ಉಡುಪಿ: ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ (Sunil Kumar) ತಂದೆ, ಆರ್‌ಎಸ್‌ಎಸ್‌ನ (RSS) ಹಿರಿಯ ಮುಖಂಡ, ನಿವೃತ್ತ ಪ್ರಾಂಶುಪಾಲ ಎಂ. ಕೆ. ವಾಸುದೇವ ಕೊನೆಯುಸಿರೆಳೆದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಮಣಿಪಾಲ ಕೆಎಂಸಿ ಮತ್ತು ಟಿಎಂಎ ಪೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಪ್ರಮೋದಾ, ಪುತ್ರ ಸುನಿಲ್ ಕುಮಾರ್, ಸೊಸೆ ಪ್ರಿಯಾಂಕಾ, ಪುತ್ರಿ ಸುಕನ್ಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘ ಚಾಲಕರಾಗಿದ್ದರು. ವಾಸುದೇವ ಅವರಿಗೆ 87 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್ ಪಾಲಿಗೆ ಇಂದು ಬಿಗ್ ಡೇ
ಪ್ರಖರ ವಾಗ್ಮಿಯಾಗಿದ್ದ ವಾಸುದೇವ್, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರ ಅಂತಿಮ ವಿಧಿ ವಿಧಾನ ಶಾಸಕರ ಮನೆ ಕಲಂಬಾಡಿ ಪದವಿನಲ್ಲಿ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.