ಬೆಂಗಳೂರು: ಬಾಲಿವುಡ್ ನ ಮೋಹಕ ನಟಿ ಸನ್ನಿ ಲಿಯೋನ್ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಇಂದು ನಗರದ ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು, ತಮ್ಮ ಕೈ ಕೊಯ್ದುಕೊಳ್ಳುವ ಮೂಲಕ ವೀರ ಮಹಾದೇವಿ ಚಿತ್ರಕ್ಕೆ ಸನ್ನಿಲಿಯೋನ್ ಬೇಡ. ಅವರು ಈ ಚಿತ್ರದಲ್ಲಿ ನಟಿಸಬಾರದು ಅಂತ ಆಗ್ರಹಿಸಿದ್ದಾರೆ. ಅಲ್ಲದೇ ರಕ್ತ ಚೆಲ್ಲುತ್ತೇವೆ ಹೊರತು ಸನ್ನಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
Advertisement
ಕೆಲ ದಿನಗಳ ಹಿಂದೆಯಷ್ಟೇ ಕರವೇ ಅವರು ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಸನ್ನಿ ಲಿಯೋನ್ ಹಾಗೂ ನಿರ್ಮಾಪಕ ಡಿ.ಸಿ ವಾಡಿ ಉದಯನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದೆ. ಹೀಗಾಗಿ ಈ ಚಿತ್ರದಲ್ಲಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದರು.
Advertisement
ವೀರ ಮಹಾದೇವಿ ಚಿತ್ರ ಪಂಚ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ರೆಡಿಯಾಗುತ್ತಿದೆ.
Advertisement
ತಮಿಳು ಲಕ್ಷ್ಮೀ ಮಹಾದೇವಿ ಚಿತ್ರಕ್ಕೆ ನೀಲಿ ಚಿತ್ರದ ನಟಿ ಸನ್ನಿ ಲಿಯೋನ್ ಆಯ್ಕೆ ವಿರೋಧಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಇಂದು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದ್ರು. ಮಹಾರಾಣಿ ಲಕ್ಷ್ಮಿ ಮಹಾದೇವಿ ಪಾತ್ರಕ್ಕೆ ಸನ್ನಿ ಲಿಯೋನ್ ಆಯ್ಕೆ ಖಂಡಿಸಿದ ಕಾರ್ಯಕರ್ತರು ಸನ್ನಿ ಲಿಯೋನ್ ಪ್ರತಿಕೃತಿ ಸುಟ್ಟು ಹಾಕಿ ಕೂಡಲೇ ನೀಲಿ ತಾರೆ ಸನ್ನಿ ಲಿಯೋನ್ ಪಾತ್ರದಿಂದ ಕೈಬಿಡುವಂತೆ ಆಗ್ರಹಿಸಿದರು.
ಇದೇ ವೇಳೆ ಕರವೇ ಉತ್ತರ ಕರ್ನಾಟಕ ಉಪಾಧ್ಯಕ್ಷ ಪುನೀತ್ ರೆಡ್ಡಿಯಿಂದ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ವಿ.ಸಿ ವಾಡಿ ಹಾಗೂ ಸನ್ನಿ ಲಿಯೋನ್ ಕನ್ನಡಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ಕನ್ನಡದ ಹೆಮ್ಮೆಯ ರಾಷ್ಟ್ರಕೂಟರ ಸತಿಸಾತ್ವಿಯಾದ ಮಹಾರಾಣಿ ವೀರಮಹಾದೇವಿ ಜೀವನಾಧಾರಿತ ಚಿತ್ರ ಇದಾಗಿದ್ದು, ಸತಿ ಸಾತ್ವಿಯ ಪಾತ್ರಕ್ಕೆ ನೀಲಿ ತಾರೆ ಸನ್ನಿ ಲಿಯೋನ್‍ಳನ್ನು ಕೂಡಲೇ ಚಿತ್ರದಿಂದ ಕೈ ಬಿಡಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Bengaluru: Members of Karnataka Rakshana Vedike (KRV) today staged a protest outside Town Hall against Sunny Leone & burnt her posters. They are opposing Sunny Leone's entry to the city and her playing the lead role in Kannada movie 'Veeramahadevi'. pic.twitter.com/d9r528531b
— ANI (@ANI) October 22, 2018