ಬೆಂಗಳೂರು: ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿದ್ದ ಧರಣಿ ಸತತ ಐದನೇ ದಿನವೂ ಮುಂದುವರಿದಿದ್ದು, ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ ಮಾಡಲಾಗಿದೆ.
Advertisement
ಕಾಂಗ್ರೆಸ್ ಗದ್ದಲದ ನಡೆವೆಯೂ ಇವತ್ತು ಎರಡು ಬಿಲ್ಗಳನ್ನು ಮಂಡಿಸಿದ ಸರ್ಕಾರ ಆಂಗೀಕಾರವನ್ನು ಪಡೆದುಕೊಂಡಿದೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ್ರು. ಬಳಿಕ ವಿಧಾನಸಭೆ ಕಲಾಪವನ್ನು ಮಾರ್ಚ್ ನಾಲ್ಕಕ್ಕೆ ಮುಂದೂಡಲಾಯಿತು. ಸಿಎಂ ಮಾತನಾಡುವ ವೇಳೆಯೂ ಕಾಂಗ್ರೆಸ್ ಸದಸ್ಯರು ಅಡ್ಡಿಮಾಡಲು ಪ್ರಯತ್ನಿಸಿದ್ರು. ಓ… ಓ.. ದೇಶದ್ರೋಹಿ ಯಾರಪ್ಪಾ..? ಈಶ್ವರಪ್ಪ, ಈಶ್ವರಪ್ಪ ಎಂದು ಕೂಗುತ್ತಾ ಜೆ.ಪಿ.ನಡ್ಡಾ ಹೇಳಿಕೆಯ ಬಿತ್ತಿ ಪತ್ರ ತೋರಿಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಸಿಟ್ಟಾದ ಸಿಎಂ, ನಿಮಗೆ ವಿರೋಧ ಪಕ್ಷದಲ್ಲಿ ಕೂರಲು ಅರ್ಹತೆ ಇಲ್ಲ. ಜವಾಬ್ದಾರಿ ಮರೆತು ಗದ್ದಲ ಮಾಡುತ್ತಿರುವುದು ನೋವಿನ ಸಂಗತಿ. ಕಾಂಗ್ರೆಸ್ ಧರಣಿಯಿಂದ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ ಅಂತ ಗರಂ ಆದರು. ಇದನ್ನೂ ಓದಿ: ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ: ವಿಧಾನಸಭೆಯಲ್ಲಿ ಬಿಲ್ ಪಾಸ್
Advertisement
Advertisement
ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಕಾಂಗ್ರೆಸ್ ಧರಣಿಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಆರಂಭದ ಎರಡು ದಿನ ಮಾತ್ರ ಕಲಾಪ ನಡೆಯಿತು. ಉಳಿದ ಐದು ದಿನ ನಿಮ್ಮದೇ ಗದ್ದಲ ಆಗಿದೆ. ಜನ ಈ ನಿಮ್ಮ ಗಲಾಟೆ ನೋಡುತ್ತಾ ಕೂರಲು ಸಾಧ್ಯವಿಲ್ಲ. ಇನ್ನು ಮೂರು ದಿನ ಸದನ ಕಲಾಪ ನಡೆಯಲು ಸಹಕರಿಸಬೇಕು. ಇಲ್ಲದಿದ್ರೆ ಸದನವನ್ನು ಮುಂದೂಡುತ್ತೇನೆ. ಸದನ ಮೌಲ್ಯ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಸದನದ ಹೊರಗೆ ಏನಾದ್ರೂ ಮಾಡಿಕೊಳ್ಳಿ. ಸದನದ ಮೌಲ್ಯ ಕಾಪಾಡಬೇಕು ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರಿಗೆ ಸ್ಪೀಕರ್ ಮನವಿ ಮಾಡಿದ್ರು. ಆದರೂ ಗದ್ದಲ ಮುಂದುವರಿದಾಗ ವಿಧಾನಸಭೆ ಕಲಾಪವನ್ನು ಮಾರ್ಚ್ 4ಕ್ಕೆ ಮೂಂದೂಡಿಕೆ ಮಾಡಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ
Advertisement