ರಾಮನಗರ: ಹಾಸನದ (Hassan) ವಿಷಯದಲ್ಲಿ ನನ್ನ ಸ್ಟ್ಯಾಂಡ್ ಬದಲಾಗಲ್ಲ. ದೇವೇಗೌಡರು (HD Devegowda) ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಹಾಸನ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಹಾಸನ ಟಿಕೆಟ್ ಬಗ್ಗೆ ಹಲವಾರು ಚರ್ಚೆ ಆಗಿದೆ. ಈ ಬಗ್ಗೆ ಸುಗಮವಾಗಿ ತೀರ್ಮಾನ ಆಗುತ್ತದೆ. ದೇವೇಗೌಡರು ಇವತ್ತು ದೆಹಲಿಗೆ (Delhi) ಹೋಗಿದ್ದಾರೆ. ದೆಹಲಿಯಿಂದ ಬಂದ ಬಳಿಕ ಟಿಕೇಟ್ ತೀರ್ಮಾನ ಘೋಷಣೆ ಮಾಡುತ್ತಾರೆ. ದೇವೇಗೌಡರು ದೆಹಲಿಯಿದ ಬಂದ ಮೇಲೆ ಎಲ್ಲಾ ಗೊತ್ತಾಗಲಿದೆ ಎಂದ ಅವರು, ಟಿಕೆಟ್ ಸಿಗದಿದ್ದರೆ ಭವಾನಿ ರೇವಣ್ಣ ಪಕ್ಷೇತರ ಸ್ಪರ್ಧೆ ಕುರಿತು ಚರ್ಚೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು.
Advertisement
Advertisement
ಇಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ಸಂಬಂಧಿಸಿ ಮಾತನಾಡಿದ ಅವರು, ಕೆ.ಆರ್.ಪೇಟೆ ಕಾರ್ಯಕ್ರಮ ಮುಗಿಸಿ 4 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದೆ. ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗುತ್ತದೆ. ಎರಡನೇ ಲೀಸ್ಟ್‍ನಲ್ಲಿ 40 ರಿಂದ 50 ಕ್ಷೇತ್ರದ ಹೆಸರು ಫೈನಲ್ ಆಗಲಿದೆ. ಇನ್ನೊಂದು ನಾಲ್ಕೈದು ದಿನದಲ್ಲಿ ಮೂರನೇ ಪಟ್ಟಿ ಕೂಡಾ ಬಿಡುಗಡೆ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಬರಲು ಕಾರಣನಾಗಿದ್ದಕ್ಕೆ ನನಗೆ ತುಂಬಾ ನೋವಿದೆ : ಹೆಚ್. ವಿಶ್ವನಾಥ್
Advertisement
Advertisement
ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದಿದ್ದೇನೆ ಅಂತ ಕೆಲವರು ಓಡಾಡ್ತಿದ್ದಾರೆ. ಆದರೆ ನನ್ನ ಹೆಸರು ಹೇಳ್ಕೊಂಡೆ ಅನುದಾನ ತರಬೇಕು. ಇಲ್ಲಿ ಕುಮಾರಸ್ವಾಮಿನ ಸೋಲಿಸ್ತಿನಿ ಅಂತ ದುಡ್ಡು ತರ್ತಿದ್ದಾರೆ. ಆದರೆ ಕೋವಿಡ್ ಸಮಯದಲ್ಲಿ ಈ ವ್ಯಕ್ತಿಗಳು ಎಲ್ಲಿದ್ರು? ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಬರೋದು. ನನಗೆ ಇನ್ನೊಂದು ವರ್ಷ ಅಧಿಕಾರ ಇದ್ದಿದ್ರೆ ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದೆ. ನನ್ನ ಅಧಿಕಾರ ತೆಗೆದವ್ರು ಇವ್ರೆ. ಈಗ ಕೆಲಸ ಮಾಡಿಲ್ಲ ಅಂತ ಹೇಳ್ತಿರೋರು ಇವರು ಎಂದು ಮಾಜಿ ಸಚಿವ ಸಿಪಿವೈ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು