Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೈಸೂರು – ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರರ ಮನಗೆಲ್ಲದ ಮಹಿಳಾ ಜನಪ್ರತಿನಿಧಿಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | ಮೈಸೂರು – ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರರ ಮನಗೆಲ್ಲದ ಮಹಿಳಾ ಜನಪ್ರತಿನಿಧಿಗಳು

Chamarajanagar

ಮೈಸೂರು – ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರರ ಮನಗೆಲ್ಲದ ಮಹಿಳಾ ಜನಪ್ರತಿನಿಧಿಗಳು

Public TV
Last updated: March 30, 2023 12:15 pm
Public TV
Share
2 Min Read
ks nagarathnamma geetha mahadevaprasad
SHARE

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ದಿನಾಂಕ ಪ್ರಕಟವಾಗುತ್ತಿದ್ದಂತೆ 3 ಪಕ್ಷಗಳಲ್ಲೂ ಸಿದ್ಧತೆ ಜೋರಾಗಿದೆ. ಅದೇ ರೀತಿ ಮೈಸೂರು, ಚಾಮರಾಜನಗರ (Chamarajanagar) ಜಿಲ್ಲೆಯಲ್ಲೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳಾ ಜನಪ್ರತಿನಿಧಿಗಳು (Women MLA) ನಿರಂತರವಾಗಿ ಮನಗೆದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಕಳೆದ 65 ವರ್ಷಗಳಲ್ಲಿ ವಿಧಾನಸಭೆಗೆ 8 ಮಹಿಳೆಯರು ಮಾತ್ರ ಆಯ್ಕೆಯಾಗಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆ ಕ್ಷೇತ್ರದಿಂದ ಕೆ.ಎಸ್. ನಾಗರತ್ನಮ್ಮ (KS Nagarathnamma) ಅವರು 1957, 1962, 1967, 1972, 1983, 1985 ಹಾಗೂ 1989- ಹೀಗೆ 7 ಬಾರಿ ಆಯ್ಕೆಯಾಗಿದ್ದಾರೆ. 1978ರಲ್ಲಿ ಎಚ್.ಕೆ. ಶಿವರುದ್ರಪ್ಪ ಅವರೆದುರು ಪರಾಭವಗೊಂಡಿದ್ದನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ 1957 ರಿಂದ 1989ರವರೆಗೆ ಅಂದರೆ ನಿಧನರಾಗುವವರೆಗೆ ಗುಂಡ್ಲುಪೇಟೆ ಕ್ಷೇತ್ರ ಅವರ ಹಿಡಿತದಲ್ಲಿಯೇ ಇತ್ತು. ಅವರು 1972 ರಿಂದ 78 ರವರೆಗೆ ರಾಜ್ಯದ ಮೊದಲ ಮಹಿಳಾ ಸ್ಪೀಕರ್, 1985ರಲ್ಲಿ ರಾಜ್ಯದ ಮೊದಲ ಪ್ರತಿಪಕ್ಷ ನಾಯಕಿಯಾಗಿದ್ದರು. ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿದ್ದರು.

Congress 1

1957ರಲ್ಲಿ ಕೊಳ್ಳೇಗಾಲ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್‍ನ ಕೆಂಪಮ್ಮ ಆಯ್ಕೆಯಾಗಿದ್ದರು. 1994ರಲ್ಲಿ ಮತ್ತೆ ಅವರಿಗೆ 37 ವರ್ಷಗಳ ನಂತರ ಕಾಂಗ್ರೆಸ್ (Congress) ಟಿಕೆಟ್ ನೀಡಲಾಗಿತ್ತು. ಆದರೆ ಜನತಾದಳದ ಎಸ್. ಜಯಣ್ಣ ಅವರ ಎದುರು ಸೋತರು. 1978ರಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕಾಂಗ್ರೆಸ್‍ನ ಸುಶೀಲಾ ಚೆಲುವರಾಜ್ ಆಯ್ಕೆಯಾದರು. 1983ರಲ್ಲಿ ಸೋತರು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಅವರು 1983, 1989ರಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1985, 1994, 1999ರಲ್ಲಿ ಸೋತರು. ಇವರು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವೆಯಾಗಿದ್ದರು. 1991ರಿಂದ 1996ರವರೆಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದಿದ್ದರು.

1984ರಲ್ಲಿ ಅಜೀಜ್ ಸೇಠ್ ಅವರು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರಿಂದ 1985ರಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಮುಕ್ತಾರುನ್ನೀಸಾ ಬೇಗಂ ಅವರಿಗೆ ಕಾಂಗ್ರೆಸ್ ಟಿಕೆಟ್ ಮೇಲೆ ಗೆಲ್ಲುವ ಅವಕಾಶ ಸಿಕ್ಕಿತು. ನಂತರ ಮತ್ತೆ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಆದರೆ ಬೇಗಂ ವಿಧಾನ ಪರಿಷತ್ ಸದಸ್ಯೆಯಾಗಿದ್ದರು. 2004ರಲ್ಲಿ ಜೆ. ಸುನೀತಾ ವೀರಪ್ಪಗೌಡ ಅವರು ಬನ್ನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ (BJP) ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 2008ರ ವೇಳೆಗೆ ಬನ್ನೂರು ಕ್ಷೇತ್ರ ರದ್ದಾಗಿದ್ದರಿಂದ ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಇವರು 4 ಬಾರಿ ಜಿಪಂ ಸದಸ್ಯರು ಹಾಗೂ 2 ಬಾರಿ ಅಧ್ಯಕ್ಷರಾಗಿದ್ದರು.

JDS FLAG

2004ರಲ್ಲಿ ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಜೆಡಿಎಸ್ ಟಿಕೆಟ್ ಮೇಲೆ ಆಯ್ಕೆಯಾದರು. 2008ರ ವೇಳೆಗೆ ಇವರು ಬಿಎಸ್ಪಿಯಿಂದ, 2013ರಲ್ಲಿ ಜೆಡಿಎಸ್‍ನಿಂದ (JDS) ಸ್ಪರ್ಧಿಸಿ ಸೋತರು. 2017ರ ಉಪ ಚುನಾವಣೆಯಲ್ಲಿ ಡಾ.ಗೀತಾ ಮಹದೇವಪ್ರಸಾದ್ (Geetha Mahadevaprasad)  ಅವರು ಗುಂಡ್ಲುಪೇಟೆ ಕ್ಷೇತ್ರದಿಂದ ಆಯ್ಕೆಯಾದರು. ಆದರೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು.

TAGGED:bjpChamarajnagarcongressjdsks nagarathnammaಕಾಂಗ್ರೆಸ್ಚಾಮರಾಜನಗರಜೆಡಿಎಸ್ಬಿಜೆಪಿ
Share This Article
Facebook Whatsapp Whatsapp Telegram

Cinema news

Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories
Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories

You Might Also Like

jayashri nari narayani
Bengaluru City

ವ್ಹೀಲ್‌ಚೇರ್‌ನಲ್ಲಿ ರೊಟ್ಟಿ ಮಾರುತ್ತಿರುವ ಜಯಶ್ರೀಗೆ ನಾರಿ ನಾರಾಯಣಿ ಗೌರವ

Public TV
By Public TV
1 minute ago
shashikala nari narayani
Bengaluru City

ಶಶಿ ಸೋಪ್ಸ್ ಆ್ಯಂಡ್ ಡೆಟರ್ಜೆಂಟ್ಸ್ ಸಂಸ್ಥೆಯ ಶಶಿಕಲಾಗೆ ನಾರಿ ನಾರಾಯಣಿ ಸನ್ಮಾನ

Public TV
By Public TV
23 minutes ago
nari narayani mahadevamma
Bengaluru City

ಅನಾಥ ಶವಗಳಿಗೆ ಮುಕ್ತಿ ನೀಡೋ ಮಹದೇವಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

Public TV
By Public TV
48 minutes ago
Public TV Nari Narayani Award 2026 Blind Cricketer Deepika
Bengaluru City

ಕ್ರಿಕೆಟ್‌ ಪಟು ದೀಪಿಕಾಗೆ ‘ನಾರಿ ನಾರಾಯಣಿ’ ಪ್ರಶಸ್ತಿ

Public TV
By Public TV
1 hour ago
chain snatching in ramanagara three accused arrested
Crime

ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ – ಆರೋಪಿಗಳು ಅಂದರ್‌

Public TV
By Public TV
2 hours ago
public tv nari narayani 2026 award
Bengaluru City

ಮಹಿಳಾ ದಿನಾಚರಣೆ: ಪಬ್ಲಿಕ್‌ ಟಿವಿಯಿಂದ ಸಾಧಕಿಯರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?