EVMನಲ್ಲಿ ದೋಷವಿದ್ರೇ ಕೂಡಲೇ ಚೇಂಜ್‌ ಮಾಡ್ತೇವೆ: ತುಷಾರ್‌ ಗಿರಿನಾಥ್‌

Public TV
2 Min Read
Tushar GiriNath

– ಚುನಾವಣಾ ಕೆಲಸಕ್ಕೆ 42 ಸಾವಿರ ಸಿಬ್ಬಂದಿ ನಿಯೋಜನೆ
– 600 ಕಡೆ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರು: ಇವಿಎಂನಲ್ಲಿ (EVM) ದೋಷ ಕಂಡುಬರಲ್ಲ. ಆ ರೀತಿ ಏನಾದ್ರು ದೋಷ ಕಂಡು ಬಂದರೆ ಕೂಡಲೇ ನಾವು ಬದಲಾವಣೆ ಮಾಡುತ್ತೇವೆ ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (Tushar Girinath) ತಿಳಿಸಿದರು.

ಮೇ 10ಕ್ಕೆ ನಡೆಯಲಿರುವ ಚುನಾವಣೆ ಸಿದ್ಧತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳುತ್ತಾರೆ. ನಾವು ಈಗಾಗ್ಲೇ ರೂಟ್ ಮ್ಯಾಪ್ ಫಿಕ್ಸ್ ಮಾಡಿದ್ದೇವೆ ಎಂದು ತಿಳಿಸಿದರು.

evm 1490347648

ಒಂದು ಬಸ್‌ನಲ್ಲಿ ಐದರಿಂದ ಆರು ಮತ‌ಕಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು. ನಾಳೆ ಬೆಳಗ್ಗೆ ಮತಗಟ್ಟೆಗಳಲ್ಲಿ 6 ಗಂಟೆಗೆ ಅಣಕು ಮತದಾನ ನಡೆಯಲಿದೆ. ನಂತರ ಬೆಳಗ್ಗೆ ಏಳು ಗಂಟೆಗೆ ಮತದಾನ (Polling) ಆರಂಭವಾಗಲಿದೆ. ಇವಿಎಮ್‌ಗಳಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್‌ಗಳನ್ನು ನಿಯೋಜನೆ ಮಾಡಲಾಗಿದೆ. 30 ನಿಮಿಷಗಳ ಸರಿ ಮಾಡುವಂತಹ ಕೆಲಸ ಮಾಡಲಾಗುವುದು ಎಂದರು.

ಕ್ಯೂ ಆ್ಯಪ್ ಮೂಲಕ ಮತದಾನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು. 600 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. ಪ್ರತಿ 15 ರಿಂದ 20 ನಿಮಿಷಕ್ಕೆ ಕ್ಯೂ ಆ್ಯಪ್ ಅಪ್‌ಡೇಟ್ ಆಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ. ಉಳಿದಂತೆ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗಿದ್ದು, ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ

vote

ಮತದಾನದ ದಿನ ಅಭ್ಯರ್ಥಿ ಮತಗಟ್ಟೆಗೆ ಬರುವ ಹಾಗಿಲ್ಲ. ಏಜೆಂಟ್ ಬೂತ್ ಅಂತಾ ನೇಮಕ ಮಾಡಿರುತ್ತೇವೆ. ಅವರು ಇಬ್ಬರು ಬದಲಾವಣೆ ಮಾಡಿಕೊಂಡು ಏಜೆಂಟ್ ಬೂತ್ ನಿರ್ವಹಣೆ ಮಾಡಬೇಕಾಗುತ್ತದೆ. ಇಬ್ಬರು ಏಜೆಂಟ್ ಬೂತ್‌ಗಳು ಬದಲಾವಣೆ ಮಾಡಿಕೊಂಡು ನಿರ್ವಹಣೆ ಮಾಡಬೇಕಾಗುತ್ತದೆ. ಯಾವುದೇ ರೀತಿಯ ಸಡಿಲಿಕೆ ಇಲ್ಲ ಎಂದರು. ಇದನ್ನೂ ಓದಿ: ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

Share This Article