ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ ಕರೀನಾ ಇದೇ ಖುಷಿಯಲ್ಲಿ ಪತಿ ಸೈಫ್ ಅಲಿಖಾನ್ ಜೊತೆ ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ವಾರವಷ್ಟೇ ಸೈಫ್ ಅಲಿ ಖಾನ್ ಮತ್ತು ಪುತ್ರರಾದ ತೈಮೂರ್ ಹಾಗೂ ಜಹಾಂಗೀರ್ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದ ಕರೀನಾ, ಸದ್ಯ ಪತಿ ಸೈಫ್ ಜೊತೆ ಕುಳಿತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆದರು ಭಾರತೀಯರಿಗೆ ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ
- Advertisement
- Advertisement
ಫೋಟೋದಲ್ಲಿ ಸೈಫ್ ಅಲಿ ಖಾನ್ ಬಿಳಿ ಕುರ್ತಾ ಧರಿಸಿ ಕರೀನಾರನ್ನು ತೋಳಿನಿಂದ ಬಿಗಿದಪ್ಪಿ ಕುಳಿತುಕೊಂಡಿದ್ದು, ಇಬ್ಬರು ದ್ವೀಪದ ರಮಣೀಯ ಸೌಂದರ್ಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಕರೀನಾ ಕೆಂಪು ಬಣ್ಣದ ಹಾರ್ಟ್ ಐಮೋಜಿ ಹಾಕಿದ್ದಾರೆ. ಇದನ್ನೂ ಓದಿ: ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ನಟ ಅಜಯ್ ರಾವ್
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಓಂಕಾರ, ಏಜೆಂಟ್ ವಿನೋದ್, ಕುರ್ಬಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದು, ತಶಾನ್ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಕೆಲವು ವರ್ಷಗಳ ಡೇಟಿಂಗ್ ಬಳಿಕ ಇಬ್ಬರು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016ರಲ್ಲಿ ಈ ದಂಪತಿಗೆ ತೈಮೂರ್ ಅಲಿ ಖಾನ್ ಹುಟ್ಟಿದ, ಬಳಿಕ 2021ರ ಫೆಬ್ರವರಿಯಲ್ಲಿ ಜಹಾಂಗೀರ್ ಅಲಿ ಖಾನ್ ಜನಿಸಿದ್ದಾನೆ.