– 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
– ವೈಎಸ್ ವಿ ದತ್ತಗೆ ಇಲ್ಲ ಟಿಕೆಟ್
ನವದೆಹಲಿ: 2023 ರ ಕರ್ನಾಟಕ ವಿದಾನಸಭಾ ಚುನಾವಣೆ (Karnataka Vidhanasabha Election 2023) ಗೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್ ಆಗಿದೆ. 42 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಕೈ ನಾಯಕರು ರಿಲೀಸ್ ಮಾಡಿದ್ದಾರೆ.
ತಮ್ಮ ಆಪ್ತರ ಪರವಾಗಿ ಪಟ್ಟು ಹಿಡಿದಿದ್ದ ಎರಡು ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ (DK Shivakumar) ಗೆ ತೀವ್ರ ಹಿನ್ನಡೆಯಾಗಿದೆ. ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡ ಪರ ಡಿಕೆಶಿ ಪಟ್ಟು ಹಿಡಿದಿದ್ದರು. ಇತ್ತ ಕಿಮ್ಮನೆ ರತ್ನಾಕರ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ (Siddaramaiah) ಯಶಸ್ವಿಯಾಗಿದ್ದಾರೆ.
Advertisement
Advertisement
ಕಲಘಟಗಿಯಲ್ಲಿ ನಾಗರಾಜ್ ಚಬ್ಬಿಗೆ ಟಿಕೆಟ್ ಕೊಡಲು ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಸಂತೋಷ್ ಲಾಡ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಬೇಲೂರಿನಲ್ಲಿ ಡಿಕೆಶಿ ಕೈ ಮೇಲಾಗಿದೆ. ರುದ್ರೇಶ್ ಗೌಡ ಕುಟುಂಬ ಹಾಗೂ ಸಿದ್ದರಾಮಯ್ಯ ಬಣ ಎರಡಕ್ಕೂ ಸಡ್ಡು ಹೊಡೆದು ತಮ್ಮ ಆಪ್ತ ಮಾಜಿ ಸಚಿವ ಗಂಡಸಿ ಶಿವರಾಂ ಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ
Advertisement
ಕಾಂಗ್ರೆಸ್ ಹೈಕಮಾಂಡ್ (Congress HighCommand) ಕೋಲಾರಕ್ಕೆ ಟಿಕೆಟ್ ಪ್ರಕಟಿಸಿಲ್ಲ. ಇತ್ತ ಹಾಲಿ ಶಾಸಕ ವಿ ಮುನಿಯಪ್ಪ ಕ್ಷೇತ್ರ ಶಿಡ್ಲಘಟ್ಟ ಕೂಡ ಘೋಷಣೆ ಆಗಿಲ್ಲ. ವಲಸಿಗರ ಆಸೆ ಬಿಟ್ಟ ಕಾಂಗ್ರೆಸ್, ಚಿತ್ರದುರ್ಗದಲ್ಲಿ ಮಾಜಿ ಪರಿಷತ್ ಸದಸ್ಯ ರಘು ಆಚಾರ್ ಗೆ ಟಿಕೆಟ್ ಕೈ ತಪ್ಪಿದ್ದು, ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಿದೆ. ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲ ಮುಂದುವರಿದಿದೆ. ಒಟ್ಟಿನಲ್ಲಿ ದತ್ತ ಹೊರತುಪಡಿಸಿ ಎಲ್ಲ ವಲಸಿಗರಿಗೆ ಟಿಕೆಟ್ ನೀಡಲಾಗಿದ್ದು, ಲಿಂಗಸುಗೂರು ಪುಲಕೇಶಿಯ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟಕ್ಕೆ ಅಭ್ಯರ್ಥಿಗಳು ಅಂತಿಮವಾಗಿಲ್ಲ.
Advertisement
ಯಾವ ಕ್ಷೇತ್ರಕ್ಕೆ ಯಾರು?: ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್, ಗೋಕಾಕ್- ಮಹಾಂತೇಶ್ ಕಡಾಡಿ, ಕಿತ್ತೂರು- ಬಾಬಾ ಸಾಹೇಬ್ ಡಿ ಪಾಟೀಲ್, ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವಿದ್ಯಾ, ಮುಧೋಳ್ ಎಸ್‍ಸಿ- ರಾಮಪ್ಪ ಬಾಳಪ್ಪ ತಿಮ್ಮಾಪೂರ್, ಬಿಳಗಿ- ಜಿ.ಟಿ ಪಾಟೀಲ್, ಬಾದಾಮಿ- ಭೀಮಸೇನಾ ಬಿ ಚಿಮ್ನಕಟ್ಟಿ, ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ, ಬಿಜಾಪುರ ನಗರ – ಅಬ್ದುಲ್ ಅಹ್ಮದ್ ಖಾಜಸಾಹೇಬ್ ಮುಷರಫಿ, ನಾಗಠಾಣ ಎಸ್‍ಸಿ- ವಿಠಲ್ ಕಟಕದೋಂಧ್, ಅಫ್ಜಲಪುರ್- ಎಂವೈ ಪಾಟೀಲ್, ಯಾದಗಿರಿ- ಚನ್ನ ರೆಡ್ಡಿ ಪಾಟೀಲ್, ಗುರುಮಿಠ್ಕಲ್- ಚಿಂಚನಸೂರ್, ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್, ಬಸವಕಲ್ಯಾಣ – ವಿಜಯ್ ಧರ್ಮಸಿಂಗ್, ಗಂಗಾವತಿ – ಇಕ್ಬಾಲ್ ಅನ್ಸಾರಿ, ನರಗುಂದ- ಬಿ.ಆರ್ ಯಾವಗಲ್, ಧಾರವಾಡ- ವಿನಯ್ ಕುಲಕರ್ಣಿ, ಕಲಘಟಗಿ- ಸಂತೋಷ್ ಎಸ್ ಲಾಡ್, ಸಿರಸಿ- ಭಿಮಣ್ಣ ನಾಯಕ್, ಯಲ್ಲಾಪುರ- ವಿಎಸ್ ಪಾಟೀಲ್, ಕೂಡ್ಲಿಗಿ- ಶ್ರೀನಿವಾಸ್ ಎನ್.ಟಿ, ಮೊಳಕಾಲ್ಮೂರು- ಎನ್ ವೈ ಗೋಪಾಲಕೃಷ್ಣ, ಚಿತ್ರದುರ್ಗ- ಕೆ.ಸಿ ವೀರೇಂದ್ರ, ಹೊಳಲ್ಕೆರೆ- ಹೆಚ್. ಆಂಜನೇಯ, ಚನ್ನಗಿರಿ- ಬಿ.ವಿ ಶಿವಗಂಗಾ, ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್, ಉಡುಪಿ- ಪ್ರಸಾದ್ ರಾಜ್ ಕಾಂಚಾನ, ಕಡೂರು- ಕೆ.ಎಸ್ ಆನಂದ್, ತುಮಕೂರು ನಗರ, ಇಕ್ಬಾಲ್ ಅಹ್ಮದ್, ಗುಬ್ಬಿ- ಎಸ್.ಆರ್ ಶ್ರೀನಿವಾಸ್, ಯಲಹಂಕ- ಕೇಶವ ರಾಜಣ್ಣ ಬಿ, ಯಶವಂತಪುರ- ಎಸ್ ಬಾಲರಾಜ್ ಗೌಡ, ಮಹಾಲಕ್ಷ್ಮಿ ಲೇ ಔಟ್- ಕೇಶವಮೂರ್ತಿ, ಪದ್ಮನಾಭನಗರ- ರಘುನಾಥ ನಾಯ್ಡು, ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ- ಪಿ. ರವಿಕುಮಾರ್, ಕೆ ಆರ್ ಪೇಟೆ- ಬಿ.ಎಲ್ ದೇವರಾಜ್, ಬೇಲೂರು- ಬಿ. ಶಿವರಾಂ, ಮಡಿಕೇರಿ- ಮಂಥರ್ ಗೌಡ, ಚಾಮುಂಡೇಶ್ವರಿ- ಸಿದ್ದೇಗೌಡ, ಕೊಳ್ಳೇಗಾಲ- ಎ. ಆರ್ ಕೃಷ್ಣಮೂರ್ತಿ.
ಟಿಕೆಟ್ ವಂಚಿತರು: ಕಡೂರು- ವೈ. ಎಸ್. ವಿ ದತ್ತ, ಚನ್ನಗಿರಿ- ವಡ್ನಾಳ್ ರಾಜಣ್ಣ, ಚಿತ್ರದುರ್ಗ- ರಘು ಆಚಾರ್, ತೀರ್ಥಹಳ್ಳಿ- ಮಂಜುನಾಥಗೌಡ, ಮೊಳಕಾಲ್ಮೂರು- ಯೋಗೀಶ್ ಬಾಬು, ಕಲಘಟಗಿ- ನಾಗರಾಜ್ ಛಬ್ಬಿ.