ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದರು. ಈಗ ಕರಣ್ ಬರ್ತಡೇಗೆ ಬಂದ ಅತಿಥಿಗಳಿಂದ ಶಾಕಿಂಗ್ ಅಪ್‌ಡೇಟ್ ಸಿಕ್ಕಿದೆ. ಕರಣ್ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಪ್ರತಿ ಬಾರಿ ಕರಣ್ ಜೋಹರ್ ಬರ್ತಡೇ ಪಾರ್ಟಿ ಆಯೋಜನೆ ಮಾಡಿದಾಗಲೂ ಒಂದಲ್ಲಾ ಒಂದು ಆರೋಪ ಏದುರಿಸುವ ಕರಣ್, ಈ ಬಾರಿ ಕೊರೊನಾ ಕಳಂಕ ಎದುರಾಗಿದೆ. ಇನ್ನು ಯಶ್ ರಾಜ್ ಸ್ಟುಡಿಯೋದಲ್ಲಿ ಕರಣ್ ಹುಟ್ಟುಹಬ್ಬಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್, ಕತ್ರಿನಾ, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೆಲ್ಲ ಒಟ್ಟುಗೂಡಿದ್ದರು. ಇದನ್ನೂ ಓದಿ: ʻಕೆಜಿಎಫ್ 2ʼ 50ನೇ ದಿನದ ಸೆಲೆಬ್ರೇಶನ್‌ನಲ್ಲಿ ಯಶ್ ಜೊತೆ ರಾಧಿಕಾ ಕಾಣಿಸಿಕೊಂಡಿದ್ದು ಹೀಗೆ
ಈಗ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಯಾರೆಲ್ಲ ಸೆಲೆಬ್ರಿಟಿಗೆ ಕೊರೊನಾ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇನ್ನು ಕರಣ್ ಜೋಹರ್ ಕೊರೊನಾ ಕಂಟಕ ಕಳಂಕದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.



