷ್