Connect with us

Bollywood

ಕೊರೊನಾ ಜಾಗೃತಿ- ಕರೀನಾ ಹಂಚಿಕೊಂಡ್ರು ಬಾಲ್ಯದ ಫೋಟೋ

Published

on

ಮುಂಬೈ: ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ತಮ್ಮ ಬಾಲ್ಯದ ಫೋಟೋ ಹಂಚಿಕೊಳ್ಳುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ಬಹುತೇಕ ಸ್ಟಾರ್ ಗಳು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕಾರಣ ಅಭಿಮಾನಿಗಳಿಗೆ ಕೊರೊನಾ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಇದೀಗ ಕರೀನಾ ಸಹ ಬಾಲ್ಯದ ಫೋಟೋ ಹಂಚಿಕೊಂಡು, ಯಾರಾದ್ರೂ ನಿಮ್ಮ ಕೈ ಕುಲುಕಲು ಬಂದ್ರೆ ನನ್ನ ರೀತಿಯಲ್ಲಿ ಮಾಡಿ ಎಂದಿದ್ದಾರೆ.

ಪುಟ್ಟ ಮಗುವಾಗಿರುವ ಫೋಟೋದಲ್ಲಿ ಕರೀನಾ, ತಮ್ಮ ಎರಡು ಕೈಗಳನ್ನು ಹಿಂದೆ ಮಾಡಿ ಬೇಡ, ಬೇಡ ಎಂಬರ್ಥದಲ್ಲಿ ಪೋಸ್ ನೀಡಿದ್ದಾರೆ. ಇದೀಗ ಶೇಕ್ ಹ್ಯಾಂಡ್ ಮಾಡಲು ಬಂದ್ರೆ ನಿಮ್ಮ ಕೈಗಳನ್ನು ಹಿಂದೆ ತೆಗೆದುಕೊಳ್ಳಿ ಎಂಬ ಸಲಹೆಯನ್ನು ಸೈಫ್ ಚೆಲುವೆ ನೀಡಿದ್ದಾರೆ.

ಕರೀನಾ ಕಪೂರ್ ಅಭಿನಯದ ‘ಅಂಗ್ರೆಜಿ ಮೀಡಿಯಂ’ ಸಿನಿಮಾ ಕೊರೊನಾ ಎಫೆಕ್ಟ್ ನಿಂದ ಗಲ್ಲಾ ಪೆಟ್ಟಿಗೆ ತುಂಬಿಕೊಳ್ಳುವಲ್ಲಿ ವಿಫಲವಾಗಿದೆ. ಸಿನಿಮಾ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಜನ ಚಿತ್ರಮಂದಿರಗಳತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.

Click to comment

Leave a Reply

Your email address will not be published. Required fields are marked *