ಬೆಂಗಳೂರು: ಬಾಲಿವುಡ್ ಮೋಹಕ ಬೆಡಗಿ ಸನ್ನಿಲಿಯೋನ್ ಎಂಟ್ರಿ ವಿರೋಧಿಸಿ ಕೈ ಕುಯ್ದುಕೊಂಡವರೇ ಇಂದು ಟಿಕೆಟ್ ಬುಕ್ ಮಾಡಿರುವುದು ಕನ್ನಡ ಸಂಘಟನೆಗಳ ಇಬ್ಬಗೆಯ ನೀತಿ ಕೊಂಚ ಅನುಮಾನ ಮೂಡಿಸಿದೆ.
ನವೆಂಬರ್ ಮೂರರಂದು ಬೆಂಗಳೂರಿಗೆ ಪಡ್ಡೆ ಹುಡುಗರಿಗೆ ಕಚಕುಳಿ ಇಡೋದಕ್ಕೆ ಸನ್ನಿಲಿಯೋನ್ ಮತ್ತೆ ಬರುತ್ತಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ನಡೆಯುವ ಸನ್ನಿ ಕಾರ್ಯಕ್ರಮ ನೋಡೋಕೆ ಇದೀಗ ಗೆ ಸನ್ನಿಲಿಯೋನ್‍ಗೆ ವಿರೋಧ ವ್ಯಕ್ತಪಡಿಸಿ ಟೌನ್‍ಹಾಲ್‍ನಲ್ಲಿ ಕೈ ಕುಯ್ದುಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಹುಡುಗರು ನೂಕು ನುಗ್ಗಲಲ್ಲಿ ನಿಂತು ಕಾರ್ಯಕ್ರಮದ ಟಿಕೆಟ್ ಖರೀದಿಸಿದ್ದಾರೆ.
Advertisement
Advertisement
ಹೊಸವರ್ಷದಂದು ಹಾಗೂ ಸನ್ನಿಲಿಯೋನ್‍ಗೆ ಕನ್ನಡ ಸಿನಿಮಾಗೆ ಭಾರೀ ವಿರೋಧ ವ್ಯಕ್ತಪಡಿಸಿ, ರೋಡ್ ರೋಡ್‍ನಲ್ಲಿ ಪ್ರತಿಭಟಿಸಿದ ಹುಡುಗರು ಈ ಬಾರಿ ಒಂದಲ್ಲ-ಎರಡಲ್ಲ ಬರೋಬ್ಬರಿ 235 ಟಿಕೆಟ್ ತೆಗೆದುಕೊಂಡಿದ್ದಾರೆ. ಶೇಷಮ್ಮ ಕನ್ನಡ ಹಾಡಿಗೆ ಕುಣಿದ್ರೆ ನೋಡೋಕೆ ನಮ್ಮದೇನು ಅಭ್ಯಂತರವಿಲ್ಲ. ಆಮೇಲೆ ರಘುದೀಕ್ಷಿತ್ ಕನ್ನಡ ಹಾಡು ಹಾಡ್ತವ್ರೆ. ಅದನ್ನೆಲ್ಲ ನೋಡೋಕೆ ಹೋಗ್ತಿವಿ ಅಂತಾ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ.
Advertisement
Advertisement
ಕರವೇ ಯುವಸೇನೆ ಅಧ್ಯಕ್ಷ ಹರೀಶ್ ಮಾಧ್ಯಮಗಳ ಜೊತೆ ಮಾತನಾಡಿ, ನಾವು ಕೂಡ 235 ಟಿಕೆಟ್ ಖರೀದಿಸಿದ್ದೇವೆ. ಯಾಕಂದ್ರೆ ಅಲ್ಲಿ ಕನ್ನಡ ಹಾಡುಗಳನ್ನು ಹಾಕುತ್ತಾರೆ ಅಂತೆ. ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಹಾಡು ಹಾಕ್ತಾರೆ ಅಂದ್ರೆ ನಮಗೂ ಬಹಳಷ್ಟು ಸಂತೋಷ ಆಗುತ್ತದೆ. ಹೀಗಾಗಿ ನಾವು ಕೂಡ ಅದನ್ನು ಕೇಳಲು ಹೋಗ್ತಾ ಇದ್ದೀವಿ. ಮತ್ತೆ ಜಾಗದಲ್ಲಿ ಸನ್ನಿಲಿಯೋನ್ ಬಂದ್ರೆ ನಮ್ಮ ಹೋರಾಟ ಇದ್ದೇ ಇರುತ್ತದೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv