ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ

Public TV
1 Min Read
Kareena Kapoor Bollywood

ಸೆಲಿಬ್ರೆಟಿಗಳು ಯಾವಾಗಲೂ ತಮ್ಮ ಬ್ಯೂಟಿ ಜೊತೆ ಡ್ರೆಸ್ ಕ್ವಾಲಿಟಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅದಕ್ಕೆ ಬಾಲಿವುಡ್ ಮಿಲ್ಕಿ ಬ್ಯೂಟಿ ಕರೀನಾ ಕಪೂರ್ ಸಹ ಹೊರತಲ್ಲ. ಡ್ರೆಸ್ ಕಲೆಕ್ಷನ್ ಗಾಗಿ ಬಾಲಿವುಡ್ ಅಂಗಳದಲ್ಲೇ ಇವರು ಫೇಮಸ್. ಇತ್ತೀಚೆಗೆ ಈ ನಟಿ ಎರಡು ಪೀಸ್ ಬಟ್ಟೆ ಧರಿಸಿದ್ದು, ಆ ಬಟ್ಟೆ ಹಣ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಬೆಲೆ ಕೇಳಿದ ಟ್ರೋಲಿಗರು ಕರೀನಾರನ್ನು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

kareena kapoor troll

ಲಕ್ಷ್ಮಿ ಲೆಹ್ರ್  ಇನ್‌ಸ್ಟಾಗ್ರಾಮ್‌ನಲ್ಲಿ ಕರೀನಾ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ  ಕರೀನಾ, ಹಳದಿ ಬಣ್ಣದ ಟೂ ಪೀಸ್ ಡ್ರೆಸ್ ಧರಿಸಿದ ಕರೀನಾ ಉಡುಪಿಗೆ ತಕ್ಕಂತೆ ಮ್ಯಾಚಿಂಗ್ ಸರವನ್ನು ಧರಿಸಿದ್ದಾರೆ. ಫೋಟೋದಲ್ಲಿ ಕರೀನಾ ಬೀಚ್ ಬಳಿ ಬಂಡೆಗಳ ನಡುವೆ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೊಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಡಿಸೈನ್ಗೆ ಕೆಲವರಿರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ಇನ್ನೂ ಕೆಲವರು ಈ ಡ್ರೆಸ್ಗೆ ಸಲ್ಲದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: 84 ಸಾವಿರ ರೂ. ಸೀರೆಯುಟ್ಟು ಮಿರಮಿರ ಮಿಂಚಿದ ಕೆಜಿಎಫ್ ಬೆಡಗಿ!

 

View this post on Instagram

 

A post shared by Lakshmi Lehr (@lakshmilehr)

ಅದು ಅಲ್ಲದೇ ಈ ನಡುವೆ ನೆಟ್ಟಿಗರು ಡ್ರೆಸ್ ಬೆಲೆ ಕೇಳಿ ಮತ್ತಷ್ಟು ಶಾಕ್ ಆಗಿದ್ದಾರೆ. ಈ ಡ್ರೆಸ್ ಬೆಲೆ 70 ಸಾವಿರ ರೂ. ಎಂದು ತಿಳಿದ ಅಭಿಮಾನಿಗಳು ಮತ್ತು ಟ್ರೋಲಿಗರು ಎರಡು ತುಂಡು ಬಟ್ಟೆಗೆ ಇಷ್ಟೊಂದು ದುಡ್ಡಾ ಎಂದು ಕಾಲೆಳೆದಿದ್ದಾರೆ. ಈ ಡ್ರೆಸ್ನಲ್ಲಿ ಅಂಥದ್ದೇನಿದೆ? ನೋಡೋಕೆ ಚೆನ್ನಾಗಿಯೂ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Kareena kapoor new

ಈ ಡ್ರೆಸ್ ಅನ್ನು ಲಕ್ಷ್ಮಿ ಲೆಹ್ರ್ ಡಿಸೈನ್ ಮಾಡಿದ್ದು, ಬಾಲಿವುಡ್ ನ ಬಹುತೇಕ ನಟಿಮಣಿಯರಿಗೂ ಇವರೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.

Share This Article