ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಸದ್ಯ ಪತಿ ಮತ್ತು ಮಕ್ಕಳೊಂದಿಗೆ ವಿದೇಶದ ಪ್ರವಾಸದಲ್ಲಿದ್ದಾರೆ. ಕರೀನಾ, ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುವ ನಟಿ ಮತ್ತೆ ಈಗ ತಾಯಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಈ ವೈರಲ್ ಸುದ್ದಿಗೆ ಕರೀನಾ ಕಪೂರ್ ರಿಯಾಕ್ಷನ್ ಕೊಟ್ಟಿದ್ದಾರೆ.
ಸೈಫ್ ಜೊತೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರು ಕರೀನಾ ಕಪೂರ್ಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಈಗಲೂ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ನಟಿಗೆ ಬಗ್ಗೆ ಹೊಸದೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಇತ್ತೀಚಿನ ಫೋಟೋ ಗಮನಿಸಿರುವ ನೆಟ್ಟಿಗರು ನೀವು ಮತ್ತೆ ತಾಯಿಯಾಗಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ. ಈ ಸುದ್ದಿಗೆ ಕರೀನಾ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ
Advertisement
ಇದು ಪಾಸ್ಟಾ ಮತ್ತು ವೈನ್ ಹುಡುಗರೇ, ಶಾಂತವಾಗಿರಿ. ನಾನು ಗರ್ಭಿಣಿಯಾಗಿಲ್ಲ ಉಫ್, ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನ ಸಂಖ್ಯೆಗೆ ತುಂಬಾ ಕೊಡುಗೆ ನೀಡಿದ್ದಾರೆ. ಈ ಮೂಲಕ ತಾವು ಮತ್ತೆ ಗರ್ಭಿಣಿಯಲ್ಲ ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.