ಹಾಸನ: ನಾನು ಹೆಚ್.ಡಿ ಕುಮಾರಸ್ವಾಮಿಯನ್ನು (H.D Kumaraswamy) ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ಅವರಿಗೆ ಟಿಕೆಟ್ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ಕುಮಾರಸ್ವಾಮಿ ಮತ್ತು ಹೆಚ್.ಡಿ ದೇವೇಗೌಡರು (H.D DeveGowd) ಏನ್ ತೀರ್ಮಾನ ಮಾಡ್ತಾರೋ ಅದೇ ಅಂತಿಮ ಎಂದು ಹಾಸನದ ಟಿಕೆಟ್ (Hassan Constituency Ticket) ಗೊಂದಲದ ಚರ್ಚೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ತೆರೆ ಎಳೆದಿದ್ದಾರೆ.
ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದ ಅಧ್ಯಕ್ಷರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡ್ತಾರೆ ಅದೇ ಅಂತಿಮ. ನಾನು ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ (Bhavani) ಅವರಿಗೆ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತೆ. ಕುಮಾರಸ್ವಾಮಿ ಮತ್ತೆ ದೇವೇಗೌಡರು ಇಬ್ರಾಹಿಂ ಸಾಹೇಬ್ರು ಜಿಲ್ಲೆಯ ಶಾಸಕರು ನಮ್ಮ ಏಳು ಸೀಟ್ ತೀರ್ಮಾನ ಮಾಡ್ತಾರೆ. ನಮ್ಮ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ, ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್
ಕುಮಾರಸ್ವಾಮಿ ಮತ್ತು ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದ್ರು ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಅದು ಭ್ರಮೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ದೇವೇಗೌಡರು, ಕುಮಾರಸ್ವಾಮಿ ರಾಜ್ಯದ ಅಧ್ಯಕ್ಷ, ಸಿ.ಎಂ ಇಬ್ರಾಹಿಂ ತೀರ್ಮಾನ ಮಾಡ್ತಾರೆ. ಎಲ್ಲರೂ ಕೂತು ಚರ್ಚೆ ಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್‌ಪೋರ್ಟ್ ನಿಲ್ಲಿಸಿದ್ದಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k