ರಾಯಚೂರು: ಕೃಷ್ಣಾನದಿ ನಂಬಿ ಬದುಕುತ್ತಿರುವ ಕರ್ನಾಟಕ ಹಾಗೂ ತೆಲಂಗಾಣದ ರೈತರು ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಯನ್ನ ಒಡೆದು ಹಾಕಿದ್ದಾರೆ. ಕುಡಿಯುವ ನೀರಿಗಾಗಿ 15 ದಿನಗಳಿಂದ ಹೋರಾಟ ನಡೆಸಿದ್ರೂ ಪ್ರಯೋಜನವಾಗಿಲ್ಲ ಅಂತಾ ರೈತರೇ ಇಂಥಾ ಕೆಲಸಕ್ಕೆ ಕೈ ಹಾಕಿದ್ದಾರೆ.
Advertisement
ರಾಯಚೂರಿನ ಕೃಷ್ಣಾ ನದಿಯ ಕೆಳಭಾಗದ 22 ಗ್ರಾಮಗಳು ಹಾಗೂ ತೆಲಂಗಾಣದ ಕೃಷ್ಣಾ, ಗುಡೆಬಲ್ಲೂರು ಸೇರಿ ಹಲವು ಹಳ್ಳಿಗಳ ಭಾಗದ ನದಿಯಲ್ಲಿ ನೀರಿಲ್ಲದೆ ಜಲಕ್ಷಾಮ ಎದುರಾಗಿದೆ. ಹೀಗಾಗಿ ಕಳೆದ 15 ದಿನದಿಂದ ರೈತರು ನಿರಂತರ ಹೋರಾಟ ನಡೆಸಿದ್ರು. ಈಗ ಎರಡು ರಾಜ್ಯಗಳ ಜನ ಆರ್‍ಟಿಪಿಎಸ್, ವೈಟಿಪಿಎಸ್ ಹಾಗೂ ರಾಯಚೂರು ನಗರಕ್ಕೆ ನೀರು ಸರಬರಾಜಾಗುವ ತಡೆಗೋಡೆ ಧ್ವಂಸಮಾಡಿ ನದಿಗೆ ನೀರು ಹರಿಸಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದ್ರೂ ನಿಯಮ ಉಲ್ಲಂಘಿಸಿ ನೀರು ಪಡೆಯಲು ಮುಂದಾಗಿದ್ದಾರೆ.
Advertisement
Advertisement
ತಡೆಗೋಡೆ ಧ್ವಂಸವಾಗಿರುವುದರಿಂದ ವೈಟಿಪಿಎಸ್, ಆರ್‍ಟಿಪಿಎಸ್‍ನಲ್ಲಿ ವಿದ್ಯುತ್ ಉತ್ಪಾದನೆಗೆ ಸಮಸ್ಯೆ ಆಗಿದೆ. ವಿದ್ಯುತ್‍ಗಿಂತ ಕುಡಿಯಲು ನೀರು ಮುಖ್ಯ ಹೀಗಾಗಿ ಕಾನೂನು ಉಲ್ಲಂಘಿಸಿದ್ದೇವೆ ಅಂತ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹೇಳಿದ್ದಾರೆ.
Advertisement
ದಿನೇ ದಿನೇ ಹೆಚ್ಚಾಗುತ್ತಿರೋ ನೀರಿನ ಸಮಸ್ಯೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಿಯಮಬಾಹಿರವಾಗಿ ನದಿಗೆ ನೀರು ಹರಿಸಿದ್ದಾರೆ. ಈಗ ಸರ್ಕಾರ ರೈತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೊ ಅಥವಾ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗುತ್ತೋ ಕಾದು ನೋಡ್ಬೇಕು.