Connect with us

Cinema

ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಇಷ್ಟವಿತ್ತು ಎಂದಿದ್ದ ಕರೀನಾ!

Published

on

ಮುಂಬೈ: ಬಾಲಿವುಡ್ ನ ಹಾಟ್ ಬ್ಯೂಟಿ ಕರೀನಾ ಕಪೂರ್, ನನಗೆ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಇಷ್ಟವಿತ್ತು ಎಂದು ಸಂದರ್ಶನವೊಂದರಲ್ಲಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು ಎಂಬುದು ಈಗ ಸುದ್ದಿಯಾಗಿದೆ.

2002 ರಲ್ಲಿ ಸಿಮಿ ಗರೆವಾಲ್ ಅವರ ಟಾಕ್ ಶೋ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ನಲ್ಲಿ ಕರೀನಾ ಕಪೂರ್ ನಿರೂಪಕಿಯೊಂದಿಗೆ ಮಾತುಕತೆ ನಡೆಸುತ್ತಾ ಆಗ ತಾವು ಸಿಂಗಲ್ ಆಗಿರುವುದಾಗಿ ಹೇಳಿದ್ದರು. ನಾನು ಪ್ರೀತಿಯಲ್ಲಿ ಬೀಳುವ ದಿನಕ್ಕಾಗಿ ಹಾಗೂ ನನ್ನಂತೆಯೇ ಇರುವ ಬಾಳಸಂಗಾತಿಯನ್ನ ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದರು. ಈ ಸಂದರ್ಭದಲ್ಲಿ ಸಿಮಿ ಗರೆವಾಲ್, ನೀವು ಈಗ ಯಾರನ್ನಾದ್ರೂ ಡೇಟಿಂಗ್ ಗೆ ಕರೆದೊಯ್ಯಬೇಕೆಂದರೆ ಯಾರನ್ನ ಆಯ್ಕೆ ಮಾಡಿಕೊಳ್ತೀರ ಎಂದು ಕೇಳಿದಾಗ ಕರೀನಾ ಏನು ಉತ್ತರಿಸಿದರು ಎಂಬುದನ್ನು ಊಹಿಸಿ? ಅವರು ಯಾವುದೇ ಬಾಲಿವುಡ್ ನಟನ ಹೆಸರನ್ನು ಹೇಳಲಿಲ್ಲ. ಬದಲಾಗಿ ಕರೀನಾ ಭಾರತದ ರಾಜಕಾರಣಿ ರಾಹುಲ್ ಗಾಂಧಿಯ ಹೆಸರನ್ನು ಹೇಳಿದ್ದರು.

ನಾನು ಇದನ್ನು ಹೇಳಬೇಕೋ ಬೇಡ್ವೋ ಗೊತ್ತಿಲ್ಲ. ಇದು ವಿವಾದಾತ್ಮಕ ವಿಷಯ. ನನಗೆ ರಾಹುಲ್ ಗಾಂಧಿ ಅವರ ಜೊತೆ ಡೇಟಿಂಗ್ ಮಾಡಲು ಇಷ್ಟ. ನಾನು ಅವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ. ದಿನಪತ್ರಿಕೆಯಲ್ಲಿ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರೊಂದಿಗೆ ಸಂಭಾಷಣೆ ನಡೆಸಲು ಇಷ್ಟಪಡುವೆ ಎಂದು ಹೇಳಿದ್ದರು.

ನನ್ನ ಕುಟುಂಬ ಚಿತ್ರರಂಗದ ಹಿನ್ನೆಲೆ ಹೊಂದಿದೆ ಮತ್ತು ಅವರು ರಾಜಕೀಯದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ಬಹುಶಃ ನಾವು ಆಸಕ್ತಿದಾಯಕ ಸಂಭಾಷಣೆ ಮಾಡಬಹುದೇನೋ ಎಂದು ಹೇಳಿದ್ದರು.

ಪ್ರಸ್ತುತ ಕರೀನಾ ಕಪೂರ್ ನಟ ಸೈಫ್ ಆಲಿ ಖಾನ್ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಮುದ್ದಾದ ಗಂಡುಮಗುವಿದೆ. ಕರೀನಾ ಸದ್ಯ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಮೂಲಕ ದೊಡ್ಡ ಪರದೆಯ ಮೇಲೆ ರೀಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

Click to comment

Leave a Reply

Your email address will not be published. Required fields are marked *