ಮುಂಬೈ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಫಿಟ್ನೆಸ್ ಬಗ್ಗೆ ಬಾಲಿವುಡ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಹೊಗಳಿದ್ದಾರೆ.
ಕರಿಷ್ಮಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಈ ಫೋಟೋ ನೋಡಿದ ಫಿಟ್ನೆಸ್ ಪ್ರೀಯೆ ಮಲೈಕಾ, ನಿಮ್ಮ ಅಬ್ಸ್ ಸೂಪರ್ ಎಂದು ಫೈಯರ್ ಎಮೋಜಿ ಕಳುಹಿಸಿದ್ದಾರೆ. ಮಲೈಕಾ ಅವರ ಸಹೋದರಿ ಅಮೃತಾ ಅರೋರಾ ಕೂಡ ನಾನು ನಿಮ್ಮ ಅಬ್ಸ್ ನೋಡುತ್ತೀದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್
View this post on Instagram
ಫೋಟೋದಲ್ಲಿ ಕರಿಷ್ಮಾ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ಅವರ ಅಬ್ಸ್ ಫಿಟ್ ಆಗಿದೆ. ಅದಕ್ಕೆ ಮಲೈಕಾ ನಿಮ್ಮ ಫಿಟ್ನೆಸ್ ಚೆನ್ನಾಗಿದೆ ಎಂದು ಇನ್‍ಸ್ಟಾಗಾಮ್ ನಲ್ಲಿ ಪ್ರಶಂಸಿದ್ದಾರೆ. ಈ ಫೋಟೋಗೆ ಕರಿಷ್ಮಾ, ನೀವು ಏನನ್ನು ಸಾಧಿಸುತ್ತೀರೋ ಅದರ ಮೂಲಕ ಬೆಳೆಯಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಕರಿಷ್ಮಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ಪ್ರತಿನಿತ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ವರ್ಕೌಟ್, ವಿಶೇಷದಿನಗಳು ಮತ್ತು ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಇದನ್ನೂ ಓದಿ: ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ
ಕರಿಷ್ಮಾ ಕಪೂರ್ ಬಾಲಿವುಡ್‍ನಲ್ಲಿ ನಮ್ಮದೆ ಛಾಪು ಮೂಡಿಸಿದ್ದು, 1991 ರಲ್ಲಿ ‘ಪ್ರೇಮ್ ಖೈದಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕರಿಷ್ಮಾ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಾಲ್ಕು ಫಿಲ್ಮ್‍ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರಿಷ್ಮಾ ಕೊನೆಯದಾಗಿ 2020ರ ವೆಬ್ ಸರಣಿ ಮೆಂಟಲ್‍ಹುಡ್‍ನಲ್ಲಿ ಕಾಣಿಸಿಕೊಂಡಿದ್ದರು.