BollywoodCinemaLatestMain Post

ಕರೀನಾ ಕಪೂರ್- ಆಮೀರ್ ಖಾನ್ ಫನ್ನಿ ವಿಡಿಯೋ ವೈರಲ್

ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಮೋಡಿ ಮಾಡಿದ್ದಾರೆ. ʻಲಾಲ್ ಸಿಂಗ್ ಚಡ್ಡಾʼ ಸಿನಿಮಾಗಾಗಿ ಮತ್ತೆ ಒಂದಾಗಿರೋ ಈ ಜೋಡಿ, ಫನ್ನಿ ವಿಡಿಯೋ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ಹಲವಾರು ವಿಚಾರಗಳಿಂದ ಅಟ್ರಾಕ್ಟ್ ಮಾಡ್ತಿರೋ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಈಗ ಡಿಫಪರೆಂಟ್ ಆಗಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್‌ನ್ನು ಕೂಡ ಪರಿಚಯ ಮಾಡಲಾಗಿದೆ. ಅದಕ್ಕಾಗಿ ʻಲಾಲ್ ಸಿಂಗ್ ಚಡ್ಡಾʼ ಜೋಡಿ ಒಟ್ಟಿಗೆ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ.

ಕರೀನಾ ಮತ್ತು ಆಮೀರ್ ಹೊಸ ಫಿಲ್ಟರ್‌ನಲ್ಲಿ ಫನ್ನಿಯಾಗಿ ವಿಡಿಯೋ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ನನ್ನ ಹೀರೋ ಜತೆ ಫೆದರ್ ಚಾಲೆಂಜ್ ಎಂದು ಕ್ಯಾಪ್ಷನ್ ಕೊಟ್ಟು ಕರೀನಾ ಫನ್ನಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅನೇಕ ಸೆಲೆಬ್ರೆಟಿಗಳು ಈ ಹೊಸ ಫಿಲ್ಟರ್‌ನ್ನು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ʻಲಾಲ್ ಸಿಂಗ್ ಚಡ್ಡಾʼ ಪ್ರಚಾರ ಶುರುವಾಗಿದೆ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

ಹಾಲಿವುಡ್‌ನ ಫಾರೆಸ್ಟ್ ಗಂಪ್ ಚಿತ್ರದ ಹಿಂದಿ ರಿಮೇಕ್ ಆಗಿ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿ ಬಂದಿದೆ. ಆಮೀರ್ ಖಾನ್ ನಾಯಕಿಯಾಗಿ ಕರೀನಾ ನಟಿಸಿದ್ದಾರೆ. ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ಟಾಲಿವುಡ್ ನಟ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಇನ್ನು ಆಗಸ್ಟ್ 11ಕ್ಕೆ ಸಿನಿಮಾ ತೆರೆಕಾಣಲಿದೆ. ಚಿತ್ರವನ್ನ ಪ್ರೇಕ್ಷಕ ಪ್ರಭುಗಳು ಅಪ್ಪಿ ಒಪ್ಪಿಕೊಳ್ತಾರಾ ಅಂತಾ ಕಾದುನೋಡಬೇಕಿದೆ.

Leave a Reply

Your email address will not be published.

Back to top button