ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಫಾಲ್ಗುನಿ ಹಾಗೂ ಶೇನ್ ಪೀಕಾಕ್ ಅವರ ಇಂಡಿಯಾ ಕೌಚುರ್ ವೀಕ್ 2018ರ ಕಾರ್ಯಕ್ರಮದಲ್ಲಿ ಡಿಸೈನರ್ ತಾವು ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸುತ್ತಿದ್ದರು. ಈ ವೇಳೆ ನಟಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿ ಶೋ ಸ್ಟಾಪರ್ ಆಗಿದ್ದಾರೆ.
Advertisement
ಈ ಕಾರ್ಯಕ್ರಮದಲ್ಲಿ ಡಿಸೈನರ್ ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸಲಾಗುತ್ತಿತ್ತು. ಮಾಡೆಲ್‍ಗಳು ರ‍್ಯಾಂಪ್ ವಾಕ್ ಮಾಡಿದ ಮೇಲೆ ಕರೀನಾ ಕಪೂರ್ ರನ್ ವೇ ಮೇಲೆ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
Advertisement
Advertisement
ಕರೀನಾ ರ‍್ಯಾಂಪ್ ವಾಕ್ ಮಾಡುವಾಗ ಗೋಲ್ಡನ್ ಲೆಹೆಂಗಾ ಧರಿಸಿದ್ದರು. ಈ ಲೆಹೆಂಗಾ ಬರೋಬ್ಬರಿ 30 ಕೆ.ಜಿ ತೂಕವಿದೆ. ಈ ಲೆಹೆಂಗಾಗೆ ಕರೀನಾ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ ನ್ಯೂಡ್ ಗ್ಲಿಟರಿಂಗ್ ದುಪಟ್ಟಾ ಧರಿಸಿದ್ದರು. ಈ ಲೆಹೆಂಗಾ ಧರಿಸಿ ಕರೀನಾ ತಮ್ಮ ಕೂದಲನ್ನು ಕರ್ಲ್ ಮಾಡಿಕೊಂಡಿದ್ದರು.
Advertisement
ಈ ಲೆಹೆಂಗಾ ಧರಿಸಿ ನಾನು ಶೈನಿಂಗ್ ಸ್ಟಾರ್ ತರಹ ಕಾಣಿಸುತ್ತಿದ್ದೇನೆ. ಇದು ಪಾಲ್ಗುನಿ ಹಾಗೂ ಶಾನ್ ಪೀಕಾಕ್ ಅವರ ಕಾರ್ಯಕ್ರಮವಿಲ್ಲದಿದ್ದರೆ ನಾನು ಇಷ್ಟು ತೂಕವಿರುವ ಲೆಹೆಂಗಾವನ್ನು ಧರಿಸುತ್ತಿರಲಿಲ್ಲ. ನಾನು 10 ವರ್ಷಗಳಿಂದ ರ‍್ಯಾಂಪ್ ವಾಕ್ ಮಾಡುತ್ತಿದ್ದು, ಆದರೆ ಇದೇ ಮೊದಲ ಬಾರಿಗೆ ನಾನು 30 ಕೆ.ಜಿ ತೂಕದ ಉಡುಪು ಧರಿಸಿದ್ದೇನೆ ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.