ಲೇಹ್: ಕಾರ್ಗಿಲ್ ಯುದ್ಧ ಹೀರೋ, ವೀರ ಚಕ್ರ ಪುರಸ್ಕೃತ ಸುಬೇದಾರ್ ಮೇಜರ್ ತ್ಸೆವಾಂಗ್ ಮೊರುಪ್ (Subedar Major Tsewang Murop) ಇದೀಗ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
40 ವರ್ಷದ ಸುಬೇದಾರ್ ಲೇಹ್ ಮೂಲದವರಾಗಿದ್ದು, 2ನೇ ಲಡಾಖ್ ಸ್ಕೌಟ್ಸ್ ಗೆ ಸೇರಿದವರಾಗಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಉನ್ನತ ಶ್ರೇಣಿಯನ್ನು ಪಡೆದಿರುವ ಇವರು ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದಾಗ ನಿಮು ಬಳಿ ಕಾರು ಸ್ಕಿಡ್ ಆಗಿ ಇಹಲೋಕ ತ್ಯಜಿಸಿದ್ದಾರೆ.
Kargil war hero Subedar Major Tsewang Murop, Vir Chakra lost his life in a road accident last night near Leh. pic.twitter.com/653DjBc1C4
— ANI (@ANI) April 2, 2023
14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಅವರ ಕುಟುಂಬವನ್ನು ಭೇಟಿಯಾಗಿ ಸೇನೆಯ ಪರವಾಗಿ ಸಾಂತ್ವನ ಹೇಳಿದರು. ಇದನ್ನೂ ಓದಿ: ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು