BollywoodCinemaLatestMain Post

ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

ಕ್ಷಿಣ ಭಾರತದ ಸ್ಟಾರ್ ನಟ ಪ್ರಭಾಸ್ ಈಗಾಗಲೇ ಕೈತುಂಬಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರು ಪ್ರಭಾಸ್ ಡೇಟ್ಸ್ಗಾಗಿ ಕಾದು ಕೂರುವ ಸಂದರ್ಭ ನಿರ್ಮಾಣವಾಗಿದೆ. ಹೀಗೆ ಡೇ ಆ್ಯಂಡ್ ನೈಟ್ ಶೂಟಿಂಗ್ ಮಾಡುತ್ತಾ ಬ್ಯುಸಿಯಿರುವ ಪ್ರಭಾಸ್ ಹೊಸ ಸಿನಿಮಾಗೆ ಬಾಲಿವುಡ್ ದಿಲ್ಕಿ ಹೀರೋಯಿನ್ ಕರೀನಾ ಕಪೂರ್ ಜೊತೆಯಾಗುತ್ತಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್

`ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸದ್ಯ ಪ್ರಶಾಂತ್ ನೀಲ್ ಜತೆ ಸಲಾರ್, ಓಂ ರಾವತ್ ಜತೆ ಆದಿಪುರುಷ್, `ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ಜತೆ `ಪ್ರಾಜೆಕ್ಟ್ ಕೆ’ ಚಿತ್ರದ ಜೊತೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್‌ನಲ್ಲಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ. ಇಷ್ಟೇಲ್ಲಾ ಬ್ಯುಸಿಯಿರುವ ಪ್ರಭಾಸ್ ಸದ್ಯ `ಸ್ಪಿರಿಟ್’ ಚಿತ್ರದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಪ್ರಭಾಸ್‌ಗೆ ಜೊತೆ ಬಾಲಿವುಡ್ ಸ್ಟಾರ್ ಹೀರೋಯಿನ್ ಕರೀನಾ ಕಪೂರ್ ಕಾಣಿಸಿಕೊಳ್ತಿದ್ದಾರೆ.‌ ಇದನ್ನೂ ಓದಿ: ಆಲಿಯಾ ಭಟ್ ಬೇಬಿ ಬಂಪ್ ಫೋಟೋ ಲೀಕ್

ಡಾರ್ಲಿಂಗ್ ಪ್ರಭಾಸ್ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ಪ್ರಭಾಸ್ ಎದುರು ಪಡ್ಡೆಹುಡುಗರ ಕನಸಿನ ಸುಂದರಿ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಆದರೆ ಇಲ್ಲೊಂದು ಟ್ವೀಸ್ಟ್ ಇದೆ. ಹೀರೋಯಿನ್ ಬದಲಾಗಿ ಖಡಕ್ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರತಂಡ ಈ ಕುರಿತು ಮಾತುಕಥೆ ನಡೆಸಿದ್ದು, ಚಿತ್ರತಂಡ ಕಂಟೆಂಟ್ ಕೇಳಿ ಕರೀನಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ. ಇನ್ನು ಪ್ರಭಾಸ್ ಮತ್ತು ಕರೀನಾ ಕಾಳಗ ತೆರೆಯ ಮೇಲೆ ನೋಡೋದೆಂದೇ ಬಾಕಿ. ಪ್ರಭಾಸ್ ಮುಂದೆ ಗಟ್ಟಿ ಲೇಡಿ ವಿಲನ್ ಆಗಿ ಕರೀನಾ ಕಪೂರ್ ಹೇಗೆ ಮಿಂಚ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button