ಬೆಂಗಳೂರು: ದೇಶವನ್ನು ಲಾಕ್‍ಡೌನ್ ಮಾಡಿ ಇಂದಿಗೆ 16 ದಿನಗಳು ಕಳೆದಿವೆ. ಆದ್ರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಹೀಗಾಗಿ ಕೊರೊನಾ ತಡೆಗಾಗಿ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆ.
ಕೊರೊನಾ ಸೋಂಕಿತರ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದು. ಈ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಜನರಿಗೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದು. ಈ ಮೂಲಕ ಆ ಪ್ರದೇಶವನ್ನು ಸೀಲ್ ಮಾಡುವ ಮೂಲಕ ಕೊರೊನಾ ಚೈನ್ ಕಟ್ ಮಾಡುವುದು.
Advertisement
Advertisement
ರಾಜ್ಯದ ಕೊರೊನಾ ಹಾಟ್‍ಸ್ಪಾಟ್‍ಗಳಾದ 18 ಜಿಲ್ಲೆಗಳಲ್ಲಿ ಸೀಲ್ ಮಾದರಿಯ ನಿಯಮ ಜಾರಿ ಆಗುವ ಸಾಧ್ಯತೆ ಇದೆ. ಈ ಮೂಲಕ ಈವರೆಗೂ ಸರ್ಕಾರದ ನಿಯಮ ಪಾಲಿಸದ ಜನರಿಗೆ ಕಠಿಣ ಕ್ರಮಗಳ ಮೂಲಕ ಚಾಟಿ ಏಟು ನೀಡುವ ಸಾಧ್ಯತೆಗಳಿವೆ.
Advertisement
Advertisement
ಯಾವ ಜಿಲ್ಲೆಗಳು ಸೀಲ್ ಆಗಬಹುದು?
ಬೆಂಗಳೂರು ನಗರ- 63 (ಕೊರೊನಾ ಸೋಂಕಿತರ ಸಂಖ್ಯೆ), ಮೈಸೂರು-35, ದಕ್ಷಿಣ ಕನ್ನಡ-13, ಚಿಕ್ಕಬಳ್ಳಾಪುರ-08, ಕಲಬುರಗಿ-09, ಬೆಂಗಳೂರು ಗ್ರಾಮಾಂತರ-03, ಬೆಳಗಾವಿ-07, ಬಳ್ಳಾರಿ-06, ಬೀದರ್-10, ಉತ್ತರ ಕನ್ನಡ-9, ಕೊಡಗು – 01, ಮಂಡ್ಯ-04, ಬಾಗಲಕೋಟೆ-05, ಉಡುಪಿ-03, ದಾವಣಗೆರೆ-03, ತುಮಕೂರು-02, ಗದಗ-01 ಮತ್ತು ಧಾರವಾಡ – 1