ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಉಡುಪಿ (Udupi) ಭೇಟಿಯ ವೇಳೆ ಅಚ್ಚರಿಯ ಘಟನೆ ಒಂದು ನಡೆಯಿತು. ವೇದಿಕೆಯಲ್ಲಿ ನಾನು ಮೀನು (Fish) ಮುಟ್ಟಿದ್ದೇನೆ, ದೇಗುಲದ ಒಳಗೆ ಬರಬಹುದೇ? ಎಂದು ಸುಮಾರು ಹೊತ್ತು ಹೊಸ್ತಿಲ ಹೊರಗೆ ರಾಹುಲ್ ಗಾಂಧಿ ನಿಂತು ಪ್ರಶ್ನೆ ಮಾಡಿದ್ದಾರೆ.
ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ (Temple) ಸಭಾಂಗಣದಲ್ಲಿ ಸಂವಾದದ ವೇಳೆ ರಾಹುಲ್ ಗಾಂಧಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ (Congress) ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟ್ ಆಗಿ ಕೊಟ್ಟಿತ್ತು. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್ ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು.
ಇದಾದ ಬಳಿಕ ನೇರ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ. ಈ ವೇಳೆ ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈ ತೊಳೆದಿಲ್ಲ ಎಂದು ನೀರಿಗಾಗಿ ಹುಡುಕಾಡಿದರು. ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ
ಆದರೂ ರಾಹುಲ್ ಗಾಂಧಿ ಕೆಲಕಾಲ ಹೊಸ್ತಿಲ ಹೊರಗೆ ನಿಂತು ಆಲೋಚನೆ ಮಾಡಿದ್ದಾರೆ. ನೀರು, ನೀರು ಎಂದು ಕೈಕೈ ಉಜ್ಜಿಕೊಂಡಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭಗುಡಿಯ ಪಕ್ಕ ತೆರಳದೇ, ಪ್ರಾಂಗಣದಲ್ಲೇ ನಿಂತು ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅವರು, ಪ್ರಸಾದ ಸ್ವೀಕಾರ ಮಾಡಿದ್ದಾರೆ. ಅಲ್ಲೂ ಪ್ರಸಾದ ಸ್ವೀಕರಿಸಬಹುದೇ ಎಂದು ತಡವರಿಸಿದ್ದಾರೆ.
ಪ್ರಧಾನ ಅರ್ಚಕರು ರಾಹುಲ್ ಗಾಂಧಿ ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯ ಕರುಣಿಸಲಿ. ಸತ್ಯ, ನ್ಯಾಯ, ನೀತಿ, ಧರ್ಮದ ಮೂಲಕ ದೇಶ ರಕ್ಷಣೆ ಮಾಡುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇದೆ. ಭಾರತ ಜೋಡೋ ಎಂಬ ದೊಡ್ಡ ಕಾರ್ಯಕ್ರಮವನ್ನು ತಾವು ಮಾಡಿದ್ದೀರಿ ಎಂದು ದೇವರ ಮುಂದೆ ಪ್ರಾರ್ಥಿಸಿ, ಪ್ರಸಾದವನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಪ್ರಸಾದ ಸ್ವೀಕಾರ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ