ಉಡುಪಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ (BJP) ಬಾವುಟ ಇರಬೇಕು ಎಂದು ಶಾಸಕ ರಘುಪತಿ ಭಟ್ (Raghupati Bhat) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ (Janardhan Reddy) ಪಕ್ಷಕ್ಕೆ ನಾನು ದೇವರಾಣೆಗೂ ಹೋಗುವುದಿಲ್ಲ. ನನ್ನ ಜೊತೆ ಜನ ಇದ್ದಾರೆ ಎಂದ ತಕ್ಷಣ ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಕರೆ ಬಂದಿದೆ, ಆದರೆ ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ರಘುಪತಿ ಭಟ್ರು ಬಿಜೆಪಿ. ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು. ನಾನು ಪಕ್ಷೇತರ ನಿಲ್ಲುತ್ತೇನೆ, ನಿಲ್ಲುವುದಿಲ್ಲ ಎಂದು ಹೇಳಲು ನಾನಿನ್ನು ನಿರ್ಧಾರವೇ ಮಾಡಿಲ್ಲ. ನಾನು ಇನ್ನು ಶಾಕ್‌ನಿಂದ ಹೊರಗೆ ಬಂದಿಲ್ಲ ಎಂದು ಹೇಳಿದರು.
Advertisement
Advertisement
ಯಾವುದೇ ನಿರ್ಧಾರವಾದರೂ ನಾನೇ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಮಾತ್ರ ಪಡೆಯುತ್ತೇನೆ. ನಾನು ಸಭೆ ಸೇರಿಸುತ್ತೇನೆ. ಪಕ್ಷೇತರ ನಿಲ್ಲುತ್ತೇನೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ನನ್ನ ನಿರ್ಧಾರವನ್ನು ನಾನೇ ಮಾಡುತ್ತೇನೆ. ನಾನು ರಾಜಕೀಯದಿಂದ ದೂರ ಹೋಗುವ ವ್ಯಕ್ತಿಯ ಅಲ್ಲ. ಕಾರ್ಯಕರ್ತರ ಎಲ್ಲ ಕಷ್ಟಗಳಿಗೆ ಜೊತೆಯಾಗಿ ನಿಲ್ಲುತ್ತೇನೆ ಎಂದರು.
Advertisement
ನನಗೆ ಬಿಜೆಪಿ (BJP) ಎಲ್ಲವನ್ನೂ ಕೊಟ್ಟಿದೆ. ನಾನೂ ಪಕ್ಷಕ್ಕೆ ಜೀವನ ಮುಡಿಪಾಗಿಟ್ಟಿದ್ದೇನೆ. ಸಂಕಷ್ಟದ ಕಾಲದಲ್ಲಿ ನಾನು ಬೇಕಾಗಿತ್ತು ಈಗ ನಾನು ಬೇಡವಾದೆ. ಈ ಬಾರಿ ಪಕ್ಷ ನನ್ನನ್ನು ನಡೆಸಿಕೊಂಡು ರೀತಿಗೆ ನಾನು ಬಹಳ ನೊಂದುಕೊಂಡಿದ್ದೇನೆ. ನಾನು ಜಾತಿಯಲ್ಲಿ ಬ್ರಾಹ್ಮಣ. ಶಾಸಕನಾಗಿ ಎಂದು ಬ್ರಾಹ್ಮಣನಾಗಿ ನಡೆದುಕೊಂಡಿಲ್ಲ. ನಾನು ಕೆಲಸ ಮಾಡಿದ ಶಾಸಕ ಎಂಬ ಧೈರ್ಯದಲ್ಲಿ ಇದ್ದೆ. ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿ ನಾನು ಬಹಳ ಬೇಸರಗೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಪ್ರಧಾನಿ ನರೇಂದ್ರ ಮೋದಿ (Narendra Modi) ಪಕ್ಷದ ಹಿರಿಯ ಮುಖಂಡರ ಬಗ್ಗೆ ನನಗೆ ಅತೀವವಾದ ಗೌರವವಿದೆ. 15 ವರ್ಷ ಶಾಸಕನಾಗಿದ್ದು ನಾನು ಬೇಡದವನಾಗಿ ಹೋದ್ನಾ?. ನಾನು ಟಿವಿಯಲ್ಲಿ ವಿಚಾರವನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಒಂದು ಫೋನ್ ಕರೆ ಮಾಡಿ ಈ ಕಾರಣಕ್ಕೋಸ್ಕರ ನಿನಗೆ ಟಿಕೆಟ್ ಇಲ್ಲ ಎಂದು ಯಾರೂ ಹೇಳಿಲ್ಲ. ಮುನ್ಸೂಚನೆ ಕೊಟ್ಟಿದ್ರೆ ಈಶ್ವರಪ್ಪ ರೀತಿಯಲ್ಲಿ ರಾಜೀನಾಮೆ ನೀಡುತ್ತಿದ್ದೆ. ನಾನು ವಿಮರ್ಷೆ ಮಾಡಲ್ಲ, ನಿರ್ಧಾರ ಮಾಡಿದವರು ನನಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ
ಯಶ್ ಪಾಲ್ ಸುವರ್ಣ ಯಾರೋ ಬೇರೆ ಯುವಕ ಅಲ್ಲ. ಯಶ್ ಪಾಲ್ ನಮ್ಮದೇ ಯುವಕ. ನಾನೇ ಬೆಳೆಸಿದ ಕಾರ್ಯಕರ್ತ. ಆದರೆ ನನ್ನ ಗಮನಕ್ಕೆ ತಾರದೆ ಅಭ್ಯರ್ಥಿ ಆಯ್ಕೆ ಮಾಡಿದ್ದು ಬೇಸರವಾಗಿದೆ. ಯಶ್ ಪಾಲ್‍ಗೆ (Yashpal Suvarna) ನನ್ನ ಅವಶ್ಯಕತೆ ಇರಬಹುದು, ಅವರ ನಮ್ಮ ಸ್ನೇಹಿತರು. ಆದರೆ ನನ್ನ ಅವಶ್ಯಕತೆ ಪಕ್ಷಕ್ಕೆ ಇಲ್ಲವಾಗಿ ಹೋಯ್ತಲ್ಲ ಎನ್ನುವುದು ಬೇಜಾರು ಎಂದು ಹೇಳಿದರು. ಇದನ್ನೂ ಓದಿ: ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್