BollywoodCinemaLatestMain PostTV Shows

ನಯನತಾರಾ ಹೆಸರು ನನ್ನ ಟಾಪ್ ಪಟ್ಟಿಯಲ್ಲಿ ಇರಲಿಲ್ಲ ಎಂದು ಅಚ್ಚರಿ ಮೂಡಿಸಿದ ಕರಣ್ ಜೋಹರ್

Advertisements

ರಣ್ ಜೋಹಾರ್ ವಿರುದ್ಧ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳು ಗರಂ ಆಗಿದ್ದರು. ಕರಣ್ ಕುರಿತು ಅಭಿಮಾನಿಗಳು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡುತ್ತಿದ್ದರು. ಕರಣ್ ಜೋಹರ್ ವ್ಯಕ್ತಿತ್ವದ ಬಗ್ಗೆಯೂ ಅವಹೇಳನ ಮಾಡುವಂತಹ ಕೆಲಸಗಳು ನಡೆದವು. ಕಾರಣ, ಕರಣ್ ಜೋಹರ್ ತನ್ನ ಶೋನಲ್ಲಿ ನಯನತಾರಾ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವುದಾಗಿತ್ತು.

ಕರಣ್ ಜೋಹರ್ ಶೋನಲ್ಲಿ ನಯನತಾರಾ ಅವರ ಹೃದಯದ ಗೆಳತಿ ಸಮಂತಾ ಭಾಗಿಯಾಗಿದ್ದರು. ಆಗ ಕರಣ್, ‘ದಕ್ಷಿಣದ ಟಾಪ್ ತಾರೆ ಯಾರು?’ ಎನ್ನುವ ಪ್ರಶ್ನೆಯನ್ನು ಸಮಂತಾಗೆ ಕೇಳುತ್ತಾರೆ. ಕ್ಷಣವೂ ಯೋಚಿಸದೇ ನಯನತಾರಾ ಹೆಸರು ಹೇಳುತ್ತಾರೆ ಸಮಂತಾ. ಆಗ ಕರಣ್, ಇವರ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಾರೆ. ಈ ಮಾತೇ ನಯನತಾರಾ ಅಭಿಮಾನಿಗಳನ್ನು ಕೆರಳಿಸಿತ್ತು. ಹಾಗಾಗಿ ಕರಣ್ ಮತ್ತು ಅವರ ಶೋಗಳನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರು. ಇದನ್ನೂ ಓದಿ:ಟೈಗರ್ ಶ್ರಾಫ್ ಪ್ರೀತಿಯ ಬಗ್ಗೆ ಮೌನ ಮುರಿದ ಜಾಕಿ ಶ್ರಾಫ್

ಈ ವಿವಾದಕ್ಕೆ ಸಂಬಂಧಪಟ್ಟಂತೆ ಕರಣ್ ಸ್ಪಷ್ಟನೆ ನೀಡಿದ್ದು, ನಾನು ನಯನತಾರಾ ಅವರಿಗೆ ಅವಮಾನ ಮಾಡಿಲ್ಲ. ನಾನು ಕೇಳಿದ ಪ್ರಶ್ನೆಗೆ ನನ್ನ ಪಟ್ಟಿಯಲ್ಲಿ ಆ ಉತ್ತರವಿರಲಿಲ್ಲ. ಅಲ್ಲದೇ, ಅವರು ಟಾಪ್ ಅನ್ನುವುದನ್ನು ಯಾವುದೇ ಸಂಸ್ಥೆ ಕೂಡ ಅಧಿಕೃತ ಮಾಡಿರಲಿಲ್ಲ. ಹೀಗಾಗಿ ನಾನು ಹಾಗೆ ಮಾತನಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ, ನಯನತಾರಾ ಅಭಿಮಾನಿಗಳು ಮಾತ್ರ ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ.

Live Tv

Leave a Reply

Your email address will not be published.

Back to top button