ಹುಬ್ಬಳ್ಳಿ: ಬಿಜೆಪಿ ಸರ್ಕಾರವಿದ್ದಾಗ ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಿಂದಿನ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು ಎಂದು ಅಣ್ಣಾಮಲೈ (Annamalai) ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( Jagadish Shettar) ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಬಿಜೆಪಿ (BJP) ಕೆಲವರ ಕಪಿಮುಷ್ಠಿಯಲ್ಲಿದೆ. ಇದರಿಂದ ಈ ರೀತಿ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಿದ್ದ ಅಣ್ಣಾಮಲೈ ಕರೆದುಕೊಂಡು ಹೋಗಿ ತಮಿಳುನಾಡಿನ (Tamil Nadu) ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಚುನಾವಣೆಯಲ್ಲಿ (Election) ಸೋಲಭವಿಸಿದರು. ಒಂದು ಸಲವು ಚುನಾವಣೆಯಲ್ಲಿ ಗೆಲ್ಲದ ಈ ವ್ಯಕ್ತಿಯನ್ನು ಚುನಾವಣೆಯ ಸಹ ಉಸ್ತುವಾರಿಯಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಕೋರ್ ಕಮಿಟಿ ಸಭೆಯಲ್ಲಿ ಈವರೆಗೆ ಅಣ್ಣಾಮಲೈ ಒಂದು ಕ್ಷೇತ್ರದ ಬಗ್ಗೆ ವಿಮರ್ಶೆ ಮಾಡಿಲ್ಲ. ಅಂತವರ ಅವರ ಮುಂದೆ ಹಿರಿಯ ನಾಯಕರು ಸಣ್ಣ ಮಕ್ಕಳಂತೆ ಕುಳಿತುಕೊಳ್ಳಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಮುಂದೆ ಕುಳಿತಿದ್ದರೆ ಅವರ ಹಿಂದಿನ ಸಾಲಿನಲ್ಲಿ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು. ನಾವು ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಇಂತಹ ಅವಮಾನಗಳನ್ನು ಎದುರಿಸಿದ್ದೇನೆ ಎಂದು ಕಿಡಿಕಾರಿದರು.
Advertisement
Advertisement
ಬಿ.ಎಲ್ ಸಂತೋಷ್ (BL Santhosh) ಅವರನ್ನು ಕೇರಳದಲ್ಲಿ (Kerala) ಉಸ್ತುವಾರಿಯಾಗಿ ನೇಮಿಸಿದಾಗ ಒಂದು ಸೀಟ್ ಬಂದಿಲ್ಲ. ಅದೇ ಪರಿಸ್ಥಿತಿ ತಮಿಳುನಾಡು ಚುನಾವಣೆ ವೇಳೆಯೂ ಆಗಿದ್ದು, ಬಿಜೆಪಿ ಒಂದೆರಡು ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಯಿತು. ತೆಲಂಗಾಣ, ಕೋಲ್ಕತ್ತಾದಲ್ಲೂ ಇದೇ ಪರಿಸ್ಥಿತಿಯಾಗಿತ್ತು. ಇಷ್ಟೆಲ್ಲಾ ದಾಖಲೆಯಿದ್ದರೂ ಮತ್ತೆ ಬಿಎಲ್ ಸಂತೋಷ್‍ಗೆ ಕರ್ನಾಟಕದಲ್ಲಿ (Karnataka) ಕಾರುಬಾರು ಮಾಡುವುದಕ್ಕೆ ನೀಡಿದ್ದಾರೆ. ಇದರಿಂದ ಏನಾದರೂ ಬಿಜೆಪಿಗೆ ಲಾಭ ಆಗುತ್ತದೆಯೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ
ನಳಿನ್ ಕುಮಾರ್ ಕಟೀಲ್ ಸಹ ಬಿ.ಎಲ್ ಸಂತೋಷ್ ಶಿಷ್ಯರಾಗಿದ್ದಾರೆ. ಅವರು ಸಹ ಬಿ.ಎಲ್ ಸಂತೋಷ್ ಹೇಳಿದಂತೆ ಕೇಳಿದ್ದರು. ಈ ಹಿಂದೆ ಕಟೀಲ್ ಆಡಿಯೊ ವೈರಲ್ ಆಗಿದ್ದು, ಇದೆಲ್ಲ ಸಂತೋಷ್ ಗೇಮ್ ಪ್ಲ್ಯಾನ್ ಆಗಿದೆ. ಬಿ.ಎಲ್ ಸಂತೋಷ್ ಮಾನಸಪುತ್ರರಿನಿಗೆ ಟಿಕೆಟ್ ನೀಡಿದ್ದರಿಂದ ಇಷ್ಟು ಅವಾಂತರ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ