ಬೆಂಗಳೂರು: ಇಂದು ನಡೆದ ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಕರೆ ಮಾಡಿ ಬೆಂಬಲ ನೀಡಿದರು. ಹೋರಾಟ ಸರಿ ಇದೆ, ಆದರೆ ನಾವು ಪ್ರತಿಭಟನೆಗೆ ಬರಲ್ಲ ಎಂದು ಹೇಳಿದ್ದಾರೆ ಎಂದು ಕರವೇ ನಾರಾಯಣಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ನಾರಾಯಾಣ ಗೌಡರು, ಒಕ್ಕಲಿಗ ಸಮುದಾಯ ಮೈಕೊಡವಿ ನಿಂತರೆ ಯಾರು ಎದುರಿಗೆ ನಿಲ್ಲೋಕೆ ಆಗಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಮಾನಸಿಕವಾಗಿ ಕುಗ್ಗೋಕೆ ಬಿಡಲ್ಲ. ಡಿಕೆಶಿಯವರಿಗೆ ನೈತಿಕ ಬೆಂಬಲಕ್ಕಾಗಿ ಈ ಹೋರಾಟ ನಡೆದಿದೆ. ಇಂದು ಸಣ್ಣ ಅಹಿಂಸಾತ್ಮಕ ಘಟನೆಯಾದ್ರೆ ನಾನೇ ಜವಾಬ್ದಾರನಾಗಬೇಕು ಎಂದು ಪೊಲೀಸರು ಬಾಂಡ್ ಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
Advertisement
ದ್ವೇಷದ ರಾಜಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮಾನಸಿಕವಾಗಿ ಕುಗ್ಗಿಸಬೇಡಿ. ಮುಂದಿನ ದಿನಗಳಲ್ಲಿಯೂ ನಿಮಗೂ ಅದೇ ರೀತಿಯ ಪರಿಸ್ಥಿತಿ ಬರಬಹುದು. ನಾನು ಭೇಟಿಯಾದಾಗ ಡಿಕೆಶಿಯವರೇ ನನಗೆ ಮಾನಸಿಕ ಸ್ಥೈರ್ಯ ತುಂಬಿದರು. ನಾನೇನು ತಪ್ಪು ಮಾಡಿಲ್ಲ, ಕಾನೂನಿನ ಮೇಲೆ ನಂಬಿಕೆ ಇದೆ. ಯಾರು ನನ್ನ ಬಂಧನವಾಗಿದೆ ಎಂದು ಎದೆಗುಂದಬೇಡಿ ಎಂದು ಧೈರ್ಯ ತುಂಬಿದರು ಎಂದರು.