ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ತಪ್ಪಿದ ಬೆನ್ನಲ್ಲೇ ರಾಣಿಬೆನ್ನೂರು (Ranebennur) ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ (R Shankar) ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯಲ್ಲಿ (BJP) ಟಿಕೆಟ್ ಭಿನ್ನಮತ ಸ್ಫೋಟ ಬೆನ್ನಲ್ಲೇ ಆರ್. ಶಂಕರ್ ಅವರು ಬೆಂಬಲಿಗರೊಂದಿಗೆ ಬುಧವಾರ ವಿಧಾನಸೌಧಕ್ಕೆ (Vidhana Soudha) ಆಗಮಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ವೇಳೆ ಹೊರಟ್ಟಿ (Basavaraj Horatti) ರಾಜೀನಾಮೆಯನ್ನು ಅಂಗೀಕರಿಸಿದರು.
Advertisement
Advertisement
ರಾಜೀನಾಮೆಗೂ ಮುಂಚಿತವಾಗಿ ಮಾತನಾಡಿದ್ದ ಅವರು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಂತು ಖಚಿತ. ಆದರೆ ಯಾವ ಪಕ್ಷವೋ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ
Advertisement
Advertisement
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ನನ್ನನ್ನ ಪಕ್ಷಕ್ಕೆ ಕರೆದುಕೊಂಡ ಹೋದವರು ಯಾರು ಈಗ ಮಾತಾನಾಡ್ತಿಲ್ಲ. ಕಮಿಷನ್, ಜೂಜು, ಆರೋಪ ಇರೋವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸರ್ಕಾರ ಬರೋಕೆ ಕಾರಣವಾದವನು ನಾನು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನೋ ಸಂದರ್ಭದಲ್ಲಿ ಕೆಲಸ ಮಾಡಿದವನು ನಾನು. ಆದರೆ ಈ ರೀತಿ ನಡೆಸಿಕೊಂಡದ್ದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ