ನವದೆಹಲಿ: ಎಸಿಬಿಯನ್ನು (ACB) ರದ್ದು ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಎಲ್ಲ ಖಾಸಗಿ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ವಜಾ ಮಾಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಮಧ್ಯಪ್ರದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಕನಕರಾಜು ಮತ್ತು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದರು. ವಿಚಾರಣೆ ವೇಳೆ ಎಸಿಬಿಯಲ್ಲಿರುವ ಅರ್ಜಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವುದಾಗಿ ಹೈಕೋರ್ಟ್ ಹೇಳಿದೆ. ಇದರಿಂದ ದೂರುದಾರರಿಗೆ ಏನು ಅನ್ಯಾಯ ಆಗಿದೆ ಎಂದು ಪೀಠ ಪ್ರಶ್ನಿಸಿತು.
Advertisement
Advertisement
ಅರ್ಜಿ ಸಲ್ಲಿಸಿದ ನಿಮ್ಮಗೆ ಏನು ಸಮಸ್ಯೆಯಾಗಿದೆ. ಲೋಕಾಯುಕ್ತಕ್ಕೆ ಅಧಿಕಾರ ವರ್ಗಾವಣೆಯಾಗುತ್ತಿರುವ ಹಿನ್ನಲೆಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಹೇಳಿತು. ಇದಕ್ಕೆ ಅರ್ಜಿದಾರ ಪರ ವಕೀಲರೊಬ್ಬರು ಉತ್ತರಿಸಿ, ಎಸಿಬಿಗೆ ಸಾಧ್ಯವಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಉದಾಹರಣೆಗೆ, ಆರೋಪಿ ಸಾರ್ವಜನಿಕ ನೌಕರನ ತಿಂಗಳಿಗೆ 20,000 ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿರುವ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಮಾಡುವಂತಿಲ್ಲ ಎಂಬ ಅಧಿಸೂಚನೆ ಇದೆ ಎಂದು ಉಲ್ಲೇಖಿಸಿದರು. ಇದನ್ನೂ ಓದಿ: ಕಾರು ಮಾಲೀಕರೇ ಹುಷಾರ್ – ಮೈಸೂರಿನಲ್ಲಿ ಶುರುವಾಗಿದೆ ಕಳ್ಳರ ಹಾವಳಿ
Advertisement
Advertisement
ಇದಕ್ಕೆ ಉತ್ತರಿಸಿದ ಪೀಠ, ಅಂತಹ ಅರ್ಜಿಗಳು ಪ್ರಾಕ್ಸಿ ವ್ಯಾಜ್ಯಕ್ಕೆ ಸಮನಾಗಿವೆ. ಕರ್ನಾಟಕ ಪೊಲೀಸ್ ಮಹಾಸಂಘದ ಮೂಲಕ ರಾಜ್ಯದ ಅಧಿಕಾರಿಗಳು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಇದು ನಿಮ್ಮ ಕೆಲಸ ಅಲ್ಲ, ಹೈಕೋರ್ಟ್ ಆದೇಶದಿಂದ ಅನ್ಯಾಯವಾಗಿರುವ ವ್ಯಕ್ತಿಯೊಬ್ಬರು ನೇರ ಅರ್ಜಿ ಸಲ್ಲಿಸಿದ್ದರೇ ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ಎಲ್ಲ ಅರ್ಜಿಗಳನ್ನು ವಜಾ ಮಾಡಿತು. ಇದನ್ನೂ ಓದಿ: ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ