ಬೆಂಗಳೂರು: ಕನ್ನಡದ ರಕ್ಷಣೆಗೆ ಸರ್ಕಾರ ಯಾವತ್ತು ಬದ್ಧವಾಗಿದೆ. ಕನ್ನಡ ಸಂಘಟನೆ ನಾಳೆ ಕರೆ ಕೊಟ್ಟಿರುವ ಬಂದ್‍ನ್ನು ವಾಪಸ್ ತೆಗೆದುಕೊಂಡಿದೆ. ನಾಳೆ ಬಂದ್ ಇಲ್ಲ. ಎಲ್ಲರೂ ಕೂಡ ಎಂದಿನಂತೆ ವ್ಯಾಪಾರ ವ್ಯವಹಾರಗಳನ್ನು ನಡೆಸಬಹುದು ಎಂದಿದ್ದಾರೆ.
Advertisement
ಕನ್ನಡ ಸಂಘಟನೆಯ ಮುಖಂಡರೊಂದಿಗೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡದ ಹಿರಿಯ ಕಟ್ಟಾಳು ವಾಟಾಳ್ ನಾಗರಾಜ್ ಬಂದ್‍ಗೆ ಕರೆ ಕೊಟ್ಟಿದ್ರು. ಮೊನ್ನೆ ಸಹ ನಾನು ವಾಟಾಳ್ ಜೊತೆ ಮಾತನಾಡಿದ್ದೆ. ಇಂದು ನನ್ನ ಮನವಿಗೆ ಗೌರವ ಕೊಟ್ಟು ಬಂದ್ ಹಿಂಪಡೆದಿದ್ದಾರೆ. ನಾಳೆ ಬಂದ್ ಇರುವುದಿಲ್ಲ ವ್ಯಾಪಾರ ವ್ಯವಹಾರಗಳಿಗೆ ಯಾವುದೇ ತೊಡಕಾಗುವುದಿಲ್ಲ. ಕನ್ನಡಿಗರ ಗಡಿ, ಕನ್ನಡಿಗರ ರಕ್ಷಣೆಗೆ ನಾವು ಯಾವತ್ತು ಸಿದ್ಧ. ಎಂಇಎಸ್ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಬಂದ್ ವಾಪಸ್ ಪಡೆದ ಎಲ್ಲರಿಗೂ ಧನ್ಯವಾದಗಳು ಎಂದರು. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್
Advertisement
Advertisement
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು. ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ಹೇಳಿದರು. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ
Advertisement
ಇದೇ ವೇಳೆ ನನ್ನ ಜೀವನದಲ್ಲಿ ಈ ಬಾರಿಯ ಬಂದ್ ಮಾಡಲು ಹೋದಾಗ ತುಂಬಾ ಒತ್ತಡಗಳು ಬಂತು. ನಾಳೆ ರಾಜ್ಯದಲ್ಲಿ ಯಾವುದೇ ಬಂದ್ ಇರಲ್ಲ. ಎಂದಿನಂತೆ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಬಸ್ ಸಂಚಾರ ಸೇರಿ ಎಲ್ಲವೂ ಎಂದಿನಂತೆ ಇರಲಿದೆ ಎಂದು ವಾಟಾಳ್ ಹೇಳಿದರು.