BelgaumDistrictsKarnatakaLatestMain Post

ಮತಾಂತರ ನಿಷೇಧ ಮಸೂದೆ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ: ಡಿಕೆಶಿ

ಬೆಳಗಾವಿ: ಮತಾಂತರ ನಿಷೇಧ ಮಸೂದೆ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ. ಮೇಕೆದಾಟು ಪಾದಯಾತ್ರೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಪರಿಷತ್ ಚುನಾವಣೆಯಲ್ಲಿ ಪಕ್ಷ, ನಾಯಕರು ಹಾಗೂ ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಎಲ್ಲರಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘವು ಪ್ರಧಾನಿಯವರಿಗೆ ಬರೆದಿರುವ ಪತ್ರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಇಡೀ ದೇಶಕ್ಕೇ ಆಶ್ಚರ್ಯ ಮೂಡಿಸಿರುವ ಪತ್ರ. ಅದು ಕೂಡ ನಮ್ಮ ಹೋರಾಟದ ಆದ್ಯತೆ ವಿಷಯಗಳಲ್ಲಿ ಒಂದು. ಅಧಿವೇಶನದಲ್ಲಿ ನಾವು ಎಲ್ಲ ವಿಚಾರಗಳನ್ನು ಒಂದೇ ದಿನ ತೆಗೆದುಕೊಳ್ಳಲು ಆಗುವುದಿಲ್ಲ. ಭ್ರಷ್ಟಾಚಾರ ಕೂಡ ಒಂದು ಪ್ರಮುಖ ವಿಚಾರ’ ಎಂದರು. ಇದನ್ನೂ ಓದಿ: ವಿದ್ಯಾರ್ಥಿಗಳೇ, ಸರ್ಕಾರಿ ಹಾಸ್ಟೆಲ್ ಮೆನುವಿನಲ್ಲಿರುವ ಈ ಆಹಾರ ನಿಮಗೆ ಸಿಗ್ತಿದೆಯಾ..?

ಮತಾಂತರ ನಿಷೇಧ ಮಸೂದೆ ವಿಚಾರವಾಗಿ ಕೇಳಿದ ಪ್ರಶ್ನೆಗೆ,’ ಸರ್ಕಾರ ಉದ್ದೇಶಪೂರ್ವಕವಾಗಿ ಈ ವಿಚಾರವನ್ನು ಅಂತಿಮ ಗಳಿಗೆಯಲ್ಲಿ ಚರ್ಚೆಗೆ ತರುತ್ತದೆ. ನಾವು ಅದಕ್ಕೆ ಸಿದ್ಧವಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆಯದೇ ಇದನ್ನು ತರಲು ಸಾಧ್ಯವಿಲ್ಲ. ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ವಿಚಾರ ತಿರುಚಲು ಈ ರೀತಿ ಮಾಡುತ್ತಾರೆ. ನಿನ್ನೆ ಕಾನೂನು ಸಚಿವರು ಇದರಲ್ಲಿ ಎಸ್.ಸಿ ಬೌದ್ಧ ಧರ್ಮ ಸೇರಿದಂತೆ ಇತರೆ ವಿಚಾರ ಬರುತ್ತದೆ ಎಂದಿದ್ದಾರೆ. ಹೀಗಾಗಿ ಅವರು ಕೊನೆಗಳಿಗೆಯಲ್ಲಿ ತೆಗೆದುಕೊಳ್ಳುತ್ತಾರೆ. ಅವರು ಯಾವಾಗ ಬೇಕಾದರೂ ತೆಗೆದುಕೊಳ್ಳಲಿ, ಕಾಂಗ್ರೆಸ್ ಇದನ್ನು ವಿರೋಧಿಸುತ್ತದೆ. ಸದನದ ಒಳಗೆ ಹಾಗೂ ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಾನೂನು ಈಗಾಗಲೇ ಇದೆ. ಅದನ್ನು ಪಾಲಿಸುವ ಬದಲು ಈ ವಿಚಾರವನ್ನು ಚುಚ್ಚಿ, ಚುಚ್ಚಿ ಹೇಳುತ್ತಿದ್ದಾರೆ. ಬೌದ್ಧ, ಸಿಖ್, ಜೈನ್, ಕ್ರೈಸ್ತ ಧರ್ಮಗಳಿದ್ದು, ಕೇವಲ ಒಂದನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿಯವರಲ್ಲೇ ಆಂತರಿಕ ಭಿನ್ನಮತ ಇದೆ. ಇದು ರಾಜ್ಯಕ್ಕೆ ಮುಂದೆ ಬರಲಿರುವ ಬಂಡವಾಳ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಲಖನ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಒಳಒಪ್ಪಂದವೋ ಅಥವಾ ಬೇರೆ ಏನೋ, ಸಿಎಂ ಏನು ಹೇಳಿದ್ದಾರೆ? ಅವರು ಕಾಂಗ್ರೆಸ್ ರೆಬಲ್ ಅಭ್ಯರ್ಥಿ ಎಂದಿದ್ದಾರೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ಅವರು ಬೇಕಾದರೆ ಸಂಪುಟ ವಿಸ್ತರಣೆ ವೇಳೆ ಲಖನ್ ಅವರನ್ನೇ ಸಚಿವರನ್ನಾಗಿ ಮಾಡಿಕೊಳ್ಳಲಿ’ ಎಂದರು.

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಹಿಟ್ ಅಂಡ್ ರನ್ ನೀತಿ ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಹಿಟ್ ಅಂಡ್ ರನ್ ಪ್ರಶ್ನೆಯೇ ಇಲ್ಲ. ನಾವು ಹಲವು ವಿಚಾರಗಳೊಂದಿಗೆ ಈ ವಿಷಯ ತರುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

Leave a Reply

Your email address will not be published.

Back to top button