ಚಾಮರಾಜಗರ: ಪತ್ನಿಯ ಕರಿಮಣಿ ರೀಲ್ಸ್‌ಗೆ (Reels) ಮನನೊಂದು ಪತಿ ಕುಮಾರ್ ಆತ್ಮಹತ್ಯೆ (Suicide) ಮಾಡಿಕೊಂಡು ಸಾವನ್ನಪ್ಪಿದ್ದ ಪ್ರಕರಣಕ್ಕೆ ಆತನ ಪತ್ನಿ (Wife) ಪ್ರತಿಕ್ರಿಯಿಸಿ ಗಂಡ ಸಾಲಬಾಧೆಯಿಂದ ಮೃತಪಟ್ಟಿದ್ದು ಎಂದು ಸ್ಟಷ್ಟನೆ ನೀಡಿದ್ದಾರೆ.
ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪ ಪ್ರತಿಕ್ರಿಯಿಸಿ, ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಹಿಂದಿನಿಂದಲೂ ನಾನು ರೀಲ್ಸ್ ಮಾಡಿದ್ದೇನೆ. ಅದು ನನ್ನ ಪತಿ ಕುಮಾರ್‌ಗೂ ತಿಳಿದಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಬಸ್ ಹತ್ತಿ, ಮೊಬೈಲ್ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದ್ದು ಹೇಗೆ?
Advertisement
Advertisement
ನನ್ನ ಮೇಲೆ ಅವರ ಕುಟುಂಬಸ್ಥರು ಸುಮ್ಮನೆ ಆರೋಪಿಸುತ್ತಿದ್ದಾರೆ. ನಿಜವಾಗಿಯೂ ನನ್ನ ಪತಿ ಸಾವಿಗೆ ಅವರು ಮಾಡಿಕೊಂಡಿದ್ದ ಸಾಲವೇ ಕಾರಣ. ಕುಮಾರ್ ದಿನ ನಿತ್ಯ ಕುಡಿಯುವ ಮತ್ತು ಇಸ್ಪೀಟ್ ಆಡುವ ಚಟವಿತ್ತು. ಈ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲವೆಂದು ಪತಿ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ವಾರ್ಡನ್, ತಾಲೂಕಾಧಿಕಾರಿ ವಿರುದ್ಧ ದೂರು ದಾಖಲು
Advertisement
Advertisement
ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ರೂಪಾಳ ಈ ರೀಲ್ಸ್ ನೋಡಿ ಕುಮಾರ್ ಸ್ನೇಹಿತರು ಆತನನ್ನು ರೇಗಿಸುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಕುಮಾರ್ ಕುಟುಂಬಸ್ಥರು ರೂಪಾ ಮೇಲೆ ಆರೋಪ ಮಾಡಿದ್ದರು. ಇದನ್ನೂ ಓದಿ: ಹೃದಯಾಘಾತ – ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಸಾವು!
ಈ ರೀಲ್ಸ್‌ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ಇದನ್ನೂ ಓದಿ: ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ