ಅಪ್ಪ JDS, ಮಗ BJPಗೆ ಬೆಂಬಲ – ಮತದಾರ, ಕಾರ್ಯಕರ್ತರಲ್ಲಿ ಗೊಂದಲ

Public TV
1 Min Read
chitradurga 2

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪ್ರಥಮ ಬಿಜೆಪಿ (BJP)‌ ಶಾಸಕರೆಂದೇ ಗುರುತಿಸಿಕೊಂಡಿದ್ದ ಬಸವರಾಜ ಮಂಡಿಮಠ್ (Basavaraj Mandimatta) ಇತ್ತೀಚೆಗೆ ಜೆಡಿಎಸ್‌ಗೆ (JDS) ಸೇರಿದ್ದು, ಚಳ್ಳಕೆರೆ (Challekere) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈವರೆಗೆ ತಮ್ಮ ತಂದೆಯನ್ನೇ ಹಿಂಬಾಲಿಸುತ್ತಿದ್ದ ಸೋಮಶೇಖರ್ ಮಂಡಿಮಠ್ ಈ ಬಾರಿ ಬಿಜೆಪಿಯನ್ನೇ‌ ಬೆಂಬಲಿಸಿರುವುದು ಮತದಾರರಲ್ಲಿ ‌ಭಾರೀ ಗೊಂದಲ ಸೃಷ್ಟಿಸಿದೆ.

ಅಪ್ಪನ ಪರ ಬೆಂಬಲಿಸಬೇಕೊ, ಮಗನ ಪರ ಓಡಾಡಬೇಕೊ ಎಂಬ ಗೊಂದಲದಲ್ಲಿ‌ ಕಾರ್ಯಕರ್ತರು ಹಾಗೂ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಬಾರಿ ಪ್ರಭಾವಗಳಿಸಿರುವ ತಂದೆ, ಮಗನ ನಡೆಯಿಂದ 2 ಪಕ್ಷಗಳ ಕಾರ್ಯಕರ್ತರಲ್ಲೂ ಇರಿಸುಮುರಿಸಾಗಿದೆ.

bjp flag

ಆರಂಭದಿಂದಲೂ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದ‌ ಈ ಕುಟುಂಬ ಅಭ್ಯರ್ಥಿ ಗೆಲ್ಲಿಸುವಲ್ಲಿ ನಿರ್ಣಾಯಕ‌ ಪಾತ್ರ ವಹಿಸಿತ್ತು. ಆದರೆ ಕಳೆದ ಬಾರಿಯ ಚುನಾವಣೆಯಿಂದ‌ ಬಸವರಾಜ ಮಂಡಿಮಠ್ ಹಾಗೂ ಸೋಮಶೇಖರ್ ಮಂಡಿಮಠ್ ಬಿಜೆಪಿಗೆ ಒಳಹೊಡೆತ ಕೊಟ್ಟಿದ್ದರು. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

ಬಿಜೆಪಿಯಿಂದ‌ ಅಂತರ‌ ಕಾಯ್ದುಕೊಂಡಿದ್ದರು. ಆದರೆ‌ ಈ ಬಾರಿ ಮಾಜಿ ಶಾಸಕ ಬಸವರಾಜ ಮಂಡಿಮಠ್ ನೇರವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದು, ರವೀಶ್ ಅವರನ್ನು ಗೆಲ್ಲಿಸಲು ಶ್ರಮವಹಿಸುತಿದ್ದಾರೆ. ಆದರೆ‌ ಬಸವರಾಜ ಮಂಡಿಮಠ್ ಪುತ್ರ ಸೋಮಶೇಖರ್ ಮಾತ್ರ ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್‌ ಬೆನ್ನಿಗೆ ನಿಂತಿರೋದು ಇದು ತಂತ್ರನಾ ಅಥವಾ ಸ್ವಪಕ್ಷದ‌ ಮೇಲಿನ ವ್ಯಾಮೋಹದಿಂದ‌ ಇಲ್ಲೇ‌ ಉಳಿದಿದ್ದಾರಾ‌ ಅನ್ನೋದು ‌ಯಕ್ಷ‌ ಪ್ರಶ್ನೆಯಾಗಿದೆ. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

Share This Article