3 ತಿಂಗಳ ಸಂಬಳ ಕೊಡಿ – ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

Public TV
1 Min Read
108 Ambulance services relaunched. 262 new ambulances added with advanced life support. Dinesh Gundu Rao 3

ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ಹೋರಾಟ ನಡೆಸಲು 108 ಅಂಬುಲೆನ್ಸ್‌ ಸಿಬ್ಬಂದಿ (Ambulance Smployees) ಮುಂದಾಗಿದ್ದಾರೆ.

3 ತಿಂಗಳಿನಿಂದ ನಮಗೆ ಸಂಬಳ (Salary) ಸಿಕ್ಕಿಲ್ಲ. ಹೀಗಾಗಿ ನ.16ರ ರಾತ್ರಿ 8 ಗಂಟೆಯ ಒಳಗಡೆ ಸಂಬಳವನ್ನು ಬಿಡುಗಡೆ ಮಾಡಬೇಕು. ಅಂದು ಸಂಬಳ ಪಾವತಿಯಾಗದೇ ಇದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘ, ಅಖಿಲ ಕರ್ನಾಟಕ 108 ಅಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್‌ ನೌಕರರರ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹಾಸನ| ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ಹುಚ್ಚಾಟ – ವಿದ್ಯಾರ್ಥಿಗಳ ವಿರುದ್ಧ ಕೇಸ್‌

108 AMBULANCE

ಆರೋಗ್ಯ ಕವಚ ಯೋಜನೆಯಲ್ಲಿ 2 ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ವೇತನದ ಸಮಸ್ಯೆ ಬಗೆಹರಿದಿಲ್ಲ. ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್‌ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಗಳು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿವೆ.

ನ.16 ಸಂಬಳವಾಗದೇ ಇದ್ದರೆ ರಾತ್ರಿಯಿಂದಲೇ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಸಂಘ ಹೇಳಿದೆ. ಅಷ್ಟೇ ಅಲ್ಲದೇ ಕೋರ್ಟ್‌ ಆದೇಶದ ಅನ್ವಯ ಪ್ರತಿ ತಿಂಗಳ 7 ರಂದು ವೇತನ ಪಾವತಿಯಾಗಬೇಕು. ಮುಂದೆ ವೇತನ ವಿಳಂಬವಾದರೆ 7ರ ರಾತ್ರಿಯಿಂದಲೇ ಅಂಬುಲೆನ್ಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

Share This Article