ಮೈಸೂರು: ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯೊಬ್ಬರು ಸ್ಪೀಕರ್ (Speaker) ಆಗಿ ಕೆಲಸ ಮಾಡಿದ್ದಾರೆ. ಅವರೇ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಕೆ.ಎಸ್. ನಾಗರತ್ನಮ್ಮ .
ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿಯ ಸಾಹುಕಾರ್ ಕೆ.ಸಿ. ಸುಬ್ಬಣ್ಣ ಅವರ ಧರ್ಮಪತ್ನಿ ನಾಗರತ್ನಮ್ಮ. 1957, 1962, 1967, 1972, 1983, 1985 ಹಾಗೂ 1989 – ಹೀಗೆ 7 ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ (Gundlupet) ಇಂದಿರಾಗಾಂಧಿ, ಗುಂಡ್ಲುಪೇಟೆ ಅಮ್ಮ ಎಂದೇ ಹೆಸರಾಗಿದ್ದರು. 1972 ರಿಂದ 1978 ರವರೆಗೆ ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಅವರು ಎಚ್.ಕೆ. ಶಿವರುದ್ರಪ್ಪ ಅವರ ಎದುರು ಪರಾಭವಗೊಂಡಿದ್ದರು. ಇದನ್ನೂ ಓದಿ: ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್
Advertisement
Advertisement
1985ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಎಸ್. ನಾಗರತ್ನಮ್ಮ ( KS Nagarathnamma) ಅವರು ರಾಜ್ಯದ ಪ್ರಥಮ ವಿರೋಧ ಪಕ್ಷದ ನಾಯಕಿಯಾಗಿಯೂ 1987 ಜ. 29 ರಿಂದ 1989 ಏ. 21 ರವರೆಗೆ ಕೆಲಸ ಮಾಡಿದ್ದರು. ಆದರೆ, ಮಂತ್ರಿಯಾಗಲು 1990ರವರೆಗೆ ಕಾಯಬೇಕಾಯಿತು. ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದರು. ಮೈಸೂರು ಜಿಲ್ಲೆಯ ಪ್ರಥಮ ಮಹಿಳಾ ಉಸ್ತುವಾರಿ ಸಚಿವೆಯೂ ಆಗಿದ್ದರು. ಸಚಿವೆ ಆಗಿದ್ದಾಗಲೇ ನಿಧನರಾದರು. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ