ಬಾಲಿವುಡ್ (Bollywood) ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಮತ್ತು ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ (Karan Johar) ಬದ್ಧವೈರಿಗಳು ಎಂದೇ ಗುರುತಿಸಿಕೊಂಡವರು. ಕರಣ್ ಬಗ್ಗೆ ಕಂಗನಾ ಈವರೆಗೂ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ನೇರಾನೇರ ವಾಗ್ದಾಳಿಯನ್ನೂ ನಡೆಸಿದ್ದಾರೆ. ಬಾಲಿವುಡ್ ರಾಜಕಾರಣದ ಬಗ್ಗೆ ಮಾತನಾಡುವಾಗೆಲ್ಲ ಕರಣ್ ಹೆಸರು ಎಳೆತಂದಿದ್ದಾರೆ. ಈ ನಡುವೆಯೂ ಅಚ್ಚರಿ ಎನ್ನುವಂತಹ ಹೇಳಿಕೆ ನೀಡಿದ್ದಾರೆ ಕರಣ್.
ಸದ್ಯ ಕಂಗನಾ ತಮ್ಮದೇ ನಿರ್ದೇಶನ, ನಟನೆ ಹಾಗೂ ನಿರ್ಮಾಣ ಮಾಡಿ ತಯಾರು ಮಾಡಿರುವ ಎಮರ್ಜನ್ಸಿ (Emergency) ಸಿನಿಮಾದ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇಂದಿರಾ ಗಾಂಧಿ ಅವರ ಎಮರ್ಜನ್ಸಿ ಕುರಿತಾದ ಸಿನಿಮಾ ಇದಾಗಿದ್ದು, ಹಲವು ಕಾರಣಗಳಿಂದ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾವನ್ನು ನೋಡಲು ತಾವು ಕಾತರದಿಂದ ಕಾಯುತ್ತಿರುವುದಾಗಿ ಕರಣ್ ಜೋಹಾರ್ ಹೇಳಿಕೊಂಡಿದ್ದಾರೆ. ಇದಕ್ಕೆ ಕಂಗನಾ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇದನ್ನೂ ಓದಿ:ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್‌ನಲ್ಲಿ ನಾಗ ಪಂಚಮಿ- ತಮನ್ನಾ, ಶ್ರೀನಿಧಿ ಶೆಟ್ಟಿ ಭಾಗಿ
‘ಕರಣ್ ಜೋಹಾರ್ ಅವರು ಈ ಹಿಂದೆ ಮಣಿಕರ್ಣಿಕಾ ಸಿನಿಮಾವನ್ನು ನೋಡುವ ಆಸೆ ವ್ಯಕ್ತ ಪಡಿಸಿದ್ದರು. ಅವರು ಹಾಗೆ ಹೇಳುತ್ತಿದ್ದಂತೆಯೇ ವಿವಾದವೇ ಜಾಸ್ತಿ ಆಯಿತು. ಹಲವರು ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದರು. ಏನೆಲ್ಲ ಹಿಂಸೆ ನೀಡಿದರು. ಈಗ ಎಮರ್ಜನ್ಸಿ ಸಿನಿಮಾ ನೋಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ನನಗೆ ಭಯವಾಗುತ್ತಿದೆ’ ಎಂದಿದ್ದಾರೆ ಕಂಗನಾ.
ತಮ್ಮ ಮತ್ತು ತಮ್ಮಂಥವರು ಸಿನಿಮಾಗಳು ಸೋಲುವುದಕ್ಕೆ ಕರಣ್ ಜೋಹಾರ್ ಕಾರಣ ಎಂದು ಈ ಹಿಂದೆ ಕಂಗನಾ ಹೇಳಿಕೊಂಡಿದ್ದರು. ಸ್ಟಾರ್ ಮಕ್ಕಳನ್ನು ಮಾತ್ರ ಕರಣ್ ಬೆಳೆಸುತ್ತಾರೆ. ಅವರದ್ದೇ ಆದ ಗುಂಪು ಇದೆ. ಅದಕ್ಕಷ್ಟೇ ಅವರು ಸಿನಿಮಾ ಮಾಡುತ್ತಾರೆ ಎಂದೆಲ್ಲ ಆರೋಪ ಮಾಡಿದ್ದರು. ಈಗ ಮತ್ತೆ ಕರಣ್ ಬಗೆಗಿನ ಆತಂಕವನ್ನು ಕಂಗನಾ ಹಂಚಿಕೊಂಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]