ಬೆಂಗಳೂರು: ‘ಕರಿಮಣಿ ಮಾಲೀಕ’ ಹಾಡು (Karimani Malika Song) ಸದ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ನಮ್ಮ ಮೆಟ್ರೋದಲ್ಲಿ (Namma Metro) ಯುವಕರು ಈ ಹಾಡು ಹಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆಯುಂಟುಮಾಡಿದ್ದಾರೆ.
‘ಕರಿಮಣಿ ಮಾಲೀಕ’ ಹಾಡು ಇತ್ತೀಚಿಗೆ ಟ್ರೆಂಡಿಂಗ್‌ನಲ್ಲಿರುವ ಹಾಡುಗಳಲ್ಲಿ ಒಂದಾಗಿದೆ. ಈ ಹಾಡಿಗೆ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನ ಕೂಡ ಮನಸೋತು ರೀಲ್ಸ್ ಮಾಡುತ್ತಿದ್ದಾರೆ. ಆದರೆ ಈ ಹಾಡು ಈಗ ನಮ್ಮ ಮೆಟ್ರೋಗೂ ಎಂಟ್ರಿ ಕೊಟ್ಟಿದೆ. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವಕರ ಗುಂಪೊಂದು ಈ ಹಾಡು ಹಾಡಿ ಜೋಶ್‌ನಲ್ಲಿ ಕಿರುಚಿದ್ದು, ಇದರಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರಿಗೆ ತೊಂದರೆ ಆಗಿದೆ. ಇದನ್ನೂ ಓದಿ: ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ
Advertisement
Advertisement
ಮೆಟ್ರೋದಲ್ಲಿ ಪ್ರಯಾಣಿಸುವ ಸಂದರ್ಭ ರೀಲ್ಸ್ ಮಾಡುವುದು ಅಥವಾ ಜೋರಾಗಿ ಸೌಂಡ್ ಮಾಡಬಾರದು ಎಂಬ ನಿಯಮ ಇದೆ. ಆದರೆ ಯುವಕರ ಗ್ಯಾಂಗ್ ಈ ನಿಯಮವನ್ನು ಮೀರಿ ‘ಕರಿಮಣಿ ಮಾಲೀಕ’ ಹಾಡು ಹಾಡಿ ಜೋರಾಗಿ ಕಿರುಚಿದ್ದಾರೆ. ನಿಯಮ ಗಾಳಿಗೆ ತೂರಿದ ಪ್ರಯಾಣಿಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ
Advertisement