ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ಪಕ್ಷದ ವಿರುದ್ಧ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ ಭ್ರಷ್ಟಾಚಾರದ ಆರೋಪ ಮಾಡಿ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಮ್ಯಾ, ಬಿಜೆಪಿ ಪಕ್ಷ ಗುಜರಾತ್ ಉದ್ಯಮಿಯೊಬ್ಬರ ಮೂಲಕ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದ್ದು, ಆ ಉದ್ಯಮಿ ಯಾರು? ಬಿಜೆಪಿ ಉದ್ಯಮಿಯೊಂದಿಗೆ ಯಾವ ರೀತಿ ಒಪ್ಪಂದ ಮಾಡಿಕೊಂಡಿದೆ? ಬಿಜೆಪಿಯ ಭ್ರಷ್ಟಾಚಾರಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಸಹಾಯ ಪಡೆದುಕೊಳ್ಳಲಾಗುತ್ತಿದೆಯೇ? ಈ ಕುರಿತು ತಾತ್ಕಾಲಿಕ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಪ್ರತಿಕ್ರಿಯಿಸುತ್ತಾರಾ ಎಂದು ಪ್ರಶ್ನೆಗಳ ಸರಮಾಲೆಯನ್ನು ಎಸೆದಿದ್ದಾರೆ.
Who is this businessman from Gujarat bankrolling BJP’s bid to buy MLA’s in Karnataka? What deal has the BJP struck with him? Will public sector banks have to pick up the tab for BJP’s corruption? Will our temporary FM @PiyushGoyal respond?
— Ramya/Divya Spandana (@divyaspandana) May 16, 2018
ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸಲು ಮುಂದಾಗಿದೆ. ಸರ್ಕಾರ ರಚಿಸಲು ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತಿಲ್ಲ. ಕಪ್ಪು ಹಣ ಇಟ್ಟು ಕೊಂಡು ಪಕ್ಷದ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿದ್ದಾರೆ. ಆದರೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.