ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2ನೇ ಮಗನಿಗೆ ಆರು ತಿಂಗಳು ತುಂಬಿರುವ ಸಂತೋಷದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಪ್ರೀತಿ, ಖುಷಿ ಮತ್ತು ಧೈರ್ಯ ಎಂದೆಂದಿಗೂ ನಿನ್ನಲ್ಲಿರಲಿ, ನನ್ನ ಜೀವಕ್ಕೆ 6 ತಿಂಗಳ ಶುಭಾಶಯಗಳು ಎಂದು ಭಾವನಾತ್ಮಕವಾಗಿ ಬರೆದುಕೊಂಡು ಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇನ್ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ
Advertisement
Advertisement
ಕರೀನಾ ಕಪೂರ್, ಸೈಫ್ ಅಲಿ ಖಾನ್ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಪತಿ ಸೈಫ್ ಅಲಿ ಖಾನ್ರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದ ಕುಟುಂಬ, ಇದೀಗ ಎರಡನೇ ಮಗ ಜೇಹ್ಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ.
Advertisement
View this post on Instagram
ಮಾಲ್ಡೀವ್ಸ್ನಲ್ಲಿ ಗೆ ತೆರಳಿರುವ ಕರೀನಾ ಅಲ್ಲಿನ ಚಿತ್ರಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜೇಹ್ನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ಕರೀನಾ ತಿಳಿಸಿದ್ದಂತೆ ಜೇಹ್ನ ಮುಖವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕುರಿತು ತಾನಿನ್ನೂ ಯೋಚಿಸುತ್ತಿದ್ದೇನೆ ಎಂದಿದ್ದರು. ಆದರೆ ಅವರು ಬರೆದಿರುವ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಬಿಡುಗಡೆಯ ನಂತರ ಅವರು ಜೇಹ್ನ ಭಾವಚಿತ್ರವನ್ನು ಹಂಚಿಕೊಂಡಿದ್ದರು. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ಎರಡನೇ ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದಾರೆ.