ಬೆಂಗಳೂರು: ಅವರು ಚೇಂಚ್ ಆಗ್ತಾರೆ ಇವರು ಚೇಂಜ್ ಆಗ್ತಾರೆ..! ಏಪ್ರಿಲ್ ಎಂಡ್‍ಗೆ ಆಗುತ್ತೆ. ಮೇ ಸೆಕೆಂಡ್ ವೀಕ್ ಆಗುತ್ತೆ..! ಹೀಗೆ ಅಲ್ಲೊಬ್ಬ ಇಲ್ಲೊಬ್ಬ ಬಿಜೆಪಿ ನಾಯಕರು ಮಾತಾಡ್ತಿದ್ರು. ಆದ್ರೀಗ ಬಿಜೆಪಿ ಹೈಕಮಾಂಡ್‍ನ ಟಾಪ್ 5 ಸ್ಥಾನದ ನಾಯಕ ಮಾತನಾಡಿದ್ದಾರೆ. ಹಾಗಾದ್ರೆ ಯಾರ ಬದಲಾವಣೆ? ಬಿ.ಎಲ್.ಸಂತೋಷ್ ಸುಳಿವು ಏನು? ಎಂಬ ಕುತೂಹಲ ಮನೆಮಾಡಿದೆ.
Advertisement
ಹೊಸತನಕ್ಕಾಗಿ ಗುಜರಾತ್‍ನಲ್ಲಿ ಬದಲಾವಣೆ ಅಂತೆ! ಹಾಗಾದ್ರೆ ಕರ್ನಾಟಕದಲ್ಲಿ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎನ್ನುವಂತಾಗುತ್ತಾ? ಇದು ‘ಸಂತೋಷ’ದ ಸುಳಿವೋ..? ಅಥವಾ ಉದಾಹರಣೆಗಷ್ಟೇ ಸೀಮಿತವೋ..? ಎಂಬ ಪ್ರಶ್ನೆಗಳು ಎದ್ದಿವೆ. ಡೆಲ್ಲಿಯಲ್ಲಿ ಟಾಪ್ 5 ನಾಯಕನ ಸ್ಥಾನದಲ್ಲಿ ಕುಳಿತವರ ಬಾಯಿಂದ ಬದಲಾವಣೆ ಮಾತು ಹೊರಬಿದ್ದಿದೆ. ನಿನ್ನೆ ಮೈಸೂರಿನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾತು ಗಂಭೀರ ಚರ್ಚೆ ಹುಟ್ಟುಹಾಕಿದೆ. ಇದು ಸಂತೋಷದ ಮಾತೋ..? ಅಥವಾ ಪಾಸಿಂಗ್ ಟಾಕ್ಸೋ..? ಅಥವಾ ಉದಾಹರಣೆಗೆ ಹರಿಬಿಟ್ಟದ್ದು..? ಎಂಬ ಪ್ರಶ್ನೆಗಳು ಬಿಜೆಪಿಗರ ತಲೆ ಹೊಕ್ಕು ಕೊರೆಯುವಂತೆ ಮಾಡಿದೆ. ಗುಜರಾತ್‍ನಲ್ಲಿ ಸಿಎಂ ಬದಲಾವಣೆಯಾದಗ ಇಡೀ ಮಂತ್ರಿ ಮಂಡಲವೇ ಬದಲಾಯ್ತು..! ಯಾವುದೇ ದೂರು ಅಂತಲ್ಲ, ಹೊಸತನ ತರಬೇಕು ಎಂಬ ಹೇಳಿಕೆಯಂತೂ ವಾಟ್ ನೆಕ್ಸ್ಟ್..? ಎನ್ನುವಂತೆ ಮಾಡಿದೆ. ಎರಡು ನಿಮಿಷ 12 ಸೆಕೆಂಡ್‍ಗಳ ವೀಡಿಯೋದಲ್ಲಿ ಯಾರಿಗೆಲ್ಲ ಪರೋಕ್ಷವಾಗಿ ಸಂದೇಶ ರವಾನಿಸಬೇಕು ಆ ಕೆಲಸವನ್ನು ಬಿ.ಎಲ್.ಸಂತೋಷ್ ಜಾಣತನದಿಂದ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ
Advertisement
Advertisement
ಯಾರ ನಾಯಕತ್ವ ಬದಲಾವಣೆ?
ಈ ನಡುವೆ ನಾಯಕತ್ವ ಬದಲಾವಣೆ ಅಂದ್ರೆ ಯಾರ ನಾಯಕತ್ವ..? ಸಂಘಟನೆಯ ನಾಯಕತ್ವವೋ..? ಸರ್ಕಾರದ ನಾಯಕತ್ವವೋ..? 50 ಸೀಟು 56 ವಯಸ್ಸಿನವರಿಗಷ್ಟೇ ಮುಖ್ಯಮಂತ್ರಿ ಕುರ್ಚಿನಾ..? ಎಂಬ ಚರ್ಚೆಗೂ ಸಂತೋಷ್ ಹೇಳಿಕೆ ಕಾರಣವಾಗಿದೆ. ಬಿ.ಎಲ್.ಸಂತೋಷ್ ಈ ಹೇಳಿಕೆಯ ಹಿಂದಿನ ಅಸಲಿಯತ್ತು ಏನು..? ಕರ್ನಾಟಕದಲ್ಲಿ ಕಡೇ ಆಟದ ಪ್ರಯೋಗ ಏನಾದರೂ ಇದೆಯೋ..? ಹೊಸತನ ಅಂದ್ರೆ ಸಂಪುಟ ಪುನಾರಚನೆವೋ..? ಬೇರೆನೋ..? ಎಂಬ ಕುತೂಹಲ ಹುಟ್ಟು ಹಾಕಿದೆ. ಬೆಂಗಳೂರಿಗೆ ಅಮಿತ್ ಷಾ ಆಗಮಿಸುವ ಎರಡು ದಿನ ಮೊದಲೇ ಸಂತೋಷ್ ಅವರ ಮಾತುಗಳ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ನಾನಾ ದೃಷ್ಟಿಕೋನಗಳಿಂದ ಬಿಜೆಪಿ ಒಳಗೆ ಚರ್ಚೆಗಳು ಶುರುವಾಗಿವೆ. ಸಂಘಟನೆಯ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಮುಂದಿನ ಚುನಾವಣೆಯ ಭವಿಷ್ಯದ ನಾಯಕತ್ವದಲ್ಲಿ ಬದಲಾವಣೆ ತರುವ ಮಾತುಗಳ ಎಂಬುದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ಕುಟುಂಬ ರಾಜಕಾರಣ ವಿರೋಧಿಸಿ ಸಿಎಂ ಕುರ್ಚಿಗೆ ವಯಸ್ಸಿನ ಮಿತಿಯನ್ನು ಫಿಕ್ಸ್ ಮಾಡಿ ಸಂತೋಷ್ ಆಡಿರುವ ಮಾತುಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ
Advertisement
ಒಟ್ನಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಬದಲಾವಣೆಯ ಬಲೂನ್ ಆಕಾಶದೆತ್ತರಕ್ಕೆ ಹಾರಾಡ್ತಿರೋದು ಕಮ್ಮಿ ಏನಲ್ಲ, ಆದ್ರೆ ಉತ್ತರವಿಲ್ಲದ ಪ್ರಶ್ನೆಗಳನ್ನು ತೇಲಿಬಿಟ್ಟು ರಾಜಕೀಯ ಮೇಲಾಟವನ್ನು ದೂರದಲ್ಲಿ ನಿಂತು ನೋಡುವ ತಂತ್ರಗಾರಿಕೆಗೂ ಕೊರತೆ ಇಲ್ಲ ಎನ್ನಬಹುದು. ಬದಲಾವಣೆಯ ಬಲೂನ್‍ಗೆ ಉಸಿರು ತುಂಬಿದವರು ಯಾರು..? ಆ ಬಲೂನ್ ಎಷ್ಟು ಎತ್ತರ ಎಷ್ಟು ಅವಧಿಗೆ ಹಾರಾಡುತ್ತೆ..? ಕಡೇ ಆಟದಲ್ಲಿ ಯಾರಿಗೆ ಗೆಲುವು ಸಿಗುತ್ತೆ..? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಇದನ್ನೂ ಓದಿ: ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ
– ರವೀಶ್.ಹೆಚ್.ಎಸ್. ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ