– 2018 ವಿಧಾನಸಭಾ ಚುನಾವಣೆಯ ಅಂಕಿಅಂಶ
ಕರ್ನಾಟಕ ವಿಧಾನಸಭಾ ಚುಣಾವಣೆ (Karnataka Assembly Election) ಸಮೀಪಿಸುತ್ತಿದ್ದು, ಕಳೆದ ಚುನಾವಣೆಯಲ್ಲಾದ ಅಧಿಕ ಮತ್ತು ಕಡಿಮೆ ಅಂತರದ ಗೆಲುವಿನ ಲೆಕ್ಕಾಚಾರ ಜೋರಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸಿದವರಿಗೆ ಈ ಬಾರಿ ಏನಾಗುತ್ತೋ ಎಂಬ ಆತಂಕ ಇದೆ. ಕಳೆದ ಎಲೆಕ್ಷನ್‌ನಲ್ಲಿ ಅಲ್ಪ ಮತಗಳಿಂದ ಸೋತವರು ಹಿಂದಾದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಸಿದ್ಧರಾಗಿದ್ದಾರೆ.
Advertisement
ಕಡಿಮೆ ಅಂತರದ ಸೋಲು-ಗೆಲುವಿನ ಲೆಕ್ಕಾಚಾರ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆ ನಿಟ್ಟಿನಲ್ಲೇ ಚುನಾವಣೆ ಎದುರಿಸಲು ಟಿಕೆಟ್ ಆಕಾಂಕ್ಷಿಗಳು ಸಜ್ಜಾಗಿದ್ದಾರೆ. ಹಾಗಾದರೆ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದವರು ಯಾರ‍್ಯಾರು ಎಂಬ ಬಗ್ಗೆ ಇಲ್ಲಿದೆ ವಿವರ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ
Advertisement
Advertisement
2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ 2,000, 4,000 ಹಾಗೂ 6,000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಜಯಗಳಿಸಿದವರು ಎಂದು ಮೂರು ವಿಭಾಗದಲ್ಲಿ ವಿಂಗಡಿಸಲಾಗಿದೆ. ಆ ಶಾಸಕರು ಯಾರು, ಯಾವ ಕ್ಷೇತ್ರದಲ್ಲಿ ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದರು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.
Advertisement
2,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದವರು
ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಪ್ರತಾಪ್‌ಗೌಡ ಪಾಟೀಲ್ – 213, ತುಮಕೂರಿನ ಪಾವಗಡ ಕ್ಷೇತ್ರದ ವೆಂಕಟರಮಣಪ್ಪ – 409, ಹಾವೇರಿಯ ಹಿರೆಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್ – 555, ಧಾರವಾಡದ ಕುಂದಗೋಳ ಕ್ಷೇತ್ರದ ಸಿ.ಎಸ್.ಶಿವಳ್ಳಿ – 634, ಕಲಬುರಗಿಯ ಅಳಂದ ಕ್ಷೇತ್ರದ ಸುಭಾಷ್ ಗುತ್ತೆದಾರ್ – 697, ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ – 1483, ರಾಯಚೂರಿನ ಸಿಂಧನೂರು ಕ್ಷೇತ್ರದ ವೆಂಕಟರಾವ್ ನಾಡಗೌಡ – 1597, ಬಾಗಲಕೋಟೆಯ ಬಾದಾಮಿ ಕ್ಷೇತ್ರದ ಸಿದ್ದರಾಮಯ್ಯ – 1696, ಮೈಸೂರಿನ ಕೆ.ಆರ್.ಕ್ಷೇತ್ರದ ಸಾ.ರಾ.ಮಹೇಶ್ – 1779, ಗದಗ ಕ್ಷೇತ್ರದ ಹೆಚ್.ಕೆ.ಪಾಟೀಲ್ – 1868, ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದ ಟಿ.ಡಿ.ರಾಜೇಗೌಡ – 1989 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: ಯುಗಾದಿಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ಎಂಬಿ ಪಾಟೀಲ
4,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದವರು
ತುಮಕೂರಿನ ತುರುವೇಕೆರೆ ಕ್ಷೇತ್ರದ ಮಸಾಲೆ ಜಯರಾಮ್ – 2049, ಬೆಳಗಾವಿಯ ಅಥಣಿ ಕ್ಷೇತ್ರದ ಮಹೇಶ್ ಕುಮಠಳ್ಳಿ – 2331, ಬಳ್ಳಾರಿ ಕ್ಷೇತ್ರದ ಬಿ.ನಾಗೇಂದ್ರ – 2679, ಬೆಂಗಳೂರಿನ ವಿಜಯನಗರ ಕ್ಷೇತ್ರದ ಎಂ.ಕೃಷ್ಣಪ್ಪ – 2775, ಬಾಗಲಕೋಟೆಯ ಜಮಖಂಡಿ ಕ್ಷೇತ್ರದ ಸಿದ್ದು ನ್ಯಾಮಗೌಡ – 2795, ಬೆಳಗಾವಿಯ ಯಮಕನಮರಡಿ ಕ್ಷೇತ್ರದ ಸತೀಶ್ ಜಾರಕಿಹೊಳಿ – 2850, ಬೆಳಗಾವಿಯ ರಾಮದುರ್ಗ ಕ್ಷೇತ್ರದ ಮಹದೇವಪ್ಪ ಯಾದವಾಡ – 2875, ಬೆಂಗಳೂರಿನ ಜಯನಗರ ಕ್ಷೇತ್ರದ ಸೌಮ್ಯಾ ರೆಡ್ಡಿ – 2887, ವಿಜಯಪುರದ ಬಸವನ ಬಾಗೇವಾಡ ಕ್ಷೇತ್ರದ ಶಿವಾನಂದ ಪಾಟೀಲ್ – 3186, ವಿಜಯಪುರದ ದೇವರ ಹಿಪ್ಪರಗಿ ಕ್ಷೇತ್ರದ ಸೋಮನಗೌಡ ಬಿ.ಪಾಟೀಲ್ – 3353, ಚಾಮರಾಜನಗರದ ಹನೂರು ಕ್ಷೇತ್ರದ ಆರ್.ನರೇಂದ್ರ – 3513, ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಕೆ.ಬಿ.ಅಶೋಕ್ ನಾಯಕ್ – 3777 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
6,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದವರು
ದಾವಣಗೆರೆ ಉತ್ತರದ ಎಸ್.ಎ.ರವೀಂದ್ರನಾಥ್ – 4071, ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಎಂ.ಪಿ.ರೇಣುಕಾಚಾರ್ಯ – 4233, ಹಾವೇರಿಯ ರಾಣಿಬೆನ್ನೂರು ಕ್ಷೇತ್ರದ ಆರ್.ಶಂಕರ್ – 4338, ಕಲಬುರಗಿಯ ಚಿತ್ತಾಪುರ ಕ್ಷೇತ್ರದ ಪ್ರಿಯಾಂಕ್ ಖರ್ಗೆ – 4393, ಬಾಗಲಕೋಟೆಯ ಬಿಳಗಿ ಕ್ಷೇತ್ರದ ಮುರುಗೇಶ್ ನಿರಾಣಿ – 4811, ಚಾಮರಾಜನಗರ ಕ್ಷೇತ್ರದ ಸಿ.ಪುಟ್ಟರಂಗಶೆಟ್ಟಿ – 4913, ಹಾಸನದ ಸಕಲೇಶಪುರ ಕ್ಷೇತ್ರದ ಹೆಚ್.ಕೆ.ಕುಮಾರಸ್ವಾಮಿ – 4942, ರಾಯಚೂರಿನ ಲಿಂಗಸುಗೂರು ಕ್ಷೇತ್ರದ ಡಿ.ಎಸ್.ಹೂಲಗೇರಿ – 4946, ಬೆಳಗಾವಿಯ ಬೈಲಹೊಂಗಲ ಕ್ಷೇತ್ರದ ಮಹಾಂತೇಶ್ ಶಿವಾನಂದ – 5122, ಬೆಳಗಾವಿಯ ಖಾನಪುರ ಕ್ಷೇತ್ರದ ಅಂಜಲಿ ನಿಂಬಾಳ್ಕರ್ – 5133, ಉತ್ತರ ಕನ್ನಡದ ಹಳಿಯಾಳ ಕ್ಷೇತ್ರದ ಆರ್.ವಿ.ದೇಶಪಾಂಡೆ – 5140, ಬಾಗಲಕೋಟೆಯ ಹುನಗುಂದ ಕ್ಷೇತ್ರದ ದೊಡ್ಡನಗೌಡ ಜಿ.ಪಾಟೀಲ್ – 5227, ತುಮಕೂರು ನಗರ ಕ್ಷೇತ್ರದ ಜಿ.ಬಿ.ಜ್ಯೋತಿ ಗಣೇಶ್ – 5293, ಕಲಬುರಗಿ ದಕ್ಷಿಣ ಕ್ಷೇತ್ರದ ದತ್ತಾತ್ರೇಯ ರೇವೂರ – 5431, ಬಳ್ಳಾರಿಯ ಕಂಪ್ಲಿ ಕ್ಷೇತ್ರದ ಜೆ.ಎನ್.ಗಣೇಶ್ – 5555, ತುಮಕೂರಿನ ಕುಣಿಗಲ್ ಕ್ಷೇತ್ರದ ಹೆಚ್.ಡಿ.ರಂಗನಾಥ್ – 5600, ವಿಜಯಪುರದ ನಾಗಠಾಣ ಕ್ಷೇತ್ರದ ದೇವಾನಂದ್ ಚವ್ಹಾಣ್ – 5601, ತುಮಕೂರು ಗ್ರಾಮೀಣ ಕ್ಷೇತ್ರದ ಡಿ.ಸಿ.ಗೌರಿಶಂಕರ್ – 5640, ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ – ಕೃಷ್ಣಭೈರೇಗೌಡ – 5671, ಕೋಲಾರದ ಚಿಂತಾಮಣಿ ಕ್ಷೇತ್ರದ ಜೆ.ಕೆ.ಕೃಷ್ಣಾ ರೆಡ್ಡಿ – 5673, ಉತ್ತರ ಕನ್ನಡದ ಭಟ್ಕಳ ಕ್ಷೇತ್ರದ ಸುನಿಲ್ ನಾಯ್ಕ – 5930, ಕಲಬುರಗಿ ಉತ್ತರ ಕ್ಷೇತ್ರದ ಕನೀಜ್ ಫಾತಿಮಾ – 5940 ಮತಗಳ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ