ನಾವು ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ : ಮುಸಲ್ಮಾನರನ್ನು BJPಗೆ ಸ್ವಾಗತಿಸಿದ ಬೊಮ್ಮಾಯಿ

Public TV
1 Min Read
basavaraj bommai 9

ಹಾವೇರಿ : ನೂರಾರು ಮುಸಲ್ಮಾನರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಮ್ಮುಖದಲ್ಲಿ ಬಿಜೆಪಿಯನ್ನು (BJP) ಸೇರ್ಪಡೆಯಾದರು.

ಶಿಗ್ಗಾವಿವಿಧಾನಸಭಾ ಕ್ಷೇತ್ರದ ಬಂಕಾಪುರದಲ್ಲಿ ನೂರಾರು ಮುಸಲ್ಮಾನರನ್ನು ಸಿಎಂ ಬೊಮ್ಮಾಯಿ ಶಾಲು ಹಾಕಿ ಬಿಜೆಪಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ನಮ್ಮ, ನಿಮ್ಮ ಸಂಬಂಧಗಳು ಬಹಳ ಒಳ್ಳೆಯದಾಗಿದೆ. ನಾವೆಲ್ಲರೂ ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ. ಬಂಕಾಪುರದ ಜನರು ನಮ್ಮ ಸಂಬಂಧಗಳಿಗೆ ಬೆಲೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತೇನೆ ಎಂದರು.

bjp flag

ಪಕ್ಷ ಸೇರ್ಪಡೆಯಾದವರು ಇಲ್ಲಿ ಮಾತ್ರ ಬಿಜೆಪಿಯ (BJP) ಪ್ರಚಾರ ಮಾಡದೇ, ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕು. ನಿಮ್ಮ ಅಭಿವೃದ್ಧಿ ಮತ್ತು ಸೇವೆಗೆ ನಾನು ಕಂಕಣಬದ್ಧನಾಗಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ಸಮುದಾಯದ ಸಮಗ್ರ ಅಭಿವೃದ್ಧಿಯನ್ನು ಮಾಡೋಣ. ನಾನು ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ಭೇದ ಭಾವ ಮಾಡಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’

ಶಿಗ್ಗಾಂವಿ, ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಲ್ಲಾ ಹಳ್ಳಿಗಳ ಅಭಿವೃದ್ಧಿ ಮಾಡುತ್ತಿದ್ದೇನೆ. ಈ ಅಭಿವೃದ್ಧಿ ಕಾರ್ಯ ಮುಂದುವರಿಸಿಕೊಂಡು ನಾನು ಹೋಗುತ್ತೇನೆ. ನಿಮಗಮ ಸಹಾಯ, ಸಹಕಾರ ಸದಾ ಇರಲಿ ಎಂದು ಹೇಳಿದರು. ಇದನ್ನೂ ಓದಿ: ಪ್ರೀತಂಗೌಡ ಮಾಡಿರುವ ಕೆಲಸದ ಆಧಾರದ ಒಂದಲ್ಲ 4 ಸೀಟ್ ಗೆಲ್ತೀವಿ: ಅಮಿತ್‌ ಶಾ

Share This Article