ಬೆಂಗಳೂರು: ಈಗ ಟಿಕೆಟ್ ಸಿಗದಿದ್ದರೆ ಮಗನಿಗೆ ಭವಿಷ್ಯ ಕಷ್ಟ..ಕಷ್ಟ..! ಅತ್ತ ಅಪ್ಪನಿಗೆ ನಾನು ನಿಲ್ಲಬೇಕು ಎಂಬ ಧರ್ಮ ಸಂಕಟ..! ಈ ನಡುವೆ ಅಪ್ಪ ಮಗನಿಗೆ ಅಕ್ಕಪಕ್ಕದ ಕ್ಷೇತ್ರ ಕೊಡುವ ರೂಲ್ಸ್ ಬೇಡ ಎನ್ನುತ್ತಿರುವ ಕಾಂಗ್ರೆಸ್ನ (Congress) ಕೆಲ ನಾಯಕರು. ಇದು ಮೈಸೂರು (Mysuru) ಭಾಗದ ಸಿದ್ದು ಆಪ್ತ, ಕಾಂಗ್ರೆಸ್ ಪಕ್ಷದ ನಾಯಕನ ಪರಿಸ್ಥಿತಿ. ಆ ನಾಯಕ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa). ಹಾಗಾದ್ರೆ ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡ್ತಾರಾ ಸಿದ್ದು ಆಪ್ತ ಹೆಚ್.ಸಿ.ಮಹದೇವಪ್ಪ? ಎಂಬ ಕುತೂಹಲ ಗರಿಗೆದರಿದೆ.
Advertisement
ಅಂದಹಾಗೆ ಟಿ.ನರಸೀಪುರ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಹೆಚ್.ಸಿ.ಮಹದೇವಪ್ಪ, ಈ ಸಲ ನಂಜನಗೂಡು ವಿಧಾನಸಭಾ ಕ್ಷೇತ್ರ ಅಥವಾ ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ಪುತ್ರ ಸುನೀಲ್ ಬೋಸ್ ನನಗೆ ಈ ಸಲ ಟಿ.ನರಸೀಪುರ ಕ್ಷೇತ್ರದಿಂದ ಟಿಕೆಟ್ ಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಈ ಬಾರಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ನನ್ನ ರಾಜಕೀಯ ಭವಿಷ್ಯ ಕಷ್ಟ ಎಂಬುದು ಸುನೀಲ್ ಬೋಸ್ (Sunil Bose) ವಾದ. ಹಾಗಾಗಿ ಹೆಚ್.ಸಿ.ಮಹದೇವಪ್ಪ ಅಕ್ಕಪಕ್ಕ ಕ್ಷೇತ್ರಗಳ ಟಿಕೆಟ್ ಸಿಕ್ಕರೆ ಟಿ.ನರಸೀಪುರ, ನಂಜನಗೂಡು ಕ್ಷೇತ್ರಗಳ ಮೇಲೆ ಕಣ್ಣು ಇಟ್ಟು ಕುಳಿತಿದ್ದಾರೆ. ಇದನ್ನೂ ಓದಿ: ನಾನು ಸಮಯಕ್ಕಾಗಿ ಕಾಯ್ತೀನಿ, ಸದ್ಯಕ್ಕೆ ಮೌನ- ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಗೇಮ್?
Advertisement
Advertisement
ಆದ್ರೆ ನಂಜನಗೂಡು ಕ್ಷೇತ್ರದ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಣ್ಣಿಟ್ಟಿದ್ದಾರೆ. ಈ ನಡುವೆ ಅಕ್ಕಪಕ್ಕದ ಕ್ಷೇತ್ರಗಳಲ್ಲೇ ಅಪ್ಪ ಮಕ್ಕಳಿಗೆ ಟಿಕೆಟ್ ಕೊಡುವ ಬಗ್ಗೆ ಕಾಂಗ್ರೆಸ್ನಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಹೆಚ್.ಸಿ.ಮಹದೇವಪ್ಪ ವಿಚಾರದಲ್ಲಿ ರೂಲ್ಸ್ ಮಾಡಿದ್ರೆ ಕಷ್ಟ ಎಂದು ಕೆಲ ಕೈ ನಾಯಕರಿಂದ ಆಕ್ಷೇಪ ಅಂತೆ. ಹಾಗಾದ್ರೆ ಅಂತಿಮವಾಗಿ ಟಿ.ನರಸೀಪುರ ಕ್ಷೇತ್ರವನ್ನು ಬಿಟ್ಟುಕೊಟ್ಟು ಹೆಚ್.ಸಿ.ಮಹದೇವಪ್ಪ ತ್ಯಾಗ ಮಾಡ್ತಾರಾ ಎಂಬ ಕುತೂಹಲ ಗರಿಗೆದರಿದೆ. ಮಗ ವಿಧಾನಸಭೆಗೆ ಸ್ಪರ್ಧೆ, ಅಪ್ಪ ಲೋಕಸಭೆಗೆ ಸ್ಪರ್ಧೆ ಎಂಬ ಸಂಧಾನ ಸೂತ್ರ ನಡೆದ್ರೆ ಎಲ್ಲವೂ ಸುಸೂತ್ರವಾಗಲಿದೆ. ಆಪ್ತನ ಧರ್ಮಸಂಕಟಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸಿದ್ಧಪಡಿಸುವ ಸೂತ್ರ ಏನು? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ತಿಹಾರ್ ಜೈಲಿಗೆ ಹೋಗಿದ್ದ ಬಗ್ಗೆ ಡಿಕೆಶಿ ಭಾಷಣ ಮಾಡಲಿ: ಈಶ್ವರಪ್ಪ ವ್ಯಂಗ್ಯ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k