Connect with us

Bollywood

ಶಾರೂಖ್ ಓದಿದ ಪತ್ರಕ್ಕೆ ಕರೀನಾ ಕೊಟ್ಟ ರಿಯಾಕ್ಷನ್ ಹೀಗಿತ್ತು-ಏನಿತ್ತು ಆ ಪತ್ರದಲ್ಲಿ?

Published

on

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಓದಿರುವ ಪತ್ರವೊಂದಕ್ಕೆ ಬೇಬೋ ಕರೀನಾ ಕಪೂರ್ ನೀಡಿರುವ ಎಕ್ಸ್ ಪ್ರೆಶನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಕರೀನಾ ಕಪೂರ್ ಮತ್ತು ಶಾರೂಖ್ ಖಾನ್ ಮಧ್ಯೆ ಇಂತಹ ಫನ್ನಿ ಘಟನೆಯೊಂದು ನಡೆದಿದೆ. ಶಾರೂಖ್ ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಕರೀನಾ ಮುಂದೆ ಕುಳಿತಿದ್ದರು. ಈ ವೇಳೆ ಶಾರೂಖ್ ನಿಮಗಾಗಿ ಪತ್ರವೊಂದು ಬಂದಿದ್ದು, ಅದನ್ನು ನಾನು ಓದುತ್ತಿದ್ದೇನೆ ಅಂತಾ ಓದಲು ಆರಂಭಿಸಿದರು.

ಚಿಕ್ಕ ಮಗುವಿನಂತೆ ತೊದಲುತ್ತಾ ಓದಿದಾಗ ಶಾರೂಖ್ ಹೇಳುವ ಯಾವ ಶಬ್ದಗಳು ಕರೀನಾರಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ. ಅರೇ ಇದೇನು ಓದುತ್ತಿದ್ದೀರಿ ಅಂತಾ ಕೇಳಿದಾಗ ನಿಮ್ಮ ಮಗ ತೈಮೂರ್ ಬರೆದಿರುವ ಪತ್ರ ಅಂತಾ ಹೇಳಿದರು.

ಕರೀನಾ ನೀವು ಓದುತ್ತಿರೋದು ಅರ್ಥ ಆಗ್ತಿಲ್ಲ ಅಂತಾ ಅಂದಾಗ ಶಾರೂಖ್, ನನಗೂ ನಿಮ್ಮ ತರಹ ಫೋಟೋ ತೆಗೆದುಕೊಳ್ಳವುದು ಅಂದ್ರೆ ಬಲು ಇಷ್ಟ. ಆದ್ರೆ ಸೆಲ್ಫಿ ತೆಗೆದುಕೊಳ್ಳುವಾಗ ನಿಮ್ಮಂತೆ ಪೌಟ್ ಮಾಡಲು ಸರಿಯಾಗಿ ಬರಲ್ಲ. ನಿಮ್ಮ ಹಾಗೆ ಸುಂದರ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಎಲ್ಲಿಯಾದ್ರೂ ಹೊರಗೆ ಹೋದರು ನನ್ನ ಡ್ರೆಸಿಂಗ್ ಸ್ಟೈಲ್ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ನನಗೆ ಮಾರ್ಗದರ್ಶನ ನೀಡುತ್ತಿರುವ ನನ್ನ ತಾಯಿಗೆ ಧನ್ಯವಾದ ಎಂದು ತೈಮೂರ್ ಬರೆದಿದ್ದಾನೆ ಅಂತಾ ತಿಳಿಸಿದ್ರು.

ಶಾರೂಕ್ ಪತ್ರ ಓದುತ್ತಿದ್ದಂತೆ ವೇರಿ ಫನ್ನಿ, ಈ ತೈಮೂರು ತುಂಬಾ ಫನ್ನಿಯಾಗಿದ್ದಾನೆ ಅಂತಾ ಅಂದ್ರು. ಏನ್ ಮಾಡೋದು ಆತ ನಿಮ್ಮ ಮುದ್ದಿನ ಮಗ, ನಾವೇನು ಹೇಳೋದಕ್ಕೆ ಆಗಲ್ಲ ಎಂದು ಶಾರೂಖ್ ಉತ್ತರಿಸಿದ್ರು.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಯ ಮುದ್ದಿನ ಮಗ ತೈಮೂರ್ ಅಲಿ ಖಾನ್ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತೈಮೂರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ತಾಯಿಯಾದ ಬಳಿಕ ಕರೀನಾ `ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಪ್ರದರ್ಶನಗೊಳ್ಳುತ್ತಿದೆ.

https://www.instagram.com/p/Bjz4p4qhJSi/?taken-by=srkking1

Click to comment

Leave a Reply

Your email address will not be published. Required fields are marked *