ಈ ಫ್ಯಾಷನ್ ಜಮಾನದಲ್ಲಿ ಬಟ್ಟೆಯಿಂದ ಕಾಲಿಗೆ ಹಾಕುವ ಬೂಟಿನವರೆಗೂ ವಿವಿಧ ಟ್ರೆಂಡ್‌ಗಳು ಸದ್ದು ಮಾಡುತ್ತಿವೆ. ಇದೀಗ ಮಾಂಗಲ್ಯಕ್ಕೂ (Mangalya) ಹೊಸ ರೂಪ ಸಿಕ್ಕಿದೆ. ನೆಕ್ಲೆಸ್ ರೂಪದ ಮಾಂಗಲ್ಯಗಳು ಇದೀಗ ಟ್ರೆಂಡಿಯಾಗಿವೆ. ಹೌದು, ವಿವಾಹಿತೆಯರ ಸುಮಂಗಲಿತನದ ಪ್ರತೀಕ ಈ ‘ಕರಿಮಣಿ’ (Karimani) ಸರದ ಮಾಂಗಲ್ಯಗಳು ಇದೀಗ ನಾನಾ ಬಗೆಯ ನೆಕ್ಲೆಸ್ ರೂಪವನ್ನು ಪಡೆದಿವೆ.
ಇಂದಿನ ಜನರೇಷನ್‌ನ ಮದುವೆಯಾದ ಹೆಣ್ಣಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಂದಿವೆ. ಅದರಲ್ಲೂ ಫ್ಯಾಷನೆಬಲ್ ಆಗಿ ಧರಿಸಲು ಬಯಸುವ ಉದ್ಯೋಗಸ್ಥ ಮಹಿಳೆಯರ ಕತ್ತನ್ನು ಅಲಂಕರಿಸಿದೆ. ಮದುವೆಯಾದ ಮಹಿಳೆಯರು ಮೊದಲಿನಂತೆ ಉದ್ದುದ್ದದ ಮಾಂಗಲ್ಯ ಸರಗಳನ್ನು ಧರಿಸುವುದು ಕಡಿಮೆಯಾಗಿದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಆದಷ್ಟೂ ಲೈಟ್‌ವೈಟ್ ಹಾಗೂ ಸಿಂಪಲ್ ಆಗಿರುವಂತಹ ನೆಕ್ಲೇಸ್ ರೂಪದ ಕರಿಮಣಿ ಸರಗಳನ್ನು ಅಥವಾ ನೆಕ್ ಚೈನ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್ ಮಾಡಿದ ಶ್ರೀಲೀಲಾ
ಹಾಗಾಗಿ ದಶಕಗಳ ಹಿಂದೆಯೇ ಈ ಆಭರಣದ ಟ್ರೆಂಡ್ (Trend) ಕಾಲಿಟ್ಟಿತ್ತು. ಒಂದಿಷ್ಟು ವರ್ಗದ ಮಹಿಳೆಯರು ಮಾತ್ರ, ಅದರಲ್ಲೂ ಹೊರಗಡೆ ದುಡಿಯುವ ಮಹಿಳೆಯರು ಇವನ್ನು ಧರಿಸುತ್ತಿದ್ದರು. ಇಲ್ಲವೇ ಮಾಡೆಲಿಂಗ್ ಹಾಗೂ ಫ್ಯಾಷನ್ ಕ್ಷೇತ್ರದ ಯುವತಿಯರು ಇವನ್ನು ಅತಿ ಹೆಚ್ಚಾಗಿ ಧರಿಸುತ್ತಿದ್ದರು. ಕಾಲ ಕಳೆದಂತೆ ಇವುಗಳ ಬಳಕೆ ಹೆಚ್ಚಾಗತೊಡಗಿತು. ನೋಡಲು ಆಕರ್ಷಕವಾಗಿ ಕಾಣುವ ಮಾಂಗಲ್ಯದ ಕರಿಮಣಿ ನೆಕ್ಲೆಸ್ ಫೇಮಸ್ ಆಯಿತು. ಈ ಪರಿಣಾಮ, ಬರಬರುತ್ತಾ ಕರಿಮಣಿ ಮಾಂಗಲ್ಯಕ್ಕೆ ಸಿಂಪಲ್ ನೆಕ್ಲೆಸ್ ರೂಪ ದೊರಕಿತು.
ಒಂದೆಳೆ, ಎರಡೆಳೆ, ಕೆಲವು ಐದೆಳೆಯ ಕರಿಮಣಿ ಇರುವಂತಹ ಮಂಗಲಸೂತ್ರದ ನೆಕ್ಲೆಸ್‌ನಂತವು ಟ್ರೆಂಡಿಯಾಗಿವೆ. ಅವುಗಳಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಮಾರಾಟವಾಗುತ್ತಿರುವ ಮಾಂಗಲ್ಯಗಳೆಂದರೇ ಒಂದೆಳೆಯ ಕರಿಮಣಿ ಸೂತ್ರ. ಅದರಲ್ಲೂ ಸಿಂಪಲ್ ಡಿಸೈನ್‌ನವು, ಗೋಲ್ಡ್ ಚೈನ್, ಗೋಲ್ಡ್ ಬೀಡ್ಸ್ ಇರುವಂತಹ 18 ಇಂಚಿನ ಕರಿಮಣಿ ಮಾಂಗಲ್ಯ ಸರದ ನೆಕ್ಲೆಸ್‌ಗೆ ಬೇಡಿಕೆ ಹೆಚ್ಚಾಗಿದೆ. ಕರಿಮಣಿ ಮಾಂಗಲ್ಯದ ನೆಕ್ಲೆಸ್‌ಗಳಲ್ಲಿ ಇದೀಗ ರ‍್ಕೋನ್‌ನ ಪೆಂಡೆಂಟ್ ಇರುವಂತಹ ಸರಗಳು ಅಂದರೆ, ಚಿಕ್ಕ ನೆಕ್ಲೆಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಹರಳಿನ ಬಿಳಿ ಕಲ್ಲಿನ, ಅಮೆರಿಕನ್ ಡೈಮಂಡ್‌ನ ಒಂದರಿಂದ ಎರಡು ಇಂಚಿನ ನಾನಾ ವಿನ್ಯಾಸದ ಪೆಂಡೆಂಟ್‌ನ ಕರಿಮಣಿ ನೆಕ್ಲೆಸ್‌ಗಳು ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ.
ಈ ಕುರಿತು ಇಲ್ಲಿದೆ ಟಿಪ್ಸ್
ಬಂಗಾರೇತರ ಲೋಹದಲ್ಲೂ ಇವು ಲಭ್ಯ.
ಸಿಲ್ವರ್ ಜ್ಯುವೆಲರಿ ಡಿಸೈನ್‌ನಲ್ಲೂ ದೊರೆಯುತ್ತಿವೆ.
ಒಂದೆಳೆಯ ಸರದಂತಹ ನೆಕ್‌ಚೈನ್ ಡಿಸೈನ್‌ನಲ್ಲೂ ದೊರೆಯುತ್ತಿವೆ.