ಕಾರವಾರ: ಕಾರವಾರದ (Karwar) ಹಣಕೋಣ ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗೋವಾದಲ್ಲಿ (Goa) ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದಲ್ಲಿನ ದ್ವೇಷಕ್ಕೆ ಎರಡು ಜೀವಗಳು ಬಲಿಯಾಗಿವೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ ಹಣಕೋಣದಲ್ಲಿ ಪುಣೆಯ ಉದ್ಯಮಿಯ ಭೀಕರ ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಬೇಟೆಯಾಡಿದೆ. ಬಿಹಾರದ ಮೆಹೆಂದರ್ ಪುರ್‌ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಆರೋಪಿಗಳಾದರೆ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬಳಿಕ ಹೆಚ್ಚಿದ ಬೇಡಿಕೆ – ಹಾಸನಾಂಬ ಲಡ್ಡು ಪ್ರಸಾದಕ್ಕೂ ನಂದಿನಿ ತುಪ್ಪ
ಘಟನೆ ಏನು?
ಪುಣೆಯ ಉದ್ಯಮಿ ವಿನಾಯಕ ನಾಯ್ಕ ಹಾಗೂ ಗೋವಾದ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಃ ಕಾರವಾರದವರಾಗಿದ್ದು ಇಬ್ಬರೂ ಸಂಬಂಧಿಕರಾಗಿದ್ದರು. ಆದರೇ ಕೌಟುಂಬಿಕ ಕಲಹ ಇಬ್ಬರ ದಾಂಪತ್ಯ ಕೆಡುವಂತೆ ಮಾಡಿತ್ತು. ಇದಲ್ಲದೇ ವಿನಾಯಕ್ ನಾಯ್ಕ ಪತ್ನಿ ವೃಷಾಲಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿದ್ದು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಯಾಗಿತ್ತು.
ಆದರೆ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆಯ ಬದುಕನ್ನು ಹಾಳುಗೆಡಿಸಿತ್ತು. ಹೀಗಾಗಿ ಕಳೆದ ಆರು ತಿಂಗಳಿಂದ ತನ್ನ ಬಂಟರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದು, ತಾಯಿಯ ಶ್ರಾದ್ಧ ಹಾಗೂ ಊರಿನ ದೇವರ ಉತ್ಸವಕ್ಕೆ ಆಗಮಿಸಿದ್ದ ವಿನಾಯಕ್ ನಾಯ್ಕ ಮರಳಿ ಪುಣೆಗೆ (Pune) ತೆರಳಲು ಸಿದ್ದರಾಗಿದ್ದಾಗ ಸೆ.22 ಭಾನುವಾರ ಮುಂಜಾನೆ ಸ್ವಿಫ್ಟ್ ಕಾರಿನ ಮೂಲಕ ಬಂದ ಮೂರು ಜನ ಮುಸುಕುದಾರಿಗಳು ಮನೆಗೆ ನುಗ್ಗಿ ಮಚ್ಚು ಮತ್ತು ರಾಡ್‌ನಿಂದ ವಿನಾಯಕ್ ನಾಯ್ಕ ಹತ್ಯೆ ಮಾಡಿದರು. ತಡೆಯಲು ಬಂದ ಆತನ ಪತ್ನಿ ವೃಷಾಲಿಗೆ ತಲೆಗೆ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದನ್ನೂ ಓದಿ: Badlapur Encounter | ಆರೋಪಿ ತಲೆಗೆ ಗುಂಡಿಟ್ಟಿದ್ದು ಏಕೆ? – ಪ್ರಕರಣ ಟೈಮ್‌ಲೈನ್ ಕೊಡುವಂತೆ ʻಹೈʼಸೂಚನೆ!
ಇದೀಗ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೌಟುಂಬಿಕ ಕಲಹ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದ ಒಬ್ಬನೇ ಒಬ್ಬ ಬಿಜೆಪಿ ನಾಯಕನನ್ನು ತೋರಿಸಿದರೆ ಸನ್ಮಾನ: ಸಿಎಂ